ಭಟ್ಕಳ: ತಾಲೂಕಿನ ಬೆಳಕೆ ಗೇರು ಅಭಿವೃದ್ಧಿ ನಿಗಮಕ್ಕೆ ಸೇರಿರುವ ಗೇರು ತೋಟದ ಹುಲ್ಲುಗಾವಲು ಪ್ರದೇಶಕ್ಕೆ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡು ಆತಂಕ ಸೃಷ್ಟಿಸಿದ ಘಟನೆ ನಡೆದಿದೆ.ಬೆಂಕಿಯಿಂದಾಗಿ ಎಕರೆಗೂಆಧಿಕಹುಲ್ಲುಗಾವಲು ಪ್ರದೇಶಸುಟ್ಟು ಭಸ್ಮವಾಗಿದೆ.
ಕೆಲವು ಗೇರು ಮರಗಳ ಕೊಂಬೆ. ಎಲೆಗಳುಬೆಂಕಿಗೆ ಸುಟ್ಟು ಹೋಗಿರುವುದು ಕಂಡು ಬಂದಿದೆ. ಗೇರು ಮರಗಳ ನಡುವ ಬೆಂಕಿ ವ್ಯಾಪಿಸಿಕೊಳ್ಳುತ್ತಿದ್ದಂತೆಯೇ ಸುತ್ತಮುತ್ತಲಿನ ನಿವಾಸಿಗಳು ಆತಂಕಕ್ಕೆ ಒಳಗಾದರು. ಕೂಡಲೇ ಅಗ್ನಿಶಾಮಕ ದಳ ಸ್ಥಳಕ್ಕೆ ಧಾವಿಸಿ ಸ್ಥಳೀಯರ ಸಹಯೋಗದೊಂದಿಗೆ ಬೆಂಕಿ ನಂದಿಸಲು ನಡೆಸಿದ ಯತ್ನ ಸಫಲವಾಯಿತು. ಅರಣ್ಯಾಧಿಕಾರಿಗಳು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದರು. ಈ ಕುರಿತು ಪ್ರತಿಕ್ರಿಯೆ ನೀಡಿರುವ ಆರ್ ಎಫ್ಓ ಸವಿತಾ ದೇವಡಿಗ, ಬೆಂಕಿಗೆ ಸ್ಪಷ್ಟ ಕಾರಣಗಳು ಇನ್ನೂ ತಿಳಿದು ಬಂದಿಲ್ಲ. ಕೇವಲ ಹುಲ್ಲಿಗೆ ಬೆಂಕಿ ತಗುಲಿದೆಯೇ ಹೊರತೂ, ಗೇರು ಮರಗಳಿಗೆ ಹೆಚ್ಚಿನ ಹಾನಿಯಾಗಿಲ್ಲ ಎಂದು ತಿಳಿಸಿದ್ದಾರೆ.ಅರಣ್ಯ ಸಿಬ್ಬಂದಿಗಳಿಗೆ ತರಾಟೆ: ಗೇರು ಮರಗಳ ನಡುವಿನ ಬೆಂಕಿ ಮಾಹಿತಿ ಪಡೆದುಕೊಂಡು ಸ್ಥಳಕ್ಕೆ ಬಂದ ಅರಣ್ಯ ಇಲಾಖೆಯ ಸಿಬ್ಬಂದಿಗಳನ್ನು ಸ್ಥಳೀಯರು ತರಾಟೆಗೆ ತೆಗೆದುಕೊಂಡರು. ಬೆಂಕಿ ಈ ಬಗ್ಗೆ ಕೂಡಲೇ ಮಾಹಿತಿ ನೀಡಿದರೂ ಅರಣ್ಯ ಇಲಾಖೆಯ ಸಿಬ್ಬಂದಿಗಳು ತಡವಾಗಿ ಆಗಮಿಸಿದ್ದಾರೆ. ಅತಿಕ್ರಮಣದಾರರ ವಿಷಯದಲ್ಲಿಯಾದರೆ ಕೂಡಲೇ ತಂಡೋಪತಂಡವಾಗಿ ಬಂದು ಬಿಡುತ್ತೀರಿ? ಎಂದು ಸ್ಥಳೀಯರು ಆಕ್ರೋಶ ಹೊರ ಹಾಕಿದರು, ಆದರೆ ಇದನ್ನು ತಳ್ಳಿ ಹಾಕಿದ ಅರಣ್ಯ ಸಿಬ್ಬಂದಿಗಳು ಬೆಂಕಿಯ ಬಗ್ಗೆ ಮಾಹಿತಿ ಸಿಕ್ಕ ಕೂಡಲೇ ಹೊರಟು ಬಂದಿದ್ದೇವೆ, ವೃಥಾ ಆರೋಪ ಸಲ್ಲ ಎಂದು ತಿರುಗೇಟು ನೀಡಿದರು. ಇದರಿಂದಾಗಿ ಆರಣ್ಯ ಸಿಬ್ಬಂದಿಗಳು ಹಾಗೂ ಸ್ಥಳೀಯರ ನಡುವೆ ಕೆಲ ಕಾಲ ಮಾತಿನ ಚಕಮಕಿ ನಡೆಯಿತು. ಹಿರಿಯ ಅಧಿಕಾರಿಗಳ ಸೂಚನೆಯ ಮೇರೆಗೆ ಪರಿಸ್ಥಿತಿ ತಿಳಿಯಾಯಿತು.
Leave a Comment