ಹೊನ್ನಾವರ: ಡಿಜಿಟಲ್ ವ್ಯಾಪಾರ ವಹಿವಾಟನ್ನು ಅಳವಡಿಸಿಕೊಂಡು ಕ್ಯಾಶಲೇಸ್ ಲಾಭ ಪಡೆದುಕೊಳ್ಳಲು ಪಟ್ಟಣ ವ್ಯಾಪ್ತಿಯ ಬೀದಿಬದಿ ವ್ಯಾಪರಸ್ಥರಿಗೆ ಪ್ರಧಾನಮಂತ್ರಿ ಆತ್ಮ ನಿರ್ಭರ ನಿಧಿಯ ಮೂಲಕ ಡಿಜಿಟಲ್ ವಹಿವಾಟಿನ ತರಬೇತಿಯ ವಿಶೇಷ ಕಾರ್ಯಗಾರ ಪಟ್ಟಣ ಪಂಚಾಯತ ಸಭಾಭವನದಲ್ಲಿ ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮದ ಕುರಿತು ಮಾಹಿತಿ ನೀಡಿದ ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ಎನ್.ಎಮ್.ಮೇಸ್ತ ಮಾತನಾಡಿ ಕೊರೋನಾ ಸಂಕಷ್ಟದಿಂದ ಆರ್ಥಿಕವಾಗಿ ಸಂಕಷ್ಟಕ್ಕೆ ಗುರಿಯಾಗಿರುದರಿಂದ ವ್ಯಾಪರಸ್ಥರು ಜೀವನ ನಡೆಸಲು ಸಮಸ್ಯೆ ಎದುರಾಗಿತ್ತು. ಕೇಂದ್ರ ಸರ್ಕಾರದ ಆತ್ಮ ಯೋಜನೆಯ ಮೂಲಕ ಪ್ರಥಮ ಹಂತದಲ್ಲಿ ೧೦ ಸಾವಿರ ಸಾಲವನ್ನು ೭% ಬಡ್ಡಿದರದಲ್ಲಿ ಸಾಲ ನೀಡಲಾಗಿದೆ. ಇದರ ಪ್ರಯೋಜನ ಪಡೆದುಕೊಳ್ಳಬೇಕು. ಅಲ್ಲದೇ ಸಮಯದಲ್ಲಿ ಸರಿಯಾಗಿ ಮರುಪಾವತಿಸಿ ಬಡ್ಡಿ ರಿಯಾಯತಿ ಪಡೆಯಬಹುದು. ಈಗಾಗಲೇ ವ್ಯಾಪಾರಿಗಳಿಗೆ ಅಂಕಿ ಅಂಶ ದೊರೆತಿದ್ದು ಸೌಲಭ್ಯಗಳು ಬಂದಲ್ಲಿ ಪ್ರಾಮಾಣಿಕವಾಗಿ ಹಂಚಿಕೆ ಮಾಡಲಾಗುವುದು ಎಂದರು. ಪಟ್ಟಣ ಪಂಚಾಯತ ಅಧ್ಯಕ್ಷ ಶಿವಾರಜ ಮೇಸ್ತ ಮಾತನಾಡಿ ಪ್ರಧಾನಮಂತ್ರಿ ಸ್ವನಿಧಿ ಯೋಜನೆ ಲಾಭ ಪಡೆದಿದ್ದು, ಸರಿಯಾದ ಸಮಯದಲ್ಲಿ ಮರುಪಾವತಿಸಿ ಹೆಚ್ಚಿನ ಸಾಲ ಪಡೆದು ಆರ್ಥಿಕ ಪ್ರಗತಿ ಸಾಧಿಸಬಹುದು ಎಂದು ಸಲಹೆ ನೀಡಿದರು. ಪಟ್ಟಣದ ವಿವಿಧ ಬ್ಯಾಂಕ್ ಪ್ರತಿನಿಧಿಗಳು ಬ್ಯಾಂಕಿಗ್ ಸೌಲಭ್ಯದ ಮಾಹಿತಿ ನೀಡಿದರು.ಜಾನ್ ಲೋಫಿಸ್ ಸ್ವಾಗತಿಸಿ, ವೆಂಕಟೇಶ ನಾಯ್ಕ ವಂದಿಸಿದರು.
Leave a Comment