ಹೊನ್ನಾವರ: ಮೀನುಗಾರ ಮುಖಂಡರು ಹಾಗೂ ಹೊನ್ನಾವರ ಪೋಟ್೯ ಪ್ರೈವೈಟ್ ಲಿಮಿಟೆಡ್ ಕಂಪನಿ ಅಧಿಕಾರಿಗಳ ನಡುವೆ ಉಪವಿಭಾಗಾಧಿಕಾರಿ ಭರತ್.ಎಸ್ ನೇತ್ರತ್ವದಲ್ಲಿ ನಡೆದ ಸಭೆ ತೀವ್ರ ಚರ್ಚೆ ನಡೆದು ಕೊನೆಗೆ ಜಿಲ್ಲಾಧಿಕಾರಿಗಳ ಮದ್ಯಪ್ರವೇಶಕ್ಕೆ ಚರ್ಚೆ ಎಡೆಮಾಡಿಕೊಟ್ಟಿತು.

ತಹಶಿಲ್ದಾರ ನೇತ್ರತ್ವದಲ್ಲಿ ಮಂಗಳವಾರ ಮೀನುಗಾರ ಮುಖಂಡರ ಸಭೆ ನಡೆದಾಗ ಬಂದರು ಇಲಾಖೆ ಅಧಿಕಾರಿಗಳು, ತಹಶಿಲ್ದಾರರ ಬಳಿ ಸೂಕ್ತ ದಾಖಲೆಗಳಿಲ್ಲದ ಕಾರಣ ಇಂದು ಸಭೆ ನಿಗದಿಯಾಗಿತ್ತು. ನಿನ್ನೆ ಕಂಪನಿ ಕೆಲಸ ಸ್ಥಗಿತಗೊಂಡಿತ್ತು.ಆದರೆ ಇಂದಿನ ಸಭೆಯು ತೀವ್ರ ಚರ್ಚೆ ಹಂತಕ್ಕೆ ತಲುಪಿತು. ಮಾಜಿ ಶಾಸಕ ಮಂಕಾಳ ವೈದ್ಯ ಉಪವಿಭಾಗಾಧಿಕಾರಿಯವರೊಂದಿಗೆ ವಾಗ್ವಾದ ನಡೆಸಿ ಮೀನುಗಾರರಿಗೆ ಯಾವುದೇ ಕಾರಣಕ್ಕು ಅನ್ಯಾಯವಾಗಲೂ ಬೀಡುವುದಿಲ್ಲ. ಆದೇಶವೇನೆ ಇದ್ದರು ನ್ಯಾಯದ ಪರವಾಗಿ ನಾವು ನಿಲ್ಲುತ್ತೆವೆ ಎಂದರು. ಮೀನುಗಾರ ಮುಖಂಡರಾದ ಗಣಪತಿ ತಾಂಡೇಲ್ , ರಾಜು ತಾಂಡೇಲ್ ಮತ್ತಿತರರು ಮಾತನಾಡಿ ಈಗಾಗಲೇ ಕಂಪನಿ ನಮ್ಮ ವಾಸಸ್ಥಳ ಆಕ್ರಮಿಸುವ ಹಂತ ತಲುಪಿದೆ.ಮರಗಿಡಗಳ ಮಾರಣಹೋಮವಾಗಿದೆ. ಜನಸಾಮಾನ್ಯರು ದಾಖಲೆ ಇದ್ದರು ಕಾಮಗಾರಿಗಳಿಗೆ ತೊಡಕುಂಟು ಮಾಡುವ ಅಧಿಕಾರಿಗಳು ಸ್ವತಃ ಸರ್ಕಾರಿ ಸ್ಥಳವನ್ನು ನಾಶ ಮಾಡಿದರು ಸುಮ್ಮನೆ ಕುಳಿತಿರುವುದು ಗಮನಿಸಿದರೆ ಇದರಲ್ಲಿ ಅಧಿಕಾರಿಗಳು ಶಾಮೀಲಾಗಿರುವ ಅನುಮಾನ ಮೂಡಿದೆ. ಖಾಸಗಿ ಕಂಪನಿಗೆ ಭದ್ರತೆ ನೀಡುವ ಪೊಲೀಸ್ ಇಲಾಖೆ ಮೀನುಗಾರರ ಕುಟುಂಬ ಅತಂತ್ರ ಸ್ಥಿತಿಯಲ್ಲಿದ್ದರು ನಮ್ಮ ಕಾಳಜಿ ಮಾಡುತ್ತಿಲ್ಲ. ನಮ್ಮ ಸಮಯ ವ್ಯರ್ಥ ಮಾಡದೇ ನ್ಯಾಯ ಒದಗಿಸುವ ಕಾರ್ಯಕ್ಕೆ ಅಧಿಕಾರಿಗಳು ಮುಂದಾಗಿ ಎಂದು ಆಕ್ರೋಶ ಹೊರಹಾಕಿದರು.
