ಹೊನ್ನಾವರ: ಕನ್ನಡಪರ ಸಂಘಟನೆಯವರು ಪರಭಾಷಾವಿರೋಧಿಗಳಲ್ಲ. ಕನ್ನಡಭಾಷೆಗೆ ಅನ್ಯಾಯವಾಗುವ ಪ್ರಸಂಗ ಎದುರಾದರೆ ಯಾವುದೇ ಪಕ್ಷದ ವಿರುದ್ದ ಹೋರಾಡಲು ಹಿಂಜರಿಯುದಿಲ್ಲ ಎಂದು ಕನ್ನಡಸಿರಿ ಸಂಘಟನೆಯ ಸಂಸ್ಥಾಪಕ ಅಧ್ಯಕ್ಷ ಆನಂದಕುಮಾರ ಹೇಳಿದರು.

ಅವರು ಕರ್ನಾಟಕ ಕ್ರಾಂತಿರAಗದ ಸಾಲ್ಕೋಡ್ ಘಟಕದ ಮೂರನೇ ವರ್ಷದ ವಾರ್ಷಿಕೊತ್ಸವಕ್ಕೆ ಚಾಲನೆ ನೀಡಿದ ಬಳಿಕ ಮಾತನಾಡುತ್ತಾ ನಮ್ಮ ನಾಡು ಪರಭಾಷೆಯ ಹಿನ್ನಲೆಯಲ್ಲಿ ಒಡೆದು ಹಾಳಾಗುತ್ತದೆ. ನಮ್ಮಲ್ಲಿ ಭಾಷೆಯ ಬಗ್ಗೆ ಒಗ್ಗಟ್ಟಿನ ಕೊರತೆ ಇದೆ. ಬಾಷೆ ವಿಷಯಕ್ಕೆ ಬಂದರೆ ಎಲ್ಲಾ ಭಾಗದವರು ಒಟ್ಟಾದಾಗ ಮಾತ್ರ ನಮಗೆ ಅನ್ಯಾಯವಾಗುದಿಲ್ಲ.ಗ್ರಾಮೀಣ ಸೊಗಡಿನಿಂದ ಈ ಭಾಗದಲ್ಲಿ ಕನ್ನಡಪರ ಸಂಘಟನೆ ಅರ್ಥಪೂರ್ಣ ಕಾರ್ಯಕ್ರಮ ಆಯೋಜಿಸುತ್ತಿರುವುದು ಹೆಮ್ಮೆಯ ವಿಷಯ ಎಂದರು.
ಕರ್ನಾಟಕ ಕ್ರಾಂತಿರAಗದ ಜಿಲ್ಲಾಧ್ಯಕ್ಷ ಮಂಗಲದಾಸ ನಾಯ್ಕ ಮಾತನಾಡಿ ನಮ್ಮ ಜಿಲ್ಲೆಯ ಕೆಲ ಭಾಗಗಳನ್ನು ನೆರೆಯ ರಾಜ್ಯದವರು ತಮ್ಮದು ಎಂದು ಹೇಳಿಕೆ ನೀಡುತ್ತಿದ್ದಾರೆ. ಅದಕ್ಕೆ ನಮ್ಮ ಸಂಘಟನೆ ತಕ್ಕ ಉತ್ತರ ನೀಡಿದ್ದು, ಮುಮದಿನ ದಿನದಲ್ಲಿ ಗ್ರಾಮೀಣ ಭಾಗದ ಸಮಸ್ಯೆ ಹಾಗೂ ಸರ್ಕಾರದಿಂದ ದೊರೆಯುವ ಯೋಜನೆಗಳ ಮಾಹಿತಿ ನೀಡುವ ಮೂಲಕ ವಿಭಿನ್ನವಾಗಿ ಸಂಘಟನೆ ಕಾರ್ಯನಿರ್ವಹಿಸಲಿದೆ ಎಂದರು.
