ಹೊನ್ನಾವರ: ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಹಾಗೂ ಜಿಲ್ಲಾಧಿಕಾರಿಗಳು, ಜಿಲ್ಲಾ ಕಾರ್ಮಿಕ ಇಲಾಖೆ,ತಹಶಿಲ್ದಾರ ನಿರ್ದೇಶನದಂತೆ ಹೊನ್ನಾವರ ತಾಲೂಕಿನ ಕಾರ್ಮಿಕ ಇಲಾಖೆ ಹಾಗೂ ವಿವಿಧ ಇಲಾಖೆ ಅಧಿಕಾರಿಗಳಿಂದ ಪಟ್ಟಣದಲ್ಲಿ ಹಾಗೂ ತಾಲೂಕಿನ ವಿವಿಧ ಭಾಗಗಳಲ್ಲಿ ಶನಿವಾರ ಬಾಲ ಕಾರ್ಮಿಕ ಪತ್ತೆ ಕಾರ್ಯಾಚರಣೆ ಹಾಗೂ ಜನಜಾಗೃತಿ ಕಾರ್ಯಕ್ರಮ ನಡೆಯಿತು.

ಬಾಲಕಾರ್ಮಿಕರನ್ನು ಕೆಲಸಕ್ಕೆ ಬಳಸಿಕೊಳ್ಳುವುದು ಅಪರಾಧ ಎನ್ನುವುದರ ಕುರಿತು ಅಧಿಕಾರಿಗಳು ಜಾಗೃತಿ ಮೂಡಿಸಿದರು. ಪೊಲೀಸ್ ಇಲಾಖೆ, ಸಿಡಿಪಿಯು, ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ, ಆರೋಗ್ಯ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಅಧಿಕಾರಿ, ಸಮಾಜ ಕಲ್ಯಾಣ ಇಲಾಖಾ ಅಧಿಕಾರಿಗಳು,ಬಾಲಕಾರ್ಮಿಕ ಯೋಜನಾ ನಿರ್ದೇಶಕರು ಕಾರವಾರ ಅವರನ್ನು ಒಳಗೊಂಡ ವಿವಿಧ ಇಲಾಖೆಯ ನಿರೀಕ್ಷಕರು ಜಂಟಿಯಾಗಿ ಹೊನ್ನಾವರದ 20 ಕಡೆಗಳಲ್ಲಿ ಅಂಗಡಿ, ವಾಣಿಜ್ಯ ಸಂಸ್ಥೆಗಳು, ಗ್ಯಾರೇಜ್ ಗ್ಯಾರೇಜ್ ಹೋಟೆಲ್ , ಬಾರ್ ಮತ್ತು ರೆಸ್ಟೋರೆಂಟ್ ,ಬಟ್ಟೆ ಅಂಗಡಿಗಳ ಮೇಲೆ ದಾಳಿ ನಡೆಸಲಾಯಿತು. ಪಟ್ಟಣದ ನ್ಯೂ ಬಾಂಬೆ ಬಜಾರ ಮಳಿಗೆಯಲ್ಲಿ ಅಂದಾಜು ಹದಿನೇಳು ವರ್ಷದ ಬಾಲಕ ಕೆಲಸ ಮಾಡುತ್ತಿರುವುದು ಅಧಿಕಾರಿಗಳ ಗಮನಕ್ಕೆ ಕಂಡುಬಂದಿದೆ. ಮಾಲೀಕರಿಗೆ ಬಾಲಕನ ವಯಸ್ಸಿನ ಪ್ರಮಾಣಪತ್ರ ಇತರೆ ದಾಖಲೆಗಳನ್ನು ಕಾರ್ಮಿಕ ನಿರೀಕ್ಷಕರ ಇಲಾಖೆಗೆ ಸಲ್ಲಿಸುವಂತೆ ಕಾರ್ಮಿಕ ನಿರೀಕ್ಷಕರು ನೋಟಿಸ್ ನೀಡಿದ್ದು ಬಾಲಕನ ಹೇಳಿಕೆಯನ್ನು ಸಹ ಪಡೆದಿದ್ದಾರೆ. ಅದರಂತೆ ಅರೆಂಗಡಿ ಸಮೀಪದ ಹೊದಿಕರಶಿರೂರು ಎಂಬ ಗ್ರಾಮದಲ್ಲಿನ ಕ್ರಶರ್ ಘಟಕದ ಮೇಲೆ ದಾಳಿ ಮಾಡಿದ್ದ ವೇಳೆ ಘಟಕ ಸ್ಥಗಿತಗೊಳಿಸಿದ್ದರು ಹಾಗೂ ಇನ್ನಾವುದೇ ವಿವಿಧ ಸಂಸ್ಥೆಗಳಲ್ಲಿ ಬಾಲಕಾರ್ಮಿಕ ಅಥವಾ ಕಿಶೋರ ಕಾರ್ಮಿಕ ಕಂಡುಬಂದಿಲ್ಲ. ಈ ಸಂದರ್ಭದಲ್ಲಿ ಜಂಟಿಯಾಗಿ ಹಠಾತ್ ದಾಳಿ ತಂಡಕ್ಕೆ ರಸ್ತೆಯಲ್ಲಿ ಹೊರ ರಾಜ್ಯದಿಂದ ವಲಸೆ ಬಂದಿರುವ ಕಾರ್ಮಿಕ ಮಕ್ಕಳು ಭಿಕ್ಷಾಟನೆಯಲ್ಲಿ ಇರುವುದು ಕಂಡುಬಂದಿದೆ. ಅದೇ ಈ ಬಾಲಕರ ಪೋಷಕರನ್ನು ಸ್ಥಳಕ್ಕೆ ಕರೆಯಿಸಿ ಎಚ್ಚರಿಕೆ ನೀಡಿ ಅವರ ಜೊತೆ ಕಳುಹಿಸಿಕೊಡಲಾಯಿತು. ಬಾಲಕಾರ್ಮಿಕ,ಕಿಶೋರ ಕಾರ್ಮಿಕ ಬಗ್ಗೆ ಜಾಗೃತಿ ಭಿತ್ತಿ ಚಿತ್ರವನ್ನು ಅಂಟಿಸಲಾಯಿತು.ಈ ಕುರಿತು ಹೊನ್ನಾವರ ಕಾರ್ಮಿಕ ನಿರಿಕ್ಷಕಿ ಕಾವೇರಿ. ಟಿ ಮಾತನಾಡಿ ಉತ್ತರ ಕನ್ನಡ ಜಿಲ್ಲೆಯನ್ನು ಬಾಲಕಾರ್ಮಿಕ ಮುಕ್ತ ವಲಯವನ್ನಾಗಿ ಮಾಡಬೇಕು ಎನ್ನುವುದು ಇದರ ಉದ್ದೇಶವಾಗಿದೆ.ಅನಕ್ಷರತೆ ಮತ್ತು ಆರ್ಥಿಕ ಸಮಸ್ಯೆಯೇ ಬಾಲಕಾರ್ಮಿಕ ಪದ್ಧತಿಗೆ ಮೂಲ ಕಾರಣವಾಗಿದ್ದು, ಸರಕಾರ ಒದಗಿಸಿರುವ 10 ಹಲವು ಸೌಲಭ್ಯಗಳನ್ನು ವಿವಿಧ ಇಲಾಖೆಗಳು ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ತರುವ ಮೂಲಕ ಮಕ್ಕಳ ಸರ್ವಾಂಗೀಣ ವಿಕಸನಕ್ಕೆ ಮಾರಕವಾಗಿರುವ ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆಗೆ ಎಲ್ಲರೂ ಸಹಕರಿಸಿ ಎಂದು ತಿಳಿಸಿದರು.ಈ ಸಂಧರ್ಭದಲ್ಲಿ ಪ.ಪಂ ಮುಖ್ಯಾಧಿಕಾರಿ ನೀಲಕಂಠ ಮೇಸ್ತ,ಆರೋಗ್ಯ ನೀರಿಕ್ಷಕ ಸುನೀಲ್ ಗಾವಡೆ, ಜಿಲ್ಲಾ ಬಾಲ ಕಾರ್ಮಿಕ ಯೋಜನೆ ಸೊಸೈಟಿಯ ಯೋಜನಾ ನಿರ್ದೇಶಕ ಸಂದೇಶ್ ಗಾಂವ್ಕರ್, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ರಾಜು ನಾಯ್ಕ, ಶಿಕ್ಷಣ ಇಲಾಖೆಯ ಪ್ರಮೋದ್ ನಾಯ್ಕ, ಪೊಲೀಸ್ ಇಲಾಖೆಯ ಶಿವರಾಂ ದೇಸಾಯಿ, ಕಾರ್ಮಿಕ ಇಲಾಖೆಯ ಆನಂದ ದಾಳಿ ವೇಳೆ ಪಾಲ್ಗೊಂಡಿದ್ದರು.
Leave a Comment