ಹಳಿಯಾಳ:- ವೈದಿಕ ಕಾಲದಿಂದಲೂ ಮೂರ್ತೀ ಪ್ರತಿಷ್ಠಾಪನೆ ಪದ್ದತಿ ಇದ್ದು ಮೂರ್ತಿ ಪೂಜೆಯು ಭಾರತೀಯ ಸಂಸ್ಕøತೀಯ ಪ್ರತೀಕವಾಗಿದೆ ಮತ್ತು ಸಂಸ್ಕøತೀಯ ಪೂಜೆಯು ಆಗಿದೆ ಎಂದು ಬೆಂಗಳೂರಿನ ಗೋಸಾಯಿ ಮಹಾಸಂಸ್ಥಾನ ಮಠದ ಭವಾನಿ ಪಿಠದ ಮರಾಠಾ ಜಗದ್ಗುರು, ವೇದಾಂತಾಚಾರ್ಯ ಮಂಜುನಾಥ ಮಹಾರಾಜರು ಅಭಿಪ್ರಾಯಪಟ್ಟರು.

ತಾಲೂಕಿನ ಮಂಗಳವಾಡ ಗ್ರಾಮದಲ್ಲಿ ಗ್ರಾಮಸ್ಥರು ವಿಶೇಷ ಕಾಳಜಿ ವಹಿಸಿ ಸುಮಾರು 15 ಲಕ್ಷಕ್ಕೂ ಅಧಿಕ ವೆಚ್ಚದಲ್ಲಿ ತಯಾರಿಸಿದ ಪಂಚಲೋಹದ ವಿಶೇಷ ಅಶ್ವಾರೂಢ ಛತ್ರಪತಿ ಶಿವಾಜಿ ಮಹಾರಾಜರ ಮೂರ್ತಿಯನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದರು.
ಶಾಸ್ತ್ರಗಳಲ್ಲಿ ವರ್ಣಿಸಿದಂತೆ ಇರುವ ಧರ್ಮವಂತ, ಕುಲವಂತ, ದಾನವಂತ,ಬುದ್ದಿವಂತ, ನೀತಿವಂತ ಇತ್ಯಾದಿ ಎಲ್ಲ ಸದ್ಗುಣಗಳನ್ನು ಹೊಂದಿದ್ದ ಜಗತ್ತಿನ ಏಕೈಕ ರಾಜರೆಂದರೇ ಅದು ಶಿವಾಜಿ ಮಹಾರಾಜರು ಶಿವಾಜಿ ಮಹಾರಾಜರ ಧೈರ್ಯ, ನೀತಿ, ಶಿಕ್ಷಣ ಇಂದಿನ ಸಮಾಜದಲ್ಲಿ ಬರಬೇಕಿದೆ, ಅವರ ಆದರ್ಶಗಳ ಪಾಲನೆ ಆಗಬೇಕಿದೆ ಎಂದು ಸ್ವಾಮೀಜಿ ಹೇಳಿದರು.
ಇಂದಿನ ಯುವಕರು ದುಶ್ಚಟಗಳಿಂದ ದೂರವಿದ್ದು ಸನ್ಮಾರ್ಗದಲ್ಲಿ ನಡೆಯಬೇಕು ಜೊತೆಗೆ ಕಾರ್ಯಕ್ರಮಗಳಲ್ಲಿ ಡಿಜೆ, ಡಾಲಬಿ ಸಂಗೀತದ ಸಂಸ್ಕøತಿ ಬಿಟ್ಟು ಬ್ಯಾಂಜೋ, ವಾದ್ಯಮೇಳಗಳ ಆಯೋಜನೆಯತ್ತ ಉತ್ಸಾಹ ತೊರಬೇಕು ಎಂದು ಮಂಜುನಾಥ ಸ್ವಾಮಿಜಿಗಳು ಕರೆ ನೀಡಿದರು.

ಶ್ರೀಕ್ಷೇತ್ರ ಕಾಶಿಯ ಸೋಹಂ ಚೈತನ್ಯ ಪುರಿ ಸ್ವಾಮಿಜಿಗಳು ಮಾತನಾಡಿ ಮಂಗಳವಾಡ ಗ್ರಾಮಸ್ಥರಿಂದ ಉತ್ತಮ ಕಾರ್ಯವಾಗಿದೆ. ಉತ್ತಮ ಕಾರ್ಯಕ್ರಮ ಸಂಘಟನೆ ಮಾಡಿರುವುದಾಗಿ ಶ್ಲಾಘಿಸಿದರು.
ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಘೋಟ್ನೇಕರ ಮಾತನಾಡಿ ಹಳಿಯಾಳ ತಾಲೂಕಿನಲ್ಲಿಯೇ ಅತ್ಯಂತ ಸುಂದರವಾದ ಶಿವಾಜಿ ಮೂರ್ತಿಯು ಮಂಗಳವಾಡ ಗ್ರಾಮದಲ್ಲಿ ಪ್ರತಿಷ್ಠಾಪನೆ ಆಗಿದೆ. ಶಿವಾಜಿ ಮಹಾರಾಜರ ಬಗ್ಗೆ ಇಂದಿನ ಯುವ ಪಿಳಿಗೆಗೆ ಹೆಚ್ಚಿನ ಮಾಹಿತಿ ನೀಡುವ ಕಾರ್ಯ ಆರಂಭವಾಗಬೇಕಿದೆ ಎಂದರು.
ವೇದಿಕೆಯ ಮೇಲೆ ಮಾಜಿ ಶಾಸಕರಾದ ಸುನೀಲ್ ಹೆಗಡೆ, ಮಾಜಿ ಸ್ವಾತಂತ್ರ್ಯ ಹೋರಾಟಗಾರ ಮಂಗೇಶ ಪಾಟೀಲ್, ಜೀಜಾಮಾತಾ ಮಹಿಳಾ ಸಂಘದ ಅಧ್ಯಕ್ಷೆ ಮಂಗಲಾ ಕಶೀಲಕರ, ಪ್ರಮುಖರಾದ ಸೋನಪ್ಪಾ ಸುನಕಾರ, ನಿಂಗಪ್ಪಾ(ಬಾಬು) ವಾಲೇಕರ, ದಯಾನಂದ ಜಾವಳೆಕರ, ಜೀವಪ್ಪಾ ಭಂಡಾರಿ, ಯಲ್ಲಾರಿ ಶಿಂಧೆ, ವಿಷ್ಣು ಗುಂಡುಪಕರ, ಮೇಘರಾಜ ಘಾಡಿ, ರಾಮನಿಂಗ, ಹನುಮಂತ ವಾಲೆಕರ, ಮಂಜುನಾಥ ಪಾಟೀಲ್, ಅನಿಲ ಚವ್ವಾಣ, ಯಲ್ಲಪ್ಪಾ ಮಾಲವಣಕರ ಮೊದಲಾದವರು ಇದ್ದರು.
Leave a Comment