ಹೊನ್ನಾವರ – ಮನೆಯೆದುರು ಮಕ್ಕಳೊಂದಿಗೆ ಆಟವಾಡುತ್ತಿರುವ ಸಂದರ್ಭದಲ್ಲಿ ಕಾಂಕ್ರೀಟ್ ರಿಂಗ್ ಬಿದ್ದು 6 ವರ್ಷದ ಚಿಕ್ಕ ಮಗುವೊಂದು ಮೃತಪಟ್ಟ ಹೃದಯವಿದ್ರಾವಕ ಘಟನೆ ತಾಲೂಕಿನ ಕೆರೆಕೋಣದಲ್ಲಿ ಸಂಭವಿಸಿದೆ.
ಮೃತಪಟ್ಟ ಬಾಲಕಿಯನ್ನು ಚಿಂತನಾ ರಾಜು ನಾಯ್ಕ (6) ಎಂದು ಗುರುತಿಸಲಾಗಿದೆ. ಶನಿವಾರ ಸಂಜೆ ಹೊತ್ತಲ್ಲಿ ಈಕೆ ತನ್ನ ಮನೆಯ ಎದುರೇ ಉಳಿದ ಮಕ್ಕಳೊಂದಿಗೆ ಆಟವಾಡುತ್ತಿರುವಾಗ ಯಾವುದೋ ಕೆಲಸಕ್ಕೆಂದು ಮಾಡಿ ಇಟ್ಟಿದ್ದ ಕಾಂಕ್ರೀಟ್ ರಿಂಗ್ ಮಗುವಿನ ಮೈಮೇಲೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದಳು. ತಕ್ಷಣ ಬಾಲಕಿಯನ್ನು ಚಿಕಿತ್ಸೆಗಾಗಿ ತಾಲೂಕಾಸ್ಪತ್ರೆಗೆ ಸಾಗಿಸಲಾಯಿತಾದರೂ ಮಾರ್ಗಮದ್ಯೆ ಮಗು ಕೊನೆಯುಸಿರೆಳೆದಳೆನ್ನಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Leave a Comment