ಪೊರ್ಟ ಇಲಾಖೆಯ ಸಿಇಒ ಮಾತನಾಡಿ ನಾವು ಸರ್ಕಾರದ ಆದೇಶದಂತೆ ಕಾರ್ಯ ನಿರ್ವಹಿಸುತ್ತೇವೆ ಎಂದರು.
ಉಪವಿಭಾಗಾಧಿಕಾರಿ ಭರತ್.ಎಸ್ ಮಾತನಾಡಿ ನಾವು ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿ ಮುಂದಿನ ನಿರ್ಧಾರ ತೆಗೆದುಕೊಳ್ಳುವ ಬಗ್ಗೆ ಸಭೆಯಲ್ಲಿ ತಿಳಿಸಿದರು.
ನಂತರ ಮಾದ್ಯಮದವರೊಂದಿಗೆ ಮಾಜಿ ಶಾಸಕ ಮಂಕಾಳ ವೈದ್ಯ ಮಾತನಾಡಿ ಕಂದಾಯ ಇಲಾಖೆಯಿಂದ ಕಾಮಗಾರಿಗೆ ಇನ್ನೂ ಸ್ಥಳ ಹಸ್ತಾಂತರವಾಗಿಲ್ಲ ಕಂದಾಯ ವಸೂಲಿ ನಡೆಸಿದೆ. ಅರಣ್ಯ ಇಲಾಖೆಯ ಸ್ಥಳವು ಇದೆ ಎನ್ನುತ್ತಾರೆ. ಕಂಪನಿ ಉದ್ದೇಶ ಜನರಿಗೆ ಮೋಸ ಮಾಡುವುದು. ಇದಕ್ಕೆ ಅಧಿಕಾರಿಗಳು ರಾಜಕಾರಣಿಗಳು ಸಹಕಾರ ಮಾಡುತ್ತಿದ್ದಾರೆ. ಇದು ಬಹಳ ಅನ್ಯಾಯ. ಹನ್ನೊಂದು ವರ್ಷದಿಂದ ಅವರು ತೆಗೆದುಕೊಂಡ ಬಂದರು ಅಭಿವೃದ್ಧಿ ಹಣ ಸರ್ಕಾರಕ್ಕೆ ವಾಪಸ್ ಕಳಿಸಿದ್ದಾರೆ. ಮೀನುಗಾರಿಕೆಗೆ ತೊಂದರೆಯಾಗುತ್ತಿದೆ. ಭರವಸೆ ನೀಡಿದಂತೆ ನಡೆದಿಲ್ಲ. ಅಳಿವೆಯಿಂದ ಮೀನುಗಾರಿಕೆ ನಡೆಸಲು ಸಾಧ್ಯವಾಗುತ್ತಿಲ್ಲ. ಇಲ್ಲಿ ಪ್ರತಿವರ್ಷ ಬೋಟ್ ಮುಳುಗಡೆಯಾಗುತ್ತದೆ ಜನ ಸಾಯುತ್ತಿದ್ದಾರೆ ಕಷ್ಟಪಡುತ್ತಿದ್ದಾರೆ. ಅಳಿವೆ ಹೋಗಿ ಸಮುದ್ರದಂಡೆಯ ಅತಿಕ್ರಮಣ ಮಾಡುತ್ತಿದ್ದಾರೆ. ಯಾವುದೇ ಕಾಗದಪತ್ರ ಕಂಪನಿ ಅವರು ಹತ್ತಿರ ಇಲ್ಲ.ಆದರು ರಸ್ತೆ ಕಾಮಗಾರಿ ನಡೆಸುತ್ತಿದ್ದಾರೆ. ಇದಕ್ಕೆ ನೇರ ಹೊಣೆ ಸರ್ಕಾರ ಅಲ್ಲಿಂದಲೇ ಉತ್ತರ ಸಿಗಬೇಕು. ಅಧಿಕಾರಿಗಳು ,ಕಂಪನಿಯವರು ತಮ್ಮದೇ ದರ್ಬಾರ್ ನಡೆಸುತ್ತಿದ್ದಾರೆ. ಸರ್ಕಾರದ ಮಟ್ಟದಲ್ಲಿ ಇದು ಹತ್ತು ನಿಮಿಷದ ಕೆಲಸ. ಎಲ್ಲರೂ ಸೇರಿ ಖಾಸಗಿ ಕಂಪನಿಗೆ ಸಹಾಯ ಮಾಡುತ್ತಿದ್ದಾರೆ. ಸಾರ್ವಜನಿಕ ರಸ್ತೆ ಕಂಪನಿಯವರು ಮಾಡುತ್ತಿದ್ದಾರೆ. ಆದರೆ ಇದು ಸರ್ಕಾರ ಮಾಡಬೇಕು. ಪ್ರೈವೇಟ್ ಕಂಪನಿಯ ವಿರುದ್ದ ಈ ಹಿಂದೆ ಪ್ರತಿಭಟನೆ ಕೈಗೊಂಡ ಸಂದರ್ಭದಲ್ಲಿ ಶಾಸಕರು ಬಂದಿದ್ದರು.ಮೀನುಗಾರರಿಗೆ ನ್ಯಾಯ ಒದಗಿಸುವ ಭರವಸೆ ನೀಡಿದ್ದರು. ಆದರೆ ಈಗ ಎರಡುವರೆ ಕಿಲೋಮೀಟರ್ ರಸ್ತೆ ಮಾಡಿಸಲು ಅವಕಾಶ ಮಾಡಿಕೊಟ್ಟಿದ್ದಾರೆ. ಸರ್ಕಾರ, ಅಧಿಕಾರಿ,ಜನಪ್ರತಿನಿಧಿಗಳು ಶಾಮೀಲಾಗಿ ಕೆಲಸ ಮಾಡಲು ಅವಕಾಶ ನೀಡುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.
