ಹೊನ್ನಾವರ: ಕೇಂದ್ರ ಹಾಗೂ ರಾಜ್ಯದ ಬಿಜೆಪಿ ಸರ್ಕಾರದ ಜನವಿರೋಧಿ ನೀತಿ ವಿರುದ್ದ ರಾಜ್ಯದ ೧೦೦ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೇಸ್ ಪಕ್ಷ ಬೆಂಗಳೂರಿನ ಕ್ವೀನ್ಸ ರಸ್ತೆಯಲ್ಲಿರುವ ಕೆ.ಪಿ.ಸಿ.ಸಿ ಕಛೇರಿಯ ಆವರಣದಲ್ಲಿ ಹಮ್ಮಿಕೊಂಡ ಜನಧ್ವನಿ ಜಾಥಾ ಕಾರ್ಯಕ್ರಮಕ್ಕೆ ಕೆ.ಪಿ.ಸಿ.ಸಿ. ಅಧ್ಯಕ್ಷ ಡಿ.ಕೆ ಶಿವಕುಮಾರ್ ಚಾಲನೆ ನೀಡಿದರು.

ಕೇಂದ್ರ ಸರ್ಕಾರದ ಹಲವು ಜನವಿರೋಧಿ ಕಾಯ್ದೆ ಹಾಗೂ ಬೆಲೆ ಏರಿಕೆ ವಿರುದ್ದ ದೇವನಹಳ್ಳಿಯವರೆಗೆ ಪಾದಯಾತ್ರೆಯಲ್ಲಿ ರಾಜ್ಯದ ಕಾಂಗ್ರೇಸ್ ನಾಯಕರಾದ ಡಿ.ಕೆ.ಶಿವಕುಮಾರ್,ಸಿದ್ದರಾಮಯ್ಯ , ಮಲ್ಲಿಕಾರ್ಜುನ ಖರ್ಗೆ, ಎಸ್.ಆರ್.ಪಾಟೀಲ್ ಇವರೊಂದಿಗೆ ಜಿಲ್ಲೆಯಿಂದ ಮಾಜಿ ಸಚೀವ ಆರ್.ವಿ.ದೇಶಪಾಂಡೆ, ಜಿಲ್ಲಾ ಕಾಂಗ್ರೇಸ್ ಅಧ್ಯಕ್ಷ ಭೀಮಣ್ಣ ನಾಯ್ಕ, ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಮಜೀದ್ ಶೇಖ್, ಬ್ಲಾಕ್ ಅಧ್ಯಕ್ಷರಾದ ಜಗದೀಪ ತೆಂಗೇರಿ, ಸಂತೋಷ ನಾಯ್ಕ, ಕಿಸಾನ್ ಕಾಂಗ್ರೇಸ್ ಪ್ರಮುಖರಾದ ಶಿವರಾಮ ನಾಯ್ಕ ಭಾಗವಹಿಸಿದ್ದರು.
Leave a Comment