• Skip to main content
  • Skip to secondary menu
  • Skip to primary sidebar
  • Skip to footer
  • ಮುಖಪುಟ
  • ಅಂಕಣಗಳು
  • ಆರೋಗ್ಯ
    • ಮನೆಮದ್ದು
  • ವಿಡಿಯೋ
  • ಪುರವಣಿಗಳು
  • ಸಂಸ್ಕೃತಿ-ಕಲೆ
  • Live News
  • Classifieds
    • Submit FREE Classified Ad

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
  • ರಾಷ್ಟ್ರೀಯ
  • ಅಂತರರಾಷ್ಟ್ರೀಯ
  • ಕ್ರೀಡೆ
  • ಉದ್ಯೋಗ
  • ಅಪರಾಧ
  • ಕೃಷಿ
    • ಪಶುವೈದ್ಯಕೀಯ
  • ಪ್ರವಾಸ
  • ಸಿನೆಮಾ

ನೀರಿನ ಸಮಸ್ಯೆಗೆ ಶೀಘ್ರ ಪರಿಹಾರ; ಸಚೀವ ಬಿ.ಎ.ಬಸವರಾಜು

March 3, 2021 by Vishwanath Shetty Leave a Comment

ಅಭಿವೃದ್ದಿಯಲ್ಲಿ ರಾಜಕಾರಣ ಮಾಡುವುದು ಸರಿ ಇಲ್ಲ. ಅಭಿವೃದ್ದಿ ಮುಖ್ಯ ರಾಜಕಾರಣ ಮುಖ್ಯವಲ್ಲ ಎಂದು ನಗರಭಿವೃದ್ದಿ ಸಚೀವ ಬಿ.ಎ.ಬಸವರಾಜು ಹೇಳಿದರು.
ಅವರು ಹೊನ್ನಾವರ ಪಟ್ಟಣ ಹಾಗೂ ಮಾರ್ಗಮಧ್ಯದ 9 ಗ್ರಾಮ ಪಂಚಾಯತಿಗಲಿಗೆ ಶರಾವತಿ ಕುಡಿಯುವ ನೀರು ಸರಬರಾಜು ಯೋಜನೆಯ ಕಾಮಗಾರಿಗೆ ಪಟ್ಟಣದ ಪ್ರಭಾತನಗರದಲ್ಲಿ ಚಾಲನೆ ನೀಡಿದ ಬಳಿಕ ಮಾತನಾಡಿ ಹಲವು ವರ್ಷಗಳ ಕನಸು ಇಂದು ಈಡೇರಿದ್ದು, ಇದರಿಂದ ಈ ಭಾಗದ ಜನರ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ದೊರೆಯಲಿದೆ. ಈ ಯೋಜನೆ ಶೀಘ್ರವಾಗಿ ಮುಗಿಸುವ ಜೊತೆ ಪ್ರತಿ ತಿಂಗಳಿಗೊಮ್ಮೆ ವರದಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಯಾವುದೇ ಕಾರಣಕ್ಕೂ ಕಳಪೆ ಕಾಮಗಾರಿ ನಡೆಯದಂತೆ ನೋಡಿಕೊಳ್ಳಬೇಕಿದ್ದು, ಇಂತಹದು ನಡೆದರೆ ನೇರವಾಗಿ ಅಧಿಕಾರಿಗಳನ್ನು ಹೊಣೆಯನ್ನಾಗಿಸಿ, ನಿದ್ರಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳುದಾಗಿ ಎಚ್ಚರಿಸಿದರು. ಜಿಲ್ಲೆಯ ಐದು ನದಿಗಳ ನೀರನ್ನು ಉಪಯೋಗಿಸಿಕೊಂಡು ಜಿಲ್ಲೆಯ ಎಲ್ಲ ಪಟ್ಟಣಗಳಿಗೆ ಸಮಗ್ರ ಕುಡಿಯುವ ನೀರಿನ ಯೋಜನೆ ರೂಪಿಸಲಾಗುವುದು. ದಾಂಡೇಲಿ ಕುಡಿಯುವ ನೀರಿನ ಕಾಮಗಾರಿಗೆ 85 ಕೋಟಿ ರೂ., ಯಲ್ಲಾಪುರಕ್ಕೆ ಕಾಳಿನದಿಯುಂದ 40 ಕೋಟಿ ರೂ. ವೆಚ್ಚದ ಕುಡಿಯುವ ನೀರಿನ ಯೋಜನೆಗೆ ಪ್ರಸ್ತಾವನೆ ಸಲ್ಲಿಕೆಯಾಗಿದ್ದು ಮಂಜೂರಾತಿ ನೀಡಲಾಗುವುದು ನನ್ನ ಅವಧಿಯಲ್ಲಿ ಜಿಲ್ಲೆಗೆ ಕನಿಷ್ಟ ಮೂರು ಬಾರಿ ಮತ್ತೆ ಭೇಟಿ ನೀಡಲು ಉತ್ಸುಕನಾಗಿದ್ದು, ಜಿಲ್ಲೆಯ ನಾಗರಿಕರಿಗೆ ಸರ್ಕಾರದಿಂದ ಸಿಗುವ ಸೌಲಭ್ಯ ಪ್ರಾಮಾಣಿಕವಾಗಿ ತಲುಪಿಸುವ ಕಾರ್ಯಕ್ಕೆ ಸದಾ ಬೆಂಬಲ ನೀಡುದಾಗಿ ಭರವಸೆ ನೀಡಿದರು.
ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ ಮಾತನಾಡಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಐದು ಪ್ರಮುಖ ನದಿಗಳಿದ್ದು ಸಾವಿರಾರು ಕ್ಯೂಸೆಕ್ ನೀರು ಸಮುದ್ರ ಪಾಲಾಗುತ್ತಿದೆ. ಕುಡಿಯುವ ಮತ್ತು, ಕೃಷಿಗೆ ನೀರಿಗೆ ತತ್ವಾರವಾಗಿದೆ. ಇಡೀ ಜಿಲ್ಲೆಗೆ ಕೃಷಿಗೆ ಮತ್ತು ಕುಡಿಯುವ ನೀರು ಕೊಡುವ ಜಲಮೂಲ ಇದ್ದರೂ ಇಷ್ಟು ವರ್ಷಗಳ ವರೆಗೆ ಕೊಡಲು ಸಾಧ್ಯವಾಗಿಲ್ಲ. ಜಿಲ್ಲೆಗೆ ಐದು ನದಿಗಳ ನೀರಿನ ಉಪಯೋಗ ಆಗÀಬೇಕಿದೆ. ಈ ವರೆಗಿನ ಸರ್ಕಾರದ ಅವಧಿಯಲ್ಲಿ ಈ ಬಾರಿ ಬರುವಷ್ಟು ಜಿಲ್ಲೆಗೆ ಮಂತ್ರಿಗಳು ಬಂದಿರಲಿಲ್ಲ. ಮಂತ್ರಿಗಳು ಬರಲು ಈ ಹಿಂದಿನ ಸಚೀವರಾದವರು ಬಿಟ್ಟಿರಲಿಲ್ಲ ಎಂದು ಮಾಜಿ ಸಚೀವ ದೇಶಪಾಂಡೆ ಹೆಸರೆ ಹೇಳದೆ ಟಾಂಗ್ ನೀಡಿದರು. ರೇಲ್ವೆ, ರಸ್ತೆ, ನೀರಾವರಿಯಾದರೆ ಉದ್ಯೋಗ ನಿರ್ಮಾಣ ಆಗುವುದು. ಪ್ರವಾಸೋದ್ಯಮ ಜಿಲ್ಲೆಯಾಗುವ ನಿಟ್ಟಿನಲ್ಲಿ ಯೋಜನೆಗಳು ಕಾರ್ಯರೂಪಕ್ಕೆ ಬರಬೇಕು ಎಂದರು.


