ಭಟ್ಕಳ: ಕಳೆದ ವರ್ಷ ಕೋರೊನಾ ಮಹಾಮಾರಿಯಿಂದಾಗಿ ಭಟ್ಕಳದ ಗ್ರಾಮ ದೇವ ಶ್ರೀ ಚೆನ್ನಪಟ್ಟಣ ಹನುಮಂತ ದೇವರ ಜಾತ್ರಾ ಮಹೋತ್ಸವ, ರಥೋತ್ಸವವೂ ನಡೆದಿಲ್ಲವಾಗಿದ್ದರ ಹಿನ್ನೆಲೆ ಈ ವರ್ಷ ಸ್ಥಗಿತಗೊಂಡಿರುವ ಜಾತ್ರಾ ಮಹೋತ್ಸವವನ್ನು ಫೆ.26ರಂದು ನಡೆಸಲು ಎಲ್ಲಾ ತಯಾರಿಗಳು ನಡೆಸಲಾಗುತ್ತಿದ್ದು, ಇನ್ನೇನು ಒಂದೇ ದಿನ ಬಾಕಿ ಇದ್ದು ರಥ ಕಟ್ಟುವ ಕೆಲಸವೂ ಮುಕ್ತಾಯ ಹಂತಕ್ಕೆ ಬಂದಿದೆ.

ಕೋವಿಡ್-19ನಿಂದ ಎಲ್ಲವೂ ಸ್ಥಬ್ಧವಾಗಿದ್ದವು. ದೇವಸ್ಥಾನ ಮಸೀದಿ ಚರ್ಚಗಳಲ್ಲಿ ಭಕ್ತರ ಪ್ರವೇಶ ನಿರ್ಬಂಧ ಹಾಕಲಾಗಿತ್ತು. ಜಾತ್ರಾ ಉತ್ಸವಾದಿಗಳು ಸ್ಥಗಿತಗೊಂಡಿದ್ದವು. ಆದರೆ ಬದಲಾದ ಕಾಲದಲ್ಲಿ ಕೋವಿಡ್ ಕ್ರಮೇಣ ಇಳಿಕೆಯತ್ತ ಸಾಗಿದವು. ಈ ಹಿನ್ನೆಲೆ ಅಂದು ನಿಂತಿದ್ದ ಸ್ಥಗಿತಗೊಂಡಿದ್ದ ಪ್ರಮುಖ ಕಾರ್ಯಕ್ರಮಗಳು ಮತ್ತೆ ಚಾಲನೆಗೊಂಡಿವೆ. ಇದರಲ್ಲಿ ಭಟ್ಕಳದ ಚೆನ್ನಪಟ್ಟಣ ಹನುಮಂತ ದೇವರ ಜಾತ್ರೆಯೂ ಪ್ರಮುಖವಾದವು.ತಾಲೂಕಾಢಳಿತದ ಗಮನಕ್ಕೆ ತಂದು ದೇವಸ್ಥಾನ ಆಡಳಿತ ಕಮಿಟಿಯಿಂದ ನಡೆಸಲಾದ ಸಭೆಯಲ್ಲಿ ತೀರ್ಮಾನಗೊಂಡಂತೆ ಫೆ.26ರಂದು ಮಹಾರಥೋತ್ಸವವನ್ನ ನಡೆಸಲು ಈಗಾಗಲೇ ತಯಾರಿ ಕಾರ್ಯ ಜೋರಾಗಿದ್ದು ಫೆ. 19ರಿಂದ ಆರಂಭಗೊಂಡ ಜಾತ್ರಾ ಮಹೋತ್ಸವದ ಕಾರ್ಯಕ್ರಮ ಧಾರ್ಮಿಕ ವಿಧಿ ವಿಧಾನಗಳು ಜರುಗಿದವು. 19ರಿಂದ ಆರಂಭಗೊಂಡ ಧ್ವಜಾರೋಹಣ, ಶಿಬಿಕಾ ಯಂತ್ರೋತ್ಸವದ ಮೂಲಕ ಶ್ರೀ ದೇವರ ಉತ್ಸವ, ಚೋಳೇಶ್ವರಕ್ಕೆ ತೆರಳುವುದು, ಆಶ್ವವಾಹನೋತ್ಸವ, ಚೂಣೋತ್ಸವ, ಅವಭೃಥ ಸ್ನಾನ ಮುಂತಾದ ಕಾರ್ಯಕ್ರಮಗಳು ನಡೆಯಲಿದೆ.
