ಹೊನ್ನಾವರ: ತಾಲೂಕಾಡಳಿತ ಹಾಗೂ ತಾಲೂಕಿನ ವಿವಿಧ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ ಗಣರಾಜೊತ್ಸವ ಕಾರ್ಯಕ್ರಮಕ್ಕೆ ತಹಶೀಲ್ದಾರ ವಿವೇಕ ಶೇಣ್ವೆ ಧ್ವಜಾರೋಹನ ನೇರವೇರಿಸಿದರು.

ನಂತರ ಮಾತನಾಡಿ ಶಾಸಕಾಂಗ, ನ್ಯಾಯಾಂಗ, ಕಾರ್ಯಾಂಗದ ನೀತಿನಿಯಮದ ಸೂಚನೆ ಹಾಕಿಕೊಟ್ಟ ಸಮಗ್ರ ಮಾಹಿತಿಯ ಗುಚ್ಚವೇ ಭಾರತದ ಸಂವಿಧಾನವಾಗಿದೆ. ಶಾಂತಿ ಸುವ್ಯವಸ್ಥೆಯ ಸಂವಿಧಾನದ ದೊಡ್ಡ ಲಿಖಿತ ಸಂವಿಧಾನ ಎನ್ನುವ ಹೆಮ್ಮೆ ಇದೆ. ದೇಶದ ನಾಡು ನುಡಿ, ಸಂಸ್ಕøತಿಯನ್ನು ರಕ್ಷಿಸಿಕೊಳ್ಳುವುದು ಪ್ರತಿಯೊರ್ವ ನಾಗರಿಕರ ಕತ್ಯರ್ವವಾಗಿದೆ. ರಾಷ್ಟ್ರೀಯ ಐಕ್ಯತೆ ಸಾಧಿಸಲು ನಾವೆಲ್ಲರು ಒಂದಾಗಬೇಕಿದೆ. ದೇಶದ ಗಡಿಭಾಗದಲ್ಲಿ ಕಾಯುವ ಯೋಧರು ಹಾಗೂ ದೇಶದ ಪ್ರಜೆಗಳಿಗೆ ಅನ್ನ ನೀಡುವ ರೈತರನ್ನು ಸ್ಮರಿಸುವ ಜೊತೆ ಗೌರವಿಸೋಣ ಎಂದು ಗಣರಾಜ್ಯೋತ್ಸವದ ಶುಭಾಶಯ ಕೋರಿದರು. ನಂತರ ಪೋಲಿಸ್, ಹೊಮಗಾಡ್ರ್ಸ ಆಕರ್ಷಕ ಪಥಸಂಚಲನದ ಮೂಲಕ ಗೌರವ ಸಲ್ಲಿಸಲಾಯಿತು.
ಕೊರೋನಾ ಸಂಕಷ್ಟದ ಸಮಯದಲ್ಲಿ ವಾರಿಯರ್ಸರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಿ ಗೌರವಿಸಲಾಯಿತು. ಗಣರಾಜ್ಯೋತ್ಸವ ನಿಮಿತ್ತ ಇಲಾಖೆಯ ನಡುವಿನ ಕ್ರಿಕೇಟ್ ಪಂದ್ಯಾವಳಿಯಲ್ಲಿ ಪ್ರಥಮ ಸ್ಥಾನ ಪಡೆದ ಕಂದಾಯ ಇಲಾಖೆ, ಹಾಗೂ ದ್ವೀತಿಯ ಸ್ಥಾನ ಪಡೆದ ಶಿಕ್ಷಣ ಇಲಾಖೆಗೆ ಬಹುಮಾನ ವಿತರಿಸಲಾಯಿತು.
ವೇದಿಕೆಯಲ್ಲಿ ಪಟ್ಟಣ ಪಂಚಾಯತ ಅಧ್ಯಕ್ಷ ಶಿವರಾಜ ಮೇಸ್ತ, ಉಪಾಧ್ಯಕ್ಷೆ ಮೇಧಾ ನಾಯ್ಕ, ಪೋಲಿಸ್ ವೃತ್ತ ನಿರಿಕ್ಷಕರಾದ ಶ್ರೀಧರ ಎಸ್.ಆರ್. ಪಟ್ಟಣ ಪಂಚಾಯತ ಮುಖ್ಯಾಧಿಕಾರಿ ನೀಲಕಂಠ ಮೇಸ್ತ, ತಾಲೂಕ ಪಂಚಾಯತ ಕಾರ್ಯನಿರ್ವಹಣಾಧಿಕಾರಿ ಕರೀಂ ಅಸದಿ, ಕ್ಷೇತ್ರಶಿಕ್ಷಣಾಧಿಕಾರಿ ಡಿ.ಆರ್.ನಾಯ್ಕ, ನಿವೃತ್ತ ಉಪನ್ಯಾಸಕ ಡಾ.ಜಿ.ಪಿ.ಪಾಠಣಕರ್ ಉಪಸ್ಥಿತರಿದ್ದರು.
Leave a Comment