ಹೊನ್ನಾವರ; ತಾಲೂಕಿನ ಕಾಸರಕೋಡ ಟೊಂಕಾ ಭಾಗದಲ್ಲಿ ಹೊನ್ನಾವರ ಪೋರ್ಟ್ ಪ್ರೈವೇಟ್ ಲಿಮಿಟೆಡ್ ಕಂಪನಿ ಹೆಸರಿನ ವಾಣಿಜ್ಯ ಬಂದರು ನಿಮಾಣವಾದರೆ, ಮೀನುಗಾರರ ಜೀವನೊಪಾಯಕ್ಕೆ ಮಾರಕ ಹಾಗೂ ಪರಿಸರಕ್ಕೆ ಹಾನಿಯಾಗಿದೆ ಈ ಯೋಜನೆ ತಕ್ಷಣ ಕೈಬಿಡಬೇಕಿದೆ. ಮೀನುಗಾರ ಮಹಿಳೆಯರ ಹೋರಾಟಕ್ಕೆ ನಮ್ಮ ಸಂಘಟನೆ ಬೆಂಬಲವಿದೆ ಎಂದು ಕನಾಟಕ ಪ್ರಾಂತ್ಯ ರೈತ ಸಂಘ ಹಾಗೂ ಸಿಐಟಿಯು ಸಂಘಟನೆ ಟೊಂಕಾ ಭಾಗಕ್ಕೆ ತೆರಳಿ ಬೆಂಬಲ ಸೂಚಿಸಿದೆ.

ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಶಾಂತರಾಮ ನಾಯ್ಕ ಮಾತನಾಡಿ ಇಂತಹ ಕಂಪನಿಗಳನ್ನು ತಂದು ನಮ್ಮನ್ನು ಅವರ ಕೈಯಲ್ಲಿ ಭಿಕ್ಷೆ ಬೇಡುವ ಪರಿಸ್ಥಿತಿಯನ್ನು ತಂದಿಡಲು ಹೊರಟಿದ್ದಾರೆ. ಇಷ್ಟು ದಿನ ನಾವೇಲ್ಲರು ಸಾವಲಂಭಿಯಾಗಿ ಬದುಕುತ್ತಿದ್ದೆವು ಸಮುದ್ರದ ಜೊತೆಗೆ ಗುದ್ದಾಡಿ ಮೀನು ಹಿಡಿದು ಬದುಕುತ್ತಿದ್ದೆವೆ. ಇನ್ನುಮುಂದೆ ಅವರ ಗುಲಮರಾಗಿ ಬದುಕಬೇಕು ಎಂದು ಇಂತಹ ಕಂಪನಿಗಳನ್ನು ತರಲು ಸರ್ಕಾರಗಳು ಹೊರಟಿದೆ. ಪಕ್ಷ ಭೇದ ಮರೆತು ಹೋರಾಟ ಮಾಡೋಣ ನಿಮ್ಮ ಹೋರಾಟಕ್ಕೆ ನಮ್ಮ ಸಂಪೂರ್ಣ ಬೆಂಬಲವಿದೆ ಎಂದರು.
ರಾಷ್ಟ್ರೀಯ ಮೀನುಗಾರ ಸಂಘಟನೆಯ ರಾಜ್ಯ ಕಾರ್ಯದರ್ಶಿ ಚಂದ್ರಕಾಂತ ಕೊಚಡೇಕರ್, ಸಿ.ಐ.ಟಿಯು ಸಂಘಟನೆಯ ಜಿಲ್ಲಾಧ್ಯಕ್ಷರಾದ ತಿಲಕ ಗೌಡ, ರೈತ ಸಂಘದ ತಾಲೂಕ ಅಧ್ಯಕ್ಷ ತಿಮ್ಮಪ್ಪ ಗೌಡ, ರೈತ ಸಂಘದ ಕಾರ್ಯದರ್ಶಿ ಗಣೇಶ ಭಂಡಾರಿ, ಅಣ್ಣಪ್ಪ ಗೌಡ, ಅಜಿತ ತಾಂಡೇಲ್, ಮೀನುಗಾರ ಮುಖಂಡರಾದ ಜಗದೀಶ ತಾಂಡೇಲ್, ರಾಜು ತಾಂಡೇಲ್, ಮೀನುಗಾರ ಮಹಿಳೆಯರು ಹಾಜರಿದ್ದರು.
Leave a Comment