ಶಿರಸಿ: ತಾಲೂಕಿನ ವಿವಿಧಡೆ ಸೋಮವಾರ ಮಳೆ ಬಂದಿದ್ದು ಬೇಸಾಯಕ್ಕೆ ಸಂಕಷ್ಟ ತಂದಿದೆ. ಕೆಲವಡೆ ರವಿವಾರ ರಾತ್ರಿ ಮಳೆ ಬಂದರೆ, ತಾಲೂಕಿನ ಬಹುತೇಕ ಕಡೆ ಸೋಮವಾರ ಸಂಜೆ ಮಳೆ ಆರಂಭವಾಗಿದೆ.

ಈ ಅಕಾಲಿಕ ಮಳೆ ಜ.೮ರ ತನಕವೂ ಜಿಲ್ಲೆಯಲ್ಲಿ ಬೀಳುವ ಸಾಧ್ಯತೆ ಇದ್ದು, ಅಡಿಕೆ ಹಾಗೂ ಭತ್ತದ ಕೊಯ್ಲು ಮಾಡಿದ ರೈತರಿಗೆ ಇಕ್ಕಟ್ಟು ತಂದಿದೆ. ಭತ್ತ ಬೆಳೆ ಮುಗ್ಗಾಗಿ ಮೊಕೆ ಬರುವ ಮೂಲಕ ಹಾನಿಯಾಗುವ ಆತಂಕ ನಿರ್ಮಾಣವಾಗಿದೆ. ಅಡಿಕೆಗೆ ಮುಗ್ಗುವ ಆತಂಕ ತಂದಿದೆ. ಮೋಡದ ವಾತಾವರಣ ಕೂಡ ಕಳೆದ ಎರಡು ದಿನದಿಂದ ಇದ್ದು ಕಷ್ಟಕ್ಕೆ ತಂದಿದೆ. ಸಣ್ಣಗೆ ಮಳೆ ಇದ್ದರೂ ಗಾಳಿ, ಗುಡಗು ಇಲ್ಲ.
Leave a Comment