ಇ ಸ್ವತ್ತಿನ ಸಮಸ್ಯೆ ಬಗೆಹರಿಸಲು ಕುರಿತು ಉಪಸಮಿತಿ ರಚಿಸಲಾಗಿದೆ. ಅರಣ್ಯ ಇಲಾಖೆಯ 57 ಸಾವಿರ ಹೆಕ್ಟೇರ್ ಪ್ರದೇಶ ಡಿಫಾರೆಸ್ಟ್ ಆಗಿದ್ದರೂ ಡಿನೋಟಿಫೈ ಇನ್ನೂ ಆಗಿಲ್ಲ ಎಂದ ಅವರು ಜಿಲ್ಲಾಧಿಕಾರಿಗಳು ಮತ್ತು ಜಿ.ಪಂ. ಮುಖ್ಯ ಕಾರ್ಯ ನಿರ್ವಹಣಾಧಿಕಾರಿಯವರು ಜಿಲ್ಲೆಯ ಜ್ವಲಂತ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಪ್ರಯತ್ನ ಮಾಡಬೇಕು ಎಂದರು.
ಶಾಸಕ ಸುನೀಲ ನಾಯ್ಕ ಮಾತನಾಡಿ ತಾಲೂಕಿನ 9 ಗ್ರಾಮ ಪಂಚಾಯಿತಿಗಳಿಗೆ ಶರಾವತಿಯಿಂದ ಕುಡಿಯುವ ನೀರಿನ ಯೋಜನೆ ಅನುಷ್ಠಾನವಾಗುತ್ತಿರುವುದು ಮಹತ್ವದ ಕಾರ್ಯವಾಗಿದೆ. ಅಭಿವೃದ್ದಿ ಪರ ಧ್ವನಿ ಎತ್ತುವ ಮೂಲಕ ಕ್ಷೇತ್ರದ ಮತದಾರರ ಋಣ ತೀರಿಸಬೇಕಿದೆ. ತಾಲೂಕಿನ ಮಂಕಿ ಗ್ರಾಮ 50 ಸಾವಿರ ಜನಸಂಖ್ಯೆ ಹೊಂದಿದ್ದು 156 ಕೋಟಿ ರೂ.ಗಳ ಬಹುಗ್ರಾಮ ಕುಡಿಯುವ ಯೋಜನೆಯ ಕ್ಯಾಬಿನೆಟ್‍ನಲ್ಲಿದ್ದು ಇದನ್ನು ಮಂಜೂರಾತಿ ನೀಡಬೇಕು ಎಂದು ನಗರಾಭಿವೃದ್ದಿ ಸಚಿವ ಬಿ.ಎ. ಬಸವರಾಜ ಅವರಲ್ಲಿ ವಿನಂತಿಸಿದರು.
ಶಾಸಕ ದಿನಕರ ಶೆಟ್ಟಿ ಅಧ್ಯಕ್ಷತೆ ವಹಿಸಿ ಮಾತನಾಡಿ ಶರಾವತಿ ಕುಡಿಯುವ ನೀರಿನ ಯೋಜನೆಗೆ ಇಷ್ಟೆಲ್ಲ ಪೈಪ್ ಬಂದಿರುವುದನ್ನು ಕಂಡು ವಿರೋಧಿಗಳಿಗೆ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಅದರಿಂದಲೇ ,ಶರಾವತಿ ಕುಡಿಯುವ ನೀರಿನ ಯೋಜನೆಗೆ ಸಿದ್ದರಾಮಯ್ಯವಬರು ಗುದ್ದಿಲಿಪೂಜೆ ಮಾಡಿದ್ದರು. ಈಗ ಮತ್ತೆ ಚಾಲನೆ ನೀಡುವ ಕೆಲಸ ಏಕೆ ಮಾಡುತ್ತಿದ್ದಾರೆ ಎಂದು ವಿರೋಧಿಗಳು ಪ್ರಶ್ನಿಸುತ್ತಿದ್ದಾರೆ. ಹಿಂದಿನ ಸರಕಾರದ ಅವಧಿಯಲ್ಲಿ ಮಂಜೂರಿ ಆಗಿರುವುದು ನಿಜ . ಆದರೆ ನೆನೆಗುದಿಗೆ ಬಿದ್ದಿತ್ತು. ಇದೇ ಯೋಜನೆ ಬಗ್ಗೆ 2010 ರಲ್ಲಿ ತಾನು ಶಾಸಕನಾಗಿದ್ದಾಗ ಐಆರ್‍ಬಿ ಯವರು ಚತುಷ್ಪಥ ಹೆದ್ದಾರಿ ಕಾಮಗಾರಿ ಮಾಡುವಾಗ ಕುಮಟಾದಿಂದ ಹೊನ್ನಾವರಕ್ಕೆ ಬರುತ್ತಿರುವ ಮರಾಕಲ್ ನೀರಿನ ಪೈಪನ್ನು ಸ್ಥಳಾಂತರಿಸಬೇಕಾಗುತ್ತದೆ. ಅದೇ ಖರ್ಚಿನ್ನು ಉಪಯೋಗಿಸಿಕೊಂಡು ಶರಾವತಿ ನದಿಯಿಂದ ಹೊನ್ನಾವರಕ್ಕೆ ನೀರು ಪೂರೈಸಿದರೆ ಕಡಿಮೆ ಖರ್ಚನಲ್ಲಿ ಆಗುತ್ತದೆ ಎಂದು ನಾನು ವಿಧಾನ ಸಭೆಯಲ್ಲಿ ಪ್ರಸ್ತಾಪಿಸಿದ್ದೆ. ಕಾಗದ ಪತ್ರ ಅರಣ್ಯ ಇಲಾಖೆಗೆ ಹೋಗಿ ವಾಪಸ್ಸು ಬರುತ್ತಿತ್ತು. ತಾನು ಈ ಬಾರಿ ಶಾಸಕನಾದ ನಂತರ ಬೆಂಗಳೂರಿನ ಅರಣ್ಯ ಇಲಾಖೆಗೆ ಅನೇಕ ಸಲ ಹೋಗಿ ಅನುಮತಿ ತಂದಿದ್ದೇನೆ. ಹೊನ್ನಾವರ ಪಟ್ಟಣದ ಮಾರ್ಗ ಮಧ್ಯೆ 9 ಗ್ರಾಮ ಪಂಚಾಯಿತಿಗಳಿಗೆ 56 ಕೋಟಿ ರೂ. ಗಳನ್ನು ಕಾಂಗ್ರೆಸ್ ಜೆಡಿಎಸ್ ಸರಕಾರದಲ್ಲಿ ಕೃಷಿ ಸಚಿವರಾಗಿದ್ದ ಕೃಷ್ಣ ಬೈರೇಗೌಡರಿಂದ ಮಂಜೂರಾತಿ ದೊರಕಿಸಿಕೊಂಡ ಪತ್ರ ನನ್ನ ಬಳಿ ಇದೆ ಎಂದರು.


