ಭಟ್ಕಳ: ತಾಲೂಕಿನ ಪ್ರಸಿದ್ದ ಪ್ರವಾಸಿ ತಾಣವಾದ ಮುರ್ಡೇಶ್ವರದ ಮಾತೋಬಾರ ಶ್ರೀ ಮುರ್ಡೇಶ್ವರ ದೇವರ ರಥೋತ್ಸವ ಕಾರ್ಯಕ್ರಮ ಸಾವಿರಾರು ಭಕ್ತಾಧಿಗಳ ಹರ್ಷೋದ್ಗಾರಗಳ ನಡುವೆ ವಿಜೃಂಭಣೆಯಿಂದ ಮಂಗಳವಾರ ಸಂಜೆ ನಡೆಯಿತು.
ಜನವರಿ 14ರಿಂದ ರಿಂದ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿ ಜ19ರಂದು ಮಹಾರಥೋತ್ಸವ ಜರುಗಿತು. ಮಹಾರಥೋತ್ಸವದ ಅಂಗವಾಗಿ ಬೆಳಿಗ್ಗೆಯಿಂದಲೆ ದೇವಸ್ಥಾನದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಹೋಮ ಹವನಗಳನ್ನು ವಿಧಿವತ್ತಾಗಿ ನಡೆಸಲಾಯಿತು. ಮಧ್ಯಾಹ್ನ ದಿಂದ ಸಾವಿರಾರು ಭಕ್ತಾಧಿಗಳು ರಥಕಾಣಿಕೆ ನೀಡಿ ಪೂಜೆ ಪುರಸ್ಕಾರ ನೆರವೇರಿಸಿ ರಥೋತ್ಸವದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಸಂಜೆ 5.30ನಂತರ ರಥೋತ್ಸವಕ್ಕೆ ಚಾಲನೆ ನೀಡಲಾಯಿತು. ಮಾಹಾರಥವನ್ನು ದೇವಸ್ಥಾನದ ಕೆರೆಯ ಸುತ್ತ ಭಕ್ತಾದಿಗಳ ಜಯಘೋಷದೊಂದಿಗೆ ಎಳೆಯಲಾಯಿತು.
ರಥೋತ್ಸವದ ಸಂದರ್ಬದಲ್ಲಿ ಸೂಮಾರು 5ಸಾವಿರ ಭಕ್ತಾಧಿಗಳು ಪಾಲ್ಗೊಂಡಿದ್ದರು ಎನ್ನಲಾಗಿದೆ. ಶಾಸಕ ಸುನೀಲ ನಾಯ್ಕ, ತಹಸೀಲ್ದಾರ ರವಿಚಂದ್ರ , ದೇವಸ್ಥಾನದ ಟ್ರಸ್ಟಿಗಳು ಸೇರಿದಂತೆ ವಿವಿಧ ಗಣ್ಯರು ಭಾಗವಹಿಸಿದ್ದರು. ದೂರದಿಂದ ಬಂದಿರುವ ಭಕ್ತರ ಹಿತ ದೃಷ್ಟಿ ಕಾಪಾಡುವ ನಿಟ್ಟಿನಲ್ಲಿ ಪೊಲೀಸರು ಉತ್ತಮ ಬಂದೋಬಸ್ತ ನೀಡಿದ್ದರು. ಭಕ್ತರ ವಾಹನ ಪಾರ್ಕಿಂಗಿಗಾಗಿ ಪೇ ಎಂಡ್ ಪಾರ್ಕ ಸೌಲಭ್ಯ ಒದಗಿಸಲಾಗಿತ್ತು.
Leave a Comment