ಪ್ರಸುತ್ತ ಸಾಲಿನ ಗ್ರಾಮ ಪಂಚಾಯತಿ ಸದಸ್ಯರಾಗಿ ಆಯ್ಕೆಯಾದ ಸಂಘಟನೆಯ ಸದಸ್ಯರಾದ ಸಚೀನ ನಾಯ್ಕ ಹಾಗೂ ಜ್ಞಾನೇಶ್ವರ ನಾಯ್ಕ ಮೊಳ್ಕೋಡ್ ಇವರನ್ನು ವೇದಿಕೆಯಲ್ಲಿ ಸನ್ಮಾನಿಸಿ ಗೌರವಿಸಲಾಯಿತು.
ಅಧ್ಯಕ್ಷತೆ ವಹಿಸಿದ್ದ ಸಂಘಟನೆಯ ರಾಜ್ಯಾಧ್ಯಕ್ಷ ಮಂಚೇಗೌಡ ಬಿ.ಎಚ್, ಮಾತನಾಡಿ ನಮ್ಮ ಸಂಘಟನೆ ೨೩ ಜಿಲ್ಲೆ, ೧೩೩ ತಾಲೂಕ ಕಮೀಟಿ ಕಾರ್ಯನಿರ್ವಹಿಸುತ್ತಿದ್ದು, ಬಾಷೆಯ ಬಗ್ಗೆ ಅಭಿಮಾನ ತೋರಿಸುತ್ತಾ ಹಲವು ಸಮಾಜಮುಖಿ ಕಾರ್ಯ ಮಾಡುತ್ತಿದೆ. ಈ ಬಾರಿ ರಾಜ್ಯದೆಲ್ಲಡೆ ೨೧ ಸದಸ್ಯರು ಗ್ರಾಮ ಪಂಚಾಯತಿ ಸದಸ್ಯರಾಗಿ ಆಯ್ಕೆ ಆಗಿರುದು ಸಂಘಟನೆಯ ಶಕ್ತಿಯಾಗಿದೆ. ಗ್ರಾಮೀಣ ಭಾಗವಾದರೂ ಮೂರನೇ ವರ್ಷದ ಕಾರ್ಯಕ್ರಮ ಅರ್ಥಪೂರ್ಣವಾಗಿ ನಡೆದಿದೆ ಎಂದರು.
ವೇದಿಕೆಯಲ್ಲಿ ಕಡ್ಲೆ ಗ್ರಾಮ ಪಂಚಾಯತ ಅಧ್ಯಕ್ಷ ಗೋವಿಂದ ಗೌಡ, ಗ್ರಾಮ ಪಂಚಾಯತ ಸದಸ್ಯೆ ದೀಪಾ ನಾಯ್ಕ, ಮಾಜಿ ಸದಸ್ಯ ಕೃಷ್ಣ ಗೌಡ ಹಳಗೇರಿ, ಸಂಘಟನೆಯ ಪ್ರಮುಖರಾದ ಹೇಮರಾಜ ಪಾಟೀಲ್ ಬಿ.ಎಚ್.ನಾಗರಾಜ ನಾಯ್ಕ, ಬಾಬು ಅಂಬಿಗ, ಉದಯ ಪಾಲೇಕರ್, ಜಿ.ಆರ್.ನಾಯ್ಕ, ಜ್ಞಾನೇಶ್ವರ ನಾಯ್ಕ, ಸಚೀನ ನಾಯ್ಕ, ಎಸ್.ಡಿ.ಎಂ.ಸಿ ಅಧ್ಯಕ್ಷೆ ಸುವರ್ಣ ನಾಯ್ಕ, ಶಾಲಾ ಮುಖ್ಯಪಧ್ಯಾಪಕರಾದ ಕಲಾವತಿ ಮತ್ತಿತರರು ಹಾಜರಿದ್ದರು. ಸಭಾ ಕಾರ್ಯಕ್ರಮದ ಬಳಿಕ ಜಿಲ್ಲಾ ಮಟ್ಟದ ಹಗ್ಗಜಗ್ಗಾಟ ಹಾಗೂ ರಸಮಂಜರಿ ಕಾರ್ಯಕ್ರಮ ಜರುಗಿತು.
Leave a Comment