ಹೊನ್ನಾವರ: “ಕಲೆ ಎನ್ನುವುದು ಜಾತಿ, ಧರ್ಮ,ಗಡಿ ಮೀರಿ ಎಲ್ಲರನ್ನೂ ಒಂದಾಗಿಸುತ್ತದೆ. ಜೀವನೋತ್ಸವ ತರುವ ಅದ್ಭುತವಾದ ಶಕ್ತಿ ಕಲೆಯಲ್ಲಿ ಅಡಗಿದೆ” ಎಂದು ವಿದ್ವಾನ್ ಶಿವಾನಂದ ಭಟ್ಟ ಹಡಿನಬಾಳ ಅಭಿಪ್ರಾಯಪಟ್ಟರು. ತಾಲೂಕಿನ ಖರ್ವಾ ಕೊಳಗದ್ದೆಯ ಶ್ರೀ ಸಿದ್ದಿವಿನಾಯಕ ಸಭಾಭವನದಲ್ಲಿ ಯಶಸ್ವಿನಿ ಸಾಂಸ್