ಭಟ್ಕಳ:ಆರಂಭದಲ್ಲಿ ಜನೌಷಧಿ ಕೇಂದ್ರದ ಔಷಧಗಳನ್ನು ಐಸಿಯೂನಲ್ಲಿ ಇರುವ ರೋಗಿಗಳಿಗೆ ನೀಡಲು ವೈದ್ಯರೆ ಅನುಮಾನ ಪಡುತ್ತಿದ್ದ ಸಂದರ್ಬಗಳಿದ್ದು ಇಂದು ಪ್ರತಿಯೊಂದು ಸಂದರ್ಬದಲ್ಲೂ ಜನೌಷಧಿ ಕೇಂದ್ರವನ್ನೆ ಅವಲಂಬಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಸರ್ಕಾರಿ ಆಸ್ಪತ್ರೆಯ ಆಡಳಿತಾಧಿಕಾರಿ ಡಾ. ಸವಿತಾ ಕಾಮತ ಹೇಳಿದರು.

ಅವರು ತಹಸಿಲ್ದಾರ ಕಚೇರಿಯ ಸಭಾಂಗಣದಲ್ಲಿ ಭಟ್ಕಳ ಹೊನ್ನಾವರ ತಾಲೂಕಿನ ಜನೌಷಧಿ ಕೇಂದ್ರದ ಮಾಲಕರ ಒಕ್ಕೂಟದ ವತಿಯಿಂದ ೩ನೇ ವರ್ಷದ ಜನೌಷಧಿ ದಿನಾಚರಣೆಯ ಪರಿಚರ್ಚಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಮನುಷ್ಯನ ಖಾಯಿಲೆಗೆ ಅನುಸಾರವಗಿ ಕೆಲವೊಂದು ಔಷಧಗಳು ಒಮ್ಮೆ ಪ್ರಾರಂಭವಾದರೆ ರೋಗಿ ಸಾಯುವವರೆಗೂ ಪ್ರತಿದಿನ ಸೇವಿಸಬೇಕು. ಅಂತಹ ದುಬಾರಿ ಔಷಧಗಳು ಪ್ರಧಾನ ಮಂತ್ರಿ ಜನೌಷಧಿ ಕೇಂದ್ರ ಅತಿ ಕಡಿಮೆ ಬೆಲೆಗೆ ಲಭ್ಯವಿದೆ. ಇದು ಬಡರೋಗಿಗಳಿಗೆ ಒಂದು ಸಮಾಧಾನದ ವಿಷಯ. ಮಾನವನೂ ಆದಷ್ಟು ರೋಗಗಳಿಂದ ದೂರವಿರಬೇಕು ನಿಜ ಆದರೆ ರೋಗಗಳ ಬಂದಾಗ ಅದಕ್ಕೆ ಚಿಕಿತ್ಸೆ ಔಷಧ ಪಡೆಯುವದು ಅಷ್ಟೆ ಅನಿವಾರ್ಯ ಎಂದರು.
ಭಟ್ಕಳ ಹೊನ್ನಾವರ ತಾಲೂಕಿನ ಜನೌಷಧಿ ಕೇಂದ್ರದ ಮಾಲಕರ ಒಕ್ಕೂಟದ ವತಿಯಿಂದ ೩ನೇ ವರ್ಷದ ಜನೌಷಧಿ ದಿನಾಚರಣೆಯ ಪರಿಚರ್ಚಾ ಕಾರ್ಯಕ್ರಮದಅಧ್ಯಕ್ಷತೆ ವಹಿಸಿದ್ದ ಭಟ್ಕಳ ಉಪವಿಭಾಗಾಧಿಕಾರಿ ಸಾಜಿದ್ ಅಹ್ಮದ್ ಮುಲ್ಲಾ ಮಾತನಾಡಿ ದೊಡ್ಡ ದೊಡ್ಡ ಖಾಯಿಲೆಗಳಿಗೂ ಜನೌಷಧಿ ಕೇಂದ್ರದಲ್ಲಿ ಕಡಿಮೆ ಬೆಲೆಯಲ್ಲಿ ಪರಿಕರಗಳು ಲಭ್ಯವಿರುವದು ಬಡವರು ಚಿಕಿತ್ಸೆ ಪಡೆಯಲು ನೆರವಾಗಿದೆ. ಇದರಿಂದಾಗಿ ಜನಸಾಮಾನ್ಯರಿಗೆ ಜನೌಷಧಿ ಕೇಂದ್ರದಲ್ಲಿ ಸಿಗಳಿರುವ ಔಷಧಿಗಳಿಂದ ಅನುಕೂಲವಾಗಲಿದ್ದು ಇದು ಬಡವರಿಗೆ ವರದಾನವಾಗಲಿದೆ ಎಂದರು.
ಈ ಸಂದರ್ಭದಲ್ಲಿ ತಹಸೀಲ್ದಾರ ಕಚೇರಿಯ ವಿಜಯಲಕ್ಷಿö್ಮÃ ಮಣಿ, ಜನೌಷಧಿ ಕೇಂದ್ರದ ಜಿ.ಪ್ರ. ಕಾರ್ಯದರ್ಶಿ ಮಹ್ಮದ್ ಹನೀಫ್, ಜನೌಷಧಿ ಕೇಂದ್ರದ ಮಾಲಿಕರಾದ ಸ್ಕಂದ ಜಿ ನಾಯ್ಕ, ಮೋಹನ ದೇವಾಡಿಗ, ಜಗದೀಶ ಮೊಗೇರ ಇತರರು ಇದ್ದರು. ಶ್ರೀವಲಿ ಶಿಕ್ಷಕ ನಾರಾಯಣ ನಾಯ್ಕ ಕಾರ್ಯಕ್ರಮ ನಿರ್ವಹಿಸಿದರು.
Leave a Comment