ಹೊನ್ನಾವರ: ತಾಲೂಕಿನ ಮುಗ್ವಾ ಗ್ರಾಮದ ಮೂಡಕಟ್ಟೆಗೆ 35 ಲಕ್ಷ ವೆಚ್ಚದ ರಸ್ತೆ ಹಾಗೂ ಚಿಕ್ಕನಕೋಡ ಪಂಚಾಯತಿಯ ಗುಂಡಿಬೈಲ್ ರಸ್ತೆಗೆ ಮರುಡಾಂಬರೀಕರಣ ಕಾಮಗಾರಿಗೆ ಭಟ್ಕಳ ಹೊನ್ನಾವರ ಶಾಸಕ ಸುನೀಲ ನಾಯ್ಕ ಬುಧವಾರ ಗುದ್ದಲಿಪೂಜೆ ನೇರವೇರಿಸಿದರು. ನಂತರ ಮಾತನಾಡಿ ಮುಗ್ವಾ ಗ್ರಾಮದ ಮೂಡಕಟ್ಟೆ ರಸ್ತೆಗೆ ಇದೇ ಪ್ರಥಮವಾಗಿ ಹಣ ಬಿಡುಗಡೆಯಾಗಿದೆ.

ಇದೇ ರಸ್ತೆಯ ಪಕ್ಕದ ಮುಂದುವರೆದ ರಸ್ತೆಗೆ ಕೆಲವೇ ದಿನದಲ್ಲಿ ಟೆಂಡರ್ ಆಗಲಿದೆ. ನನ್ನ ಕನಸಾದ ಗುಂಡಬಾಳ ಮತ್ತು ಗುಂಡಿಬೈಲ್ ರಸ್ತೆ ಕಾಮಗಾರಿ ಈಗಾಗಲೇ ಪ್ರಗತಿಯಲ್ಲಿದ್ದು, ಇದರ ಹೊರತಾಗಿ ರಾಷ್ಟ್ರೀಯ ಹೆದ್ದಾರಿಯಿಂದ ಗುಂಡಿಬೈಲ್ ಮಾರ್ಗಕ್ಕೆ ತೆರಳುವ 2 ಕಿಮೀ ರಸ್ತೆ ಮರುಡಾಂಬರಿಕರಣ ಮಾಡಲು ಇಂದು ಚಾಲನೆ ನೀಡಿದ್ದೇನೆ. ಗ್ರಾಮದ ಇನ್ನುಳಿದ ರಸ್ತೆಗೆ ಹಂತಹಂತವಾಗಿ ಸುಧಾರಣೆ ಮಾಡಲಿದ್ದೇನೆ ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಪಟ್ಟಣ ಪಂಚಾಯತ ಅಧ್ಯಕ್ಷ ಶಿವರಾಜ ಮೇಸ್ತ, ಉಪಾಧ್ಯಕ್ಷೆ ಮೇಧಾ ನಾಯ್ಕ ಜಿಲ್ಲಾ ಪಂಚಾಯತ ಸದಸ್ಯೆ ಶ್ರೀಕಲಾ ಶಾಸ್ತ್ರಿ, ಗ್ರಾಮ ಪಂಚಾಯತ ಅಧ್ಯಕ್ಷ ವಿಘ್ನೇಶ್ವರ ಹೆಗಡೆ, ಪಟ್ಟಣ ಪಂಚಾಯತ ಸದಸ್ಯರಾದ ನಾಗರಾಜ ಭಟ್, ಮಹೇಶ ಮೇಸ್ತ, ಗ್ರಾಮ ಪಂಚಾಯತ ಸದಸ್ಯರಾದ ನೂತನ ನಾಯ್ಕ, ಶೋಭಾ ಮೇಸ್ತ, ಕಿರಣ ಭಂಡಾರಿ ಇಲಾಖೆಯ ಅಧಿಕಾರಿಗಳಾದ ಯೋಗಾನಂದ, ಎನ್.ಎಸ್.ನಾಯ್ಕ ಬಿಜೆಪಿ ಕಾರ್ಯಕರ್ತರು, ಸಾರ್ವಜನಿಕರು ಹಾಜರಿದ್ದರು.

Leave a Comment