ಹೊನ್ನಾವರ: ತಾಲೂಕಿನ ಹಿಂದಿ ಉಪನ್ಯಾಸಕರಾದ ಮಹೇಶ ಹೆಗಡೆ ಮಾಳ್ಕೋಡ್ ಕೊರೋನಾ ಲಾಕ್ ಡೌನ್ ಸಮಯದ ಬಿಡುವಿನ ವೇಳೆಯಲ್ಲಿ ಹತ್ತನೇ ತರಗತಿಯ ವಿದ್ಯಾರ್ಥಿಗಳ ಅನೂಕೂಲಕ್ಕಾಗಿ ಆರಂಭಿಸಿದ ” ಹಿಂದಿ ಗ್ಯಾನ್ ಬಂಧು ಉಚಿತ ಯುಟ್ಯೂಬ್ ಚಾನೆಲ್
ಇದೀಗ ೧೦ ಸಾವಿರಕ್ಕೂ ಹೆಚ್ಚು ಚಂದದಾರನ್ನು ಒಳಗೊಂಡಿದೆ. ಅಲ್ಲದೇ ೩.೫೦ಲಕ್ಷಕ್ಕೂ ಹೆಚ್ಚು ರಾಜ್ಯದ ವಿದ್ಯಾರ್ಥಿಗಳು ಇದರ ಲಾಭ ಪಡೆದಿದ್ದಾರೆ. ಇವರ ಸಮಾಜಮುಖಿ ಕಾರ್ಯಕ್ಕೆ ಸಾರ್ವಜನಿಕ ವಲಯದಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.

Leave a Comment