ಉಡುಪಿ:- ಬಹುತೇಕರು ನನ್ನ ಮದುವೆ ಎಲ್ಲರಿಗಿಂತ ಡಿಫರೆಂಟಾಗಿ ಇರ್ಬೇಕು ಅಂತ ಹೊಸ ಹೊಸ ಯೋಚನೆ ಮಾಡಿ ಸಿದ್ದತೆ ಮಾಡೋದು ಮಾಮೂಲು,ಆದ್ರೆ ಉಡುಪಿ ಜಿಲ್ಲೆ ಕಾರ್ಕಳದಲ್ಲಿ ಯುವಕನೊಬ್ಬ ದ್ರೋಣ್ ಮೂಲಕ ತಾಳಿ ತರಿಸಿ ಕಟ್ಟಿದ್ದು ಸಖತ್ ವೈರಲ್ ಆಗಿದೆ.
ವೈರಲ್ ಆದ ವೀಡಿಯೋ ನೋಡಿ:-
ಕಾರ್ಕಳ ತಾಲೂಕು ಮೀಯಾರ್ ನಲ್ಲಿ ನಡೆದ ಮದುವೆಯ ಮಂಗಳಸೂತ್ರ ಡ್ರೋಣ್ ನಲ್ಲಿ ಹಾಕಿಕೊಂಡು ಬಂದಿದೆ. ನೆಂಟರಿಷ್ಟರನ್ನು ದಾಟಿಕೊಂಡು ಆಗಸದೆತ್ತರದಿಂದ ಹಾರಿ ಬಂದ ಡ್ರೋಣ್ ಕರಿಮಣಿ ಸರ ಹೊತ್ತು ತಂದಿತ್ತು.

ಡ್ರೋಣ್ ನೇರವಾಗಿ ಮದುವೆ ಮಂಟಪಕ್ಕೆ ಹಾರಿ, ಮದುಮಗನ ಪಕ್ಕ ನಿಂತಿದೆ. ವರ ಕರಿಮಣಿ ಸರ ತೆಗೆದುಕೊಂಡು ವಧುವಿಗೆ ಹಾಕಿದ್ದಾರೆ.
ಮೆಲ್ವಿನ್ ಮತ್ತು ವೆನಿಶಿಯಾ ಅವರ ಮದ್ವೆ ಈ ವೀಡಿಯೋ ತುಣುಕು ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗಿದ್ದು ಸದ್ದು ಮಾಡುತ್ತಿದೆ.
Leave a Comment