ಹೊನ್ನಾವರ; ಪೆÇಲೀಸ್ ಠಾಣಾ ವ್ಯಾಪ್ತಿಯ ಕಾಸರಕೋಡ ರೋಷನ್ ಮೊಹಲ್ಲಾದಲ್ಲಿ ಏಪ್ರಿಲ್ 2012 ರಲ್ಲಿ ವೆಂಕಟೇಶ್ ಬಾಲಕೃಷ್ಣ ಶಾನಬಾಗ್ ಎಂಬುವವರ ಮನೆ ಕಳ್ಳತನವಾಗಿತ್ತು. ಈ ಪ್ರಕರಣವನ್ನು ಭೇದಿಸುವಲ್ಲಿ ಹೊನ್ನಾವರ ಪೋಲಿಸರು ಯಶಸ್ವಿಯಾಗಿದ್ದಾರೆ.

ಈ ಪ್ರಕರಣದ ವೈಜ್ಞಾನಿಕ ತನಿಖೆ ಕೈಗೊಂಡು ಪ್ರಕರಣವನ್ನು ಬೇಧಿಸಿ ಆರೋಪಿತನಾದ ಮೂಲತಃ ಭಟ್ಕಳ ನಿವಾಸಿ ಪ್ರಸುತ್ತ ಹಾವೇರಿ ಜಿಲ್ಲೆಯ ಹಾನಲ್ ಶಿರಗೋಡ ವಾಸವಾಗಿದ್ದ ಮಕ್ಬೂಲ್ ಅಹ್ಮದ್ ಸೈಯದ್ ರಸೂಲ್ ಸಾಬ್ ಮುಲ್ಲಾ(45) ಈತನನ್ನು ದಸ್ತಗಿರಿ ಮಾಡಿ ಈತನಿಂದ ಸುಮಾರು ರೂ.60,000 /- ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಂಡು ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ, ಕಾರವಾರ ಜಿಲ್ಲಾ ಕಾರಾಗೃಹದಲ್ಲಿ ನ್ಯಾಯಾಂಗ ಬಂಧನದಲ್ಲಿಡಲಾಗಿದೆ
ಈ ಪ್ರಕರಣ ಬೇಧಿಸುವಲ್ಲಿ ಪೋಲಿಸ್ ಇಲಾಖೆಯ ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಶ್ರೀಧರ ಎಸ್.ಆರ್ ಸಿಪಿಐ ಹೊನ್ನಾವರ ಇವರ ನೇತೃತ್ವದಲ್ಲಿ ಸಾವಿತ್ರಿ ನಾಯಕ ಪಿ.ಎಸ್.ಐ ಅಪರಾಧ ವಿಭಾಗ ಹಾಗೂ ಸಿಬ್ಬಂದಿಯವರಾದ ಕೃಷ್ಣ ಗೌಡ, ರಮೇಶ ಲಮಾಣಿ, ಮಹಾವೀರ, ಉದಯ ಮಗದೂರ್, ರಯೀಸ್ ಭಗವಾನ್, ಅನಿಲ ಲಮಾಣಿ ಹಾಗೂ ಜಿಲ್ಲಾ ವೈಜ್ಞಾನಿಕ ನೆರವು ಘಟಕದ ಎ.ಎಸ್.ಐ ರಾಮಚಂದ್ರ ಹೆಗಡೆ, ಸಿ.ಎಚ್.ಸಿ ರಮೇಶ ಬೋರ್ಕರ್ ಇವರನ್ನೊಳಗೊಂಡ ತಂಡವು ಕಾರ್ಯನಿರ್ವಹಿಸಿದೆ. ಪ್ರಕರಣದ ಪತ್ತೆ ಕಾರ್ಯದಲ್ಲಿ ಪಾಲ್ಗೊಂಡ ಅಧಿಕಾರಿ, ಸಿಬ್ಬಂದಿಯವರಿಗೆ ಉತ್ತರಕನ್ನಡ ಪೆÇಲೀಸ್ ಅಧೀಕ್ಷಕರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
Leave a Comment