ಹೊನ್ನಾವರ: ತಾಲೂಕಿನ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಜಂಬೊಳ್ಳಿಯಲ್ಲಿ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದ ಸುಮಂಗಲಾ ಭಟ್ ಇವರು ಅನಾರೊಗ್ಯದಿಂದ ನಿಧನರಾದರು. ಕುಮಟಾ ತಾಲೂಕಿನ ಕಲಲಬ್ಬೆ ನಿವಾಸಿಯಾಗಿರುವ ಸಿದ್ದಾಪುರ, ಮಾಗೋಡ್ ಭಾಗದಲ್ಲಿ ವೃತ್ತಿ ನಿರ್ವಹಿಸಿ ಕೆಲ ವರ್ಷದ ಹಿಂದೆ ಜಂಬೊಳ್ಳಿ ಶಾಲೆಗೆ ವರ್ಗಾವಣೆ ಆಗಿ ಸೇವೆ ಸಲ್ಲಿಸುತ್ತಿದ್ದರು. ಕಳೆದ ಒಂದು ವರ್ಷದಿಂದ ಅನಾರೊಗ್ಯದ ಮಧ್ಯೆ ಸೇವೆ ಸಲ್ಲಿಸುತ್ತಿದ್ದ ಇವರು ಪಾಲಕರು ಹಾಗೂ ವಿದ್ಯಾರ್ಥಿಗಳ ಮೆಚ್ಚುಗೆಗೆ ಪಾತ್ರರಾಗಿದ್ದರು. ಇವರ ಅಕಾಲಿಕ ನಿಧನಕ್ಕೆ ಕ್ಷೇತ್ರ ಶಿಕ್ಷಣಾಧಿಕಾರಿ ಡಿ.ಆರ್.ನಾಯ್ಕ, ಶಿಕ್ಷಕರ ಸಂಘದ ಅಧ್ಯಕ್ಷ ಎಂ.ಜಿ.ನಾಯ್ಕ ಹಾಗೂ ಪದಾಧಿಕಾರಿಗಳು, ಶಿಕ್ಷಕರು ಸಂತಾಪ ಸೂಚಿಸಿದ್ದಾರೆ.

Leave a Comment