ಜಿಲ್ಲೆಯ ಅತೀ ದೊಡ್ಡ ಜಾತ್ರಾ ರಥೋತ್ಸವ ಕಾರ್ಯಕ್ರಮದ ಪೂರ್ವಭಾವಿ ತಯಾರಿ ಭರದಿಂದ ನಡೆಯುತ್ತಿದ್ದು, ಈ ಫೆ.19ರ ಬೆಳಿಗ್ಗೆಯಿಂದಲೇ ಧಾರ್ಮಿಕ ಕಾರ್ಯಕ್ರಮಗಳು ಆರಂಭವಾಗಿದ್ದು, ತಾಂತ್ರಿಕರಾದ ವೇ.ಮೂ.ರಮಾನಂದ ಆವಭೃತರ ಆಚಾರ್ಯತ್ವದಲ್ಲಿ ಬೆಳಿಗ್ಗೆ ಧ್ವಜಸ್ಥಂಭಕ್ಕೆ ಗರುಡನ ಪಟವನ್ನು ಕಟ್ಟುವ ಮೂಲಕ ರಥೋತ್ಸವದ ವಿಧಿವಿಧಾನಗಳು ವಿದುಕ್ತವಾಗಿ ಚಾಲನೆಗೊಂಡಿದ್ದವು. ದೇವಳದ ಒಳಗೆ ಹನುಮ ದೇವರ ಸಕಲ ಪೂಜಾ ಧಾರ್ಮಿಕ ವಿಧಿವಿಧಾನಗಳು, ಪ್ರತಿನಿತ್ಯ ಜಾತ್ರಾ ಮಹೋತ್ಸವ ಕಾರ್ಯಕ್ರಮಗಳು ದೇವಳದಲ್ಲಿ ನಡೆಯುತ್ತಿವೆ.
ಊರ ಹಬ್ಬವಾದ ಈ ಜಾತ್ರೆಯೂ ತಾಲುಕೂ ಅಷ್ಟೇ ಅಲ್ಲದೇ ಜಿಲ್ಲೆ, ರಾಜ್ಯದಿಂದಲೂ ಭಕ್ತರು ಬರಲಿದ್ದಾರೆ. ಫೆ. 26 ಶುಕ್ರವಾರದಂದು ಬ್ರಹ್ಮ ರಥೋತ್ಸವ ಹಾಗೂ ಫೆಬ್ರವರಿ 28 ರಂದು ಚೂರ್ಣೊತ್ಸವ ನಡೆಯುವುದರೊಂದಿಗೆ ರಥೋತ್ಸವದ ವಿಧಿ ವಿಧಾನಗಳು ಸಮಾಪ್ತಿಯಾಗಲಿವೆ. ಈಗಾಗಲೇ ದೇವಸ್ಥಾನದ ಪ್ರಾಂಗಣ ಹಾಗೂ ಹೊರಾಂಗಣಗಳಿಗೆ ಸುಣ್ಣ ಬಣ್ಣ ಬಳಿದು ಅಲಂಕಾರ ಮಾಡಿದ್ದು, ದೇವಾಲಯವೂ ಜಾತ್ರಾ ರಥೋತ್ಸವಕ್ಕೆ ಕಂಗೊಳಿಸುವಂತೆ ಸಜ್ಜುಗೊಳಿಸುತ್ತಿದ್ದಾರೆ. ಸದ್ಯ ಸುಂದರ ರಥಕ್ಕೆ ಬಣ್ಣ ಬಳಿಯುತ್ತಿದ್ದು, ರಥ ಕಟ್ಟು ಕಾರ್ಯ ಚಾಲ್ತಿಯಲ್ಲಿದೆ. ಅದರಂತೆ ರಥೋತ್ಸವದ ಅಂಗವಾಗಿ ದಿನವೂ ಕೂಡಾ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದ್ದು, ಸಂಜೆ ಪ್ರತಿ ದಿನವೂ ದೇವರ ಉತ್ಸವ ನಡೆದು ಬ್ರಹ್ಮರಥೋತ್ಸವದ ಹಿಂದಿನ ದಿನದಂದು(ನಾಳೆ) ಪುಷ್ಪ ರಥೋತ್ಸವವು(ಚಿಕ್ಕ ರಥ) ಜರುಗಲಿರುವುದು ಅಂದು ಸಹ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಶ್ರದ್ಧಾ ಭಕ್ತಿಯಿಂದ ರಥವನ್ನು ಎಳೆಯಲಿದ್ದಾರೆ.
ಕೋವಿಡ್ ಬಳಿಕ ತಾಲೂಕಿನಲ್ಲಿ ನಡೆಯುತ್ತಿರುವ ಬಹುದೊಡ್ಡ ಜಾತ್ರೆ ಇದಾಗಿದ್ದು, ಈ ಬಾರಿ ಭಕ್ತರಲ್ಲಿ ಭಟ್ಕಳ ಜಾತ್ರೆ ವಿಶೇಷತೆಯೊಂದ ಕೂಡಿದೆ. ಕಾರಣ ಈ ವರ್ಷ ಎರಡು ಬಾರಿ ಬ್ರಹ್ಮ ರಥೋತ್ಸವವೂ ಜರುಗಲಿದೆ. ಒಟ್ಟಾರೆ ರಥೋತ್ಸವಕ್ಕೆ ಎರಡೇ ದಿನ ಬಾಕಿಯಿದ್ದು ಕ್ಷಣಗಣನೆ ನಡೆಯುತ್ತಿದೆ. ಭಟ್ಕಳವೂ ಸಂಪುರ್ಣ ಊರಿನ ಜಾತ್ರೆಗೆ ಸಜ್ಜೂಗೊಳುತ್ತಿದ್ದು ಭಟ್ಕಳಿಗರಲ್ಲಿ ಕೋವಿಡ ನಂತರ ಸಂಭ್ರಮದ ವಾತಾವರಣ ಸೃಷ್ಟಿಯಾಗಿದೆ.
Leave a Comment