ಮೀನುಗಾರ ಮುಖಂಡ ಗುರುದಾಸ ಬಾನಾವಳಿಕರ ಮಾತನಾಡಿ ತಹಶಿಲ್ದಾರ ನೇತ್ರತ್ವದಲ್ಲಿ ಅಧಿಕಾರಿಗಳು ನಿನ್ನೆ ಸಭೆ ಕರೆದಾಗ ಅಧಿಕಾರಿಗಳ ಬಳಿ ಸೂಕ್ತ ದಾಖಲೆಗಳಿಲ್ಲದ ಕಾರಣ ಇಂದು ಸಭೆ ನಿಗದಿಯಾಗಿತ್ತು. ನಿನ್ನೆ ಕಂಪನಿ ಕೆಲಸ ಸ್ಥಗಿತಗೊಂಡಿತ್ತು. ಆದರೆ ಇಂದು ಸಭೆ ಪೂರ್ವದಲ್ಲಿ ಕಂಪನಿ ಕಾಮಗಾರಿ ಆರಂಭವಾಗಿದೆ. ಇದು ಜನಪ್ರತಿನಿಧಿ, ಸರ್ಕಾರದ ಅಧಿಕಾರಿಗಳ ಕುಮ್ಮಕ್ಕಿನಿಂದ ನಡೆಯುತ್ತಿದೆ. ಇಂದು ಎಸಿ ಹಾಗೂ ತಹಶಿಲ್ದಾರ ನೇತೃತ್ವದಲ್ಲಿ ಸಭೆ ನಡೆದರೂ ಪ್ರಯೋಜನವಾಗಿಲ್ಲ ಡಿಸಿಯವರು ಮಧ್ಯಸ್ಥಿಕೆ ವಹಿಸಬೇಕು ಎನ್ನುತ್ತಾರೆ. ಇದು ಒಂದು ರೀತಿ ಮೀನುಗಾರರ ದಮನ ಮಾಡುವ ರೀತಿ ಆಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಮೀನುಗಾರರಿಗೆ ಸೂಕ್ತ ನ್ಯಾಯ ಸಿಗದಿದ್ದಲ್ಲಿ ಮುಂದಿನ ದಿನಗಳಲ್ಲಿ ಜಿಲ್ಲೆಯಾದ್ಯಂತ ಹೋರಾಟ ಮಾಡುವ ಬಗ್ಗೆ ಸಮುದಾಯದ ಮುಖಂಡರೊಂದಿಗೆಚರ್ಚೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಈ ಸಂಧರ್ಭದಲ್ಲಿ ಮೀನುಗಾರ ಫೆಡರೆಸನ್ ಅಧ್ಯಕ್ಷ ರಾಜು ತಾಂಡೇಲ್, ಕಡಲಜೀವ ವೈವಿಧ್ಯ ನಿಗಮದ ಪ್ರಕಾಶ್ ಮೇಸ್ತ, ಮೀನುಗಾರ ಮುಖಂಡರಾದ ಶೇಷಗಿರಿ ತಾಂಡೇಲ್, ರಾಜು ತಾಂಡೇಲ್, ಭಾಷಾ ಪಟೇಲ್, ಉಮೇಶ್ ತಾಂಡೇಲ್,ಗಣಪತಿ ತಾಂಡೇಲ್,ವಿವಿನ್ ಫರ್ನಾಂಡೀಸ್,ಮೋಹನ್ ತಾಂಡೇಲ್ ,ಭಾಸ್ಕರ್ ತಾಂಡೇಲ್ ಇದರು.
Leave a Comment