ಭಟ್ಕಳ: ವೆಂಕಟಾಪುರ ಹೊಳೆಯ ಸೇತುವೆ ಮೇಲಿಂದ ಕೋಳಿ ಅಂಗಡಿಕಾರರು ಕೋಳಿಯ ತಾಜ್ಯ,ವಸ್ತುಗಳನ್ನು ಹೊಳೆಗೆ ಹಾಕಿ ಮಲೀನ ಮಾಡುತ್ತಿದ್ದು, ಇವರ ವಿರುದ್ದ ಕ್ರಮ ಕೈಗೊಳ್ಳುವಂತೆ ಸಹಾಯಕ ಆಯುಕ್ತರಿಗೆ ಕ್ರೀಯಾಶೀಲ ಗೆಳೆಯರ ಸಂಘ ,ಭಟ್ಕಳ.ಹಾಗೂ ವೆಂಕಟಾಪುರ ಗ್ರಾಮಸ್ಥರು ಮಂಗಳವಾರದಂದು ಮನವಿ ಸಲ್ಲಿಸಿದ್ದಾರೆ.

ವೆಂಕಟಾಪುರ ಹೊಳೆಯ ರಾಷ್ಟ್ರೀಯ ಹೆದ್ದಾರಿಯ ಸೇತುವೆ ಮೇಲಿಂದ ವೆಂಕಟಾಪುರದ ಆಕ್ಕಪಕ್ಕದ ಹಾಗೂ ಭಟ್ಕಳದ ನಗರದ ಕೆಲವು ಕೋಳಿ ಅಂಗಡಿಕಾರರು ಕೋಳಿಯ ತಾಜ್ಯ ವಸ್ತುಗಳನ್ನು ತಂದು ಸೇತುವೆಯ ಮೆಲಿಂದ ಹೊಳೆಗೆ ಚೆಲ್ಲುವುದರಿಂದ ಹೊಳೆಯ ನೀರು ಮಲೀನವಾಗುತ್ತದೆ.ಮತ್ತು ಹೊಳೆಗೆ ತಾಜ್ಯ ವಸ್ತುಗಳನ್ನು ಚೆಲ್ಲುವಾಗ ರಸ್ತೆಯ ಮೇಲೆಯೂ ಹಾಕುತ್ತಿದ್ದಾರೆ. ಈ ತಾಜ್ಯ ವಸ್ತುಗಳಿಂದ ಸುತ್ತಮುತ್ತಲಿನ ಪ್ರದೇಶದವರೆಗೆ ದುರ್ವಾಸನೆ .ಬರುತ್ತಿದೆ,ಆದ್ದರಿಂದ ಕೋಳಿ. ತಾಜ್ಯ ವಸ್ತಗಳನ್ನು ಹಾಕುವವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ಮನವಿಯಲ್ಲಿ ಉಲ್ಲೇಸಿದ್ದಾರೆ.
ಈ ಸಂದರ್ಭದಲ್ಲಿ ಶ್ರೀಕಾಂತ ನಾಯ್ಕ, ಮನಮೋಹನ ನಾಯ್ಕ, ಪಾಂಡು ನಾಯ್ಕ, ರಮೇಶ ಖಾರ್ವಿ, ವೆಂಕಟೇಶ ಮೊಗೇರ, ಭವಾನಿಶಂಕರ ನಾಯ್ಕ, ದೀಪಕ ನಾಯ್ಕ, ವೆಂಕಟೇಶ ನಾಯ್ಕ, ಮಾಸ್ತಯ್ಯ ನಾಯ್ಕ, ಹಾಗೂ ಹೆಬ್ಳೆ ಪಂಚಾಯತ ಸದಸ್ಯೆ ಮಾದೇವಿ ನಾಯ್ಕ ಉಪಸ್ಥಿತರಿದ್ದರು .
Leave a Comment