………………………………..
ಹೊನ್ನಾವರದಲ್ಲಿ ವಿಮಾನ ನಿಲ್ದಾಣವಾಗಬೇಕು ಎಂದು ಯಾರೋ ಒಬ್ಬರು ಕಾಗದ ಬರೆದಿದ್ದರೆ, 50 ವರ್ಷಗಳ ನಂತರ ಯಾವುದೋ ಸರಕಾರ ವಿಮಾನ ನಿಲ್ದಾಣ ಮಾಡಿದರೆ ನಾನು ಕಾಗದ ಬರೆದಿದ್ದರಿಂದ ವಿಮಾನ ನಿಲ್ದಾಣ ಆಯಿತು ಎಂದು ಹೇಳಿಕೊಂಡರೆ ಹೇಗೆ. ಕೊಂಕಣ ರೇಲ್ವೆ ಯೋಜನೆಯನ್ನು ಮಾಡುವಾಗ ವಾಜಪೇಯಿ ಪ್ರಧಾನಿಯಾಗಿದ್ದರು. ಜಾರ್ಜ ಫನಾಂಡೀಸ್, ಮಧುದಂಡವತೆ, ರಾಮಕೃಷ್ಣ ಹೆಗಡೆ ಅವರ ಪ್ರಯತ್ನದೀದ ಆಗಿದೆ. ಆದರೆ ರೈಲು ಬಿಡುವಾಗ ನೀವು ಕಾಂಗ್ರೆಸ್ ನವರು ರಿಬ್ಬನ್ ಕತ್ತರಿಸಲಿಲ್ವಾÉ ಎಂದು ಶಾಸಕ ದಿನಕರ ಶೆಟ್ಟಿ ಛೇಡಿಸಿದರು.


………………………
ವೇದಿಕೆಯಲ್ಲಿ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ವ್ಯವಸ್ಥಾಪಕ ನಿರ್ದೇಶಕ ಟಿ.ಹೆಚ್.ಎಂ. ಕುಮಾರ, ಪ.ಪಂ. ಅಧ್ಯಕ್ಷ ಶಿವರಾಜ ಮೇಸ್ತ, ಉಪಾಧ್ಯಕ್ಷೆ ಮೇಧಾ ನಾಯ್ಕ, ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್ ಎಂ.ಪಿ., ಜಿ.ಪಂ. ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಪ್ರಿಯಾಂಗಾ ಎಂ., ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಮುಖ್ಯ ಅಭಿಯಂತರ ಕೆ.ವಿ. ಶ್ರೀಕೇಶವ, ಜಿಲ್ಲಾ ನಗರಾಭಿವೃದ್ದಿ ಕೋಶದ ಯೋಜನಾ ನಿರ್ದೇಶಕ ಕೃಷ್ಣಮೂರ್ತಿ ಹೆಚ್. ಕೆ. ಡಿ.ಏಪ್.ಓ ಗಣಪತಿ, ಜಿಲ್ಲಾ ಪಂಚಾಯತ ಸದಸ್ಯ ಶ್ರೀಕಲಾ ಶಾಸ್ತ್ರಿ, ಗ್ರಾ.ಪಂ. ಅಧ್ಯಕ್ಷರು, ಉಪಾಧ್ಯಕ್ಷರು, ಪ.ಪಂ. ಸದಸ್ಯರು ಉಪಸ್ಥಿತರಿದ್ದರು.

Share this:

  • WhatsApp
  • Twitter
  • Facebook
  • Telegram
  • Email
  • Print

Related News:

Filed Under: Canara News, Honavar News, Trending Tagged With: Drainage Board Manager, Karnataka Urban Water Supply, Legislator Dinakara Shetty Presiding over the meeting, Sharavati Drinking Water Supply Scheme, ಒಳಚರಂಡಿ ಮಂಡಳಿ ವ್ಯವಸ್ಥಾಪಕ, ಕರ್ನಾಟಕ ನಗರ ನೀರು ಸರಬರಾಜು, ಕ್ಯೂಸೆಕ್ ನೀರು ಸಮುದ್ರ, ನಿದ್ರಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳುದಾಗಿ ಎಚ್ಚರಿಸಿದರು, ಪಂಚಾಯತಿಗಲಿಗೆ ಶರಾವತಿ ಕುಡಿಯುವ ನೀರು, ವಹಿಸಿ ಮಾತನಾಡಿ ಶರಾವತಿ, ಶರಾವತಿ ಕುಡಿಯುವ ನೀರು ಸರಬರಾಜು ಯೋಜನೆ, ಶಾಸಕ ದಿನಕರ ಶೆಟ್ಟಿ ಅಧ್ಯಕ್ಷತೆ, ಸರಬರಾಜು ಯೋಜನೆ

Explore More:

Vishwanath Shetty

About Vishwanath Shetty

Reader Interactions

Leave a Comment Cancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 970,267 visitors

Get Updates on WhatsApp




✓ Valid

Footer

ಶ್ವಾಸ್ ಟೀ ಮಾರುಕಟ್ಟೆಗೆ ಬಿಡುಗಡೆಗೊಳಿಸಿದ ಶಾಸಕ ದಿನಕರ್ ಶೆಟ್ಟಿ

September 2, 2020 By Vishwanath Shetty

400ಕೆಜಿ ದನದ ಮಾಂಸ ವಶ: ಇಬ್ಬರು ಆರೋಪಿಗಳ ಬಂಧನ

April 22, 2021 By bkl news

ರಾಜ್ಯ ನೌಕರರ ವಿಮಾ ನಿಗಮ (ESIC ) ದಲ್ಲಿ ಹುದ್ದೆಗಳಲ್ಲಿ ಅರ್ಜಿ ಆಹ್ವಾನ

April 22, 2021 By deepika

ಅಕ್ರಮ ಗೋವಾ ಸರಾಯಿ ವಶ

April 21, 2021 By Yogaraj SK

ದೋಣಿಯಲ್ಲಿ 3,000 ಕೋಟಿ ರೂ ಬೆಲೆಯ ಡ್ರಗ್ಸ್ ಪತ್ತೆ

April 21, 2021 By Sachin Hegde

ನೀಲಗೋಡ ಜಾತ್ರೆ ಸಂಪನ್ನ

April 21, 2021 By Vishwanath Shetty

ಇಂದು ಹೊನ್ನಾವರದಲ್ಲಿ ವಿದ್ಯುತ್ ವ್ಯತ್ಯಯ

April 21, 2021 By Vishwanath Shetty

© 2021 Canara Buzz · Contributors · Privacy Policy · Terms & Conditions

loading Cancel
Post was not sent - check your email addresses!
Email check failed, please try again
Sorry, your blog cannot share posts by email.