ಹೊನ್ನಾವರ; ಲಯನ್ಸ್ ಕ್ಲಬ್ ಹೊನ್ನಾವರ ಮತ್ತು ಅದರ ಅಂಗ ಸಂಸ್ಥೆ ಲಿಯೋ ಕ್ಲಬ್ ವತಿಯಿಂದ ಹಳದೀಪುರದ ಸಾಲಿಕೇರಿ ಗಣಪತಿ ದೇವಸ್ಥಾನದ ಎದುರಿಗೆ ರಸ್ತೆ ಬದಿಯಲ್ಲಿ ಬೀಡುಬಿಟ್ಟಿರುವ ವಸತಿರಹಿತ ಕೂಲಿಕಾರ್ಮಿಕರಿಗೆ, ಲಿಯೋ ಕ್ಲಬ್ ವತಿಯಿಂದ ವತಿಯಿಂದ 40 ಕುಟುಂಬಗಳಿಗೆ ಬೆಡ್ ಶೀಟ್, ಮತ್ತು ಟವೆಲ್, ವಿತರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಲಯನ್ಸ್ ಕ್ಲಬ್ ಅಧ್ಯಕ್ಷರಾದ ಲಯನ್ ಪ್ರದೀಪ್ ಶೆಟ್ಟಿ ಮಾತನಾಡಿ ಲಯನ್ಸ್ ಅಂಗ ಸಂಸ್ಥೆ ಲಿಯೋ ಕ್ಲಬ್ ಯುವ ಬಳಗಕ್ಕೆ ಸೇವಾ ಮನೋಭಾವವನ್ನು ಪ್ರೆರೆಪಿಸುವ ಕೆಲಸ ಮಾಡುತ್ತಿದೆ. ಇಂದು ರಸ್ತೆ ಬದಿಯಲ್ಲಿ ಗಾಳಿ ,ಮಳೆ, ಚಳಿಯಲ್ಲಿ ಬದುಕುವ ಬಡ ಕೂಲಿ ಕಾರ್ಮಿಕರಿಗೆ ಬ್ಲಾಂಕೆಟ ಮತ್ತು ಟವೆಲ್ ನೀಡುವ ಕೆಲಸ ಮಾಡುತ್ತಿದೆ ಇದು ಒಂದು ಉತ್ತಮ ಕಾರ್ಯವಾಗಿದೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.
ಲಯನ್ ಎಸ್,ಜೆ, ಕೈರನ ಕೂಲಿ ಕಾರ್ಮಿಕರನ್ನು ಉದ್ದೇಶಿಸಿ ಮಾತನಾಡಿ ಯಾವುದೇ ದುಶ್ಚಟಗಳಿಗೆ ಬಲಿಯಾಗದೆ ಬದುಕನ್ನು ಕಟ್ಟಿ ಕೊಳ್ಳುವ ಪ್ರಯತ್ನ ನಡೆಸುವ ಜೊತೆಗೆ, ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಿ ಶಿಕ್ಷಣವಂತರನ್ನಾಗಿ ಮಾಡಿ ಬಾಳಲಿ ಹೊಸ ಆಶೆ ಮತ್ತು ನಿರೀಕ್ಷೆಯನ್ನು ಕಾಣಬೇಕಿದೆ ಎಂದರು
ಈ ಸಂದರ್ಭದಲ್ಲಿ ಲಯನ್ ಕಾರ್ಯದರ್ಶಿ ಎಂ.ಜಿ.ನಾಯ್ಕ,ಲಿಯೋ ಚೇರ್ಮನ್ ರಾಜೇಶ್ ಸಾಳೆಹಿತ್ತಲ್, ಲಿಯೋ ಕ್ಲಬ್ ಅದ್ಯಕ್ಷ ರೆಷ್ಮಾ ಪ್ರಭು ಕಾರ್ಯದರ್ಶಿ ಸಂಕೇತ ಶೇಟ್,ಖಜಾಂಚಿ ಸ್ವಾತಿ ಶೇಟ್, ಸುರೇಶ ಎಸ್, ಎನ್.ಜಿ.ಭಟ್, ಲಯನ್ಸ್ ಸದಸ್ಯರು ಹಾಜರಿದ್ದರು.

Leave a Comment