ಹೊನ್ನಾವರ: ಶ್ರೀ ರಾಮನಾಥ ದೇವÀ ಪ್ರಸನ್ನ ಗುಡ್ಡಿನಕಟ್ಟು, ಶ್ರೀ ಶಕ್ತಿ ವೀರ ಮಾರುತಿ ಚಿಣ್ಣರ ಯಕ್ಷಗಾನ ಮಂಡಳಿ ಕಾಗಲ ಇವರ ಸಹಕಾರದೊಂದಿಗೆ ಬಾಲ ಕಲಾವಿದರಿಂದ ವೀರಮಣಿ ಕಾಳಗ' ಎಂಬ ಪೌರಾಣಿಕ ಯಕ್ಷಗಾನ ಪ್ರದರ್ಶನ ತಾಲೂಕಿನ ಗುಡ್ಡಿನಕಟ್ಟು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಫೆ.6 ರಂದು ರಾತ್ರಿ 9 ಗಂಟೆಗೆ ಪ್ರದರ್ಶನಗೊಳ್ಳಲಿದೆ. ಚಿಣ್ಣರ ಯಕ್ಷಗಾನ ತರಬೇತಿ ಕೇಂದ್ರ ಗುಡ್ಡಿನಕಟ್ಟು ಭಾಗದ 2ನೇ ತರಗತಿಯಿಂದ 10ನೇ ತರಗತಿಯ ಪುಟಾಣಿಗಳು ಹಾಗೂ ವಿದ್ಯಾರ್ಥಿಗಳು ಯಕ್ಷಗಾನ ಪ್ರದರ್ಶನ ನೀಡಲಿದ್ದಾರೆ.
ಈಶ್ವರ-ಮೇಘನಾ ಕೃಷ್ಣಮೂರ್ತಿ ನಾಯ್ಕ, ವೀರಮಣಿ-ಸಂಜಯ ಜಿ.ನಾಯ್ಕ, ರುಕ್ಮಾಂಗ-ಧನ್ಯಶ್ರೀ ವೆಂಕಟೇಶ ನಾಯ್ಕ, ಶುಭಾಂಗ-ಪ್ರಜ್ಞಾ ವಿಷ್ಣು ನಾಯ್ಕ, ವೀರಭದ್ರ-ಯೋಗೀಶ ಶ್ರೀಧರ ನಾಯ್ಕ, ಅಗಸ್ತ್ಯ-ಚಂದನ ವೆಂಕಟೇಶ ನಾಯ್ಕ, ಶ್ರೀರಾಮ-ವಿನಾಯಕ ಎನ್.ಭಟ್ಟ, ಹನುಂತನ-ವಿಶ್ವ ಪಾಂಡುರಂಗ ನಾಯ್ಕ, ಶತ್ರುಘ್ನ-ಸಹನಾ ಜಿ.ನಾಯ್ಕ, ಧಮನ-ಕಾರ್ತಿಕ ಲಂಬೋಧರ ನಾಯ್ಕ, ಪುಷ್ಕಳ-ಕಾರ್ತಿಕ ಮಂಜುನಾಥ ನಾಯ್ಕ, ಚಂದ್ರಕೇತು-ಮದನ ಬಾಬು ನಾಯ್ಕ, ಗೋಪಾಲ ವೇಷಧಾರಿ-ಓಂಕಾರ ಪಾಂಡುರಂಗ ನಾಯ್ಕ ಅವರು ಸಮರ್ಥವಾಗಿ ಪಾತ್ರ ನಿರ್ವಹಿಸಲಿದ್ದಾರೆ. ಭಾಗವತಿಕೆ ಗಜಾನನ ನಾಯ್ಕ ಕೂಜಳ್ಳಿ, ಮದ್ದಳೆ ಸೀತಾರಾಮ ಆಚಾರ್ಯ ಕಾಗಲ್, ಚಂಡೆ ರಾಮನ್ ಅವರು ಹಿಮ್ಮೇಳದಲ್ಲಿ ಸಾಥ್ ನೀಡುವರು. ಸುಮಾರು 5 ವರ್ಷದಿಂದ 15 ವರ್ಷ ಪ್ರಾಯದವರೆಗಿನ ಪುಟಾಣಿ ಮಕ್ಕಳು
ವೀರಮಣಿ ಕಾಳಗ’ ಎಂಬ ಪೌರಾಣಿಕ ಯಕ್ಷಗಾನ ಪ್ರದರ್ಶನ ನೀಡಲಿದ್ದು, ನೆರೆದ ಪ್ರೇಕ್ಷಕರನ್ನು ಯಕ್ಷಲೋಕಕ್ಕೆ ಕೊಂಡೊಯ್ಯಲಿದ್ದಾರೆ. ವಿಶೇಷವಾಗಿ ಯಕ್ಷ ಸಂಭ್ರಮದಲ್ಲಿ ಬಾಲಕರಲ್ಲದೆ ಬಾಲಕಿಯರೂ ಬಣ್ಣದ ವೇಷ ತೊಟ್ಟು ಕಾಲಿಗೆ ಗೆಜ್ಜೆ ಕಟ್ಟಿ ಕುಣಿಯುವುದು ಯಕ್ಷಗಾನ ಜನಪ್ರಿಯತೆಗೆ ಸಾಕ್ಷಿಯಾಗಲಿದೆ.
Leave a Comment