• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ನಾಳೆ ಶ್ರೀಕ್ಷೇತ್ರ ಇಡಗುಂಜಿಯ ಮಹತೋಭಾರ ವಿನಾಯಕ ದೇವರ ಮಹಾಸ್ಯಂದನ ರಥೋತ್ಸವ

February 18, 2021 by Vishwanath Shetty Leave a Comment

ಹೊನ್ನಾವರ – ನಾಡಿನೆಲ್ಲೆಡೆ ಭಕ್ತವೃಂದವನ್ನು ಹೊಂದಿರುವ ದೇಶ ವಿದೇಶಗಳಿಂದಲೂ ಭಕ್ತಸಮೂಹ ನಿತ್ಯ ಬೇಟಿ ನೀಡುವ ತಾಲೂಕಿನ ಪುರಾಣಪ್ರಸಿದ್ಧ ಶೃದ್ಧಾಕೇಂದ್ರವೆನಿಸಿರುವ ಇಡಗುಂಜಿಯ ಮ್ಹಹತೋಬಾರ ವಿನಾಯಕ ದೇವರ ಮಹಾಸ್ಯಂದನ ರಥೋತ್ಸವ ಶುಕ್ರವಾರ ನಡೆಯಲಿದ್ದು ರಥೋತ್ಸವಕ್ಕಾಗಿ ಸಕಲ ಸಿದ್ಧತೆ ನಡೆದಿದೆ.

IMG 20210217 WA0036


ನಾರದ ಮುನಿಗಳಿಂದ ಪ್ರತಿಷ್ಠಾಪಿಸಲ್ಪಟ್ಟ ವಾಲಖಿಲ್ಯ 1500 ವರ್ಷಗಳಿಗೂ ಮಿಗಿಲಾದ ಇತಿಹಾಸವನ್ನು ಹೊಂದಿರುವ ದೇವಾಲಯವಾಗಿದ್ದು ದ್ವಿದಂತನಾಗಿರುವ ಇಡಗುಂಜಿ ಗಣಪನ ಸನ್ನಿಧಿಯಲ್ಲಿ ಬೇಡಿಕೊಂಡ ಸಕಲ ಇಷ್ಟಾರ್ಥಗಳು ಈಡೇರುವ ನಂಬಿಕೆ ಭಕ್ತರ ಮನದಲ್ಲಿ ಇಂದಿಗೂ ಭದ್ರವಾಗಿದೆ. ಸಾಮಾನ್ಯರಿಂದ ನಾಡಿನ ಖ್ಯಾತನಾಮರೆಲ್ಲ ಇಡಗುಂಜಿಗೆ ಬೇಟಿ ನೀಡಿ ಶ್ರೀದೇವರ ದರ್ಶನ ಪಡೆದು ಕೃತಾರ್ಥಭಾವ ಹೊಂದುವುದನ್ನು ಕಾಣಬಹುದಾಗಿದೆ.
ರಥಸಪ್ತಮಿಯಂದು (ಶುಕ್ರವಾರ) ಮಹಾಸ್ಯಂದನ ರಥೋತ್ಸವ ಜರುಗಲಿದ್ದು ರಥೋತ್ಸವದ ಅಂಗವಾಗಿ ರವಿವಾರದಿಂದಲೇ ಧಾರ್ಮಿಕ ಕಾರ್ಯಕ್ರಮಗಳು ಆರಂಭವಾಗಿದೆ. ಪ್ರಧಾನ ಅರ್ಚಕ ವೇ.ಮೂ. ಮಂಜುನಾಥ ಶಿವರಾಮ ಭಟ್ಟ ನೇತೃತ್ವದಲ್ಲಿ ಧರ್ಮಕರ್ತರಾಗಿ ವೇ.ಮೂ ನರಸಿಂಹ ಶಿವರಾಮ ಭಟ್ಟ, ಹಾಗೂ ವೇ.ಮೂ.ವಿಷ್ಣು ಭಟ್ಟರ ತಾಂತ್ರಿಕ ತನದಲ್ಲಿ ಧಾರ್ಮಿಕ ಕಾರ್ಯಗಳು ನಡೆಯುತ್ತಿದೆ. ದೇವಾಲಯದ ರಿಸೀವರ್ ಆದ ಜಿಲ್ಲಾ ನ್ಯಾಯಾಧೀಶರ ನಿರ್ದೇಶನದಂತೆ ಕೋವಿಡ್ ನಿಯಮ ಪಾಲನೆಯ ಸರತಿ ಸಾಲು, ವಾಹನ ನಿಲುಗಡೆಗೆ ವ್ಯವಸ್ಥೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ಇಡಗುಂಜಿ, ಮಾಳಕೋಡ, ಮೋಳಕೋಡ ಭಾಗದ ಗ್ರಾಮಸ್ಥರು ಕಳೆದೊಂದು ವಾರದಿಂದ ರಥ ಕಟ್ಟುವ ತೇರಬಿಟ್ಟಿ ಕೆಲಸದಲ್ಲಿ ತನ್ಮಯತೆಯಿಂದ ತೊಡಗಿಸಿಕೊಂಡಿದ್ದಾರೆ.

IMG 20210217 WA0037


ರಥಾರೂಢ ಮಹಾಗಣಪತಿಯ ದರ್ಶನ ಪಡೆದು ಪುನೀತರಾಗಲು ಸಹಸ್ರಾರು ಭಕ್ತರು ಇಡಗುಂಜಿಗೆ ಆಗಮಿಸುವ ನಿರೀಕ್ಷೆ ಇದ್ದು ಆಗಮಿಸುವ ಭಕ್ತರೆಲ್ಲರೂ ಕೋವಿಡ್ ನಿಯಮ ಕಡ್ಡಾಯ ಪಾಲಿಸುವಂತೆ ದೇವಾಲಯದ ಅರ್ಚಕರು ಹಾಗೂ ರಿಸೀವರ್ ಆದ ಜಿಲ್ಲಾ ನ್ಯಾಯಾಧೀಶರು ಕೋರಿದ್ದಾರೆ.

IMG 20210217 WA0028 1
IMG 20210217 WA0032

Table of Contents

Toggle
  • Share this:
  • Related News:

Share this:

  • Share on WhatsApp (Opens in new window) WhatsApp
  • Share on X (Opens in new window) X
  • Share on Facebook (Opens in new window) Facebook
  • Share on Telegram (Opens in new window) Telegram
  • Email a link to a friend (Opens in new window) Email
  • Print (Opens in new window) Print

Related News:

Filed Under: Canara News, Honavar News, Trending Tagged With: ಇಡಗುಂಜಿಯ ಮ್ಹಹತೋಬಾರ ವಿನಾಯಕ, ಮಹಾಸ್ಯಂದನ ರಥೋತ್ಸವ, ವಾಹನ ನಿಲುಗಡೆಗೆ ವ್ಯವಸ್ಥೆ

Explore More:

About Vishwanath Shetty

Reader Interactions

Leave a CommentCancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,217,241 visitors

Footer

ಕರ್ನಾಟಕ ಟೂರಿಸಂ ಅವಾರ್ಡ್ಸ್: ಉತ್ತರ ಕನ್ನಡ ಜಿಲ್ಲೆಯ ನಾಲ್ಕು ಸಂಸ್ಥೆಗಳಿಗೆ ಐದು ಪ್ರಶಸ್ತಿ

September 29, 2026 By Sachin Hegde

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

© 2026 Canara Buzz · Contributors · Privacy Policy · Terms & Conditions · Member of Digital Avatar

Loading Comments...