
ಹೊನ್ನಾವರ; ತಾಲೂಕಿನ ಇತಿಹಾಸ ಪ್ರಸಿದ್ದ ಕ್ಷೇತ್ರಗಳಲ್ಲೊಂದಾದ ಖರ್ವಾ ಗ್ರಾಮದ ಕೊಳಗದ್ದೆ ಶ್ರೀ ಸಿದ್ದಿ ವಿನಾಯಕ ದೇವಾಲಯದ ಮಹಾರಥೋತ್ಸವವು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಸಾವಿರಾರು ಸಂಖ್ಯೆಯ ಭಕ್ತಸಾಗರದ ಸಮ್ಮುಖದಲ್ಲಿ ವಿಜ್ರಂಭಣೆಯಿಂದ ಸಂಪನ್ನವಾಯಿತು. ತಾಲೂಕಿನ ಖರ್ವಾ ಗ್ರಾಮದ ಕೊಳಗದ್ದೆಯ ಗುಡ್ಡದ ಮೇಲೆ ಸಮತಟ್ಟಾದ ವಿಶಾಲ ಸುಂದರ ಮೈದಾನದಲ್ಲಿ ಸುತ್ತಮುತ್ತಲಿನ ಜನರ ಆರಾಧ್ಯ ದೈವವಾಗಿ ಸಂಕಟ ನಿವಾರಕನಾಗಿ, ವಿದ್ಯಾ ಬುದ್ಧಿ, ಸಮೃದ್ಧಿಗಳನ್ನು ನೀಡುತ್ತಾ ಭಕ್ತರ ಅಭಿಷ್ಟೆಗಳನ್ನು ಈಡೇರಿಸುವ ದೈವ ಎಂದು ಹಲವು ಭಕ್ತರು ಈ ಕ್ಷೇತ್ರವನ್ನು ನಂಬಿದ್ದಾರೆ. ಪಶ್ಚಿಮ ದಿಕ್ಕಿಗೆ ಮುಖ ಮಾಡಿರುವ ಈ ಸಿದ್ಧಿವಿನಾಯಕನ ದೇವಾಲಯದ ಎದುರಿಗೆ ಬಟ್ಟೆ ವಿನಾಯಕ ಎಂಬ ಉದ್ಭವ ಗಣಪತಿ ಮೂರ್ತಿ ಇರುವುದು ಈ ಕ್ಷೇತ್ರದ ವಿಶೇಷ. ಈ ದೇವಾಲಯಕ್ಕೆ ಅಂದಾಜು ಎಳುನೂರು ವರ್ಷಗಳ ಇತಿಹಾಸವಿದೆ. ಶ್ರೀ ದೇವರಲ್ಲಿ ಅಡಿಕೆ ಸಿಂಗಾರದಿಂದ ಪ್ರಸಾದ ಕೇಳುವ ಪದ್ಧತಿ ಅನಾಧಿಕಾಲದಿಂದಲೂ ನಡೆದು ಬಂದಿದೆ. ಪ್ರತಿ ವರ್ಷ ಮಾಘ ಬಹುಳ ಸಪ್ತಮಿಯಂದು ರಥೋತ್ಸವ ವೈಭವದಿಂದ ನಡೆಯುತ್ತದೆ. ರಥೋತ್ಸವದ ಅಂಗವಾಗಿ ಜಿಲ್ಲೆ ಹಾಗೂ ಹೊರಜಿಲ್ಲೆಯಿಂದ ವಿವಿಧ ಭಕ್ತರು ಶ್ರೀ ಸನ್ನಿದಿಗೆ ಆಗಮಿಸಿ ವಿನಾಯಕನಿಗೆ ವಿವಿಧ ಸೇವೆ ಸಲ್ಲಿಸಿದರು,ರಥೋತ್ಸವಕ್ಕೆ ರಥ ಕಾಣಿಕೆ ಮಾಡಿ,ತಾವು ತಂದ ಫಲಗಳನ್ನು ರಥಕ್ಕೆ ಕಟ್ಟಿದರು. ರಥೊತ್ಸವ ಹಿನ್ನಲೆ ಕೌತುಕ ಬಂಧನ, ಬಲಿಪೂಜೆ, ಮಹಾಗಣಪತಿ ಪಲ್ಲಕ್ಕಿ ಉತ್ಸವ,ಸಂಪೆÇ್ರೀಕ್ಷಣ್ಯ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮ ಜರುಗಿದವು.
Leave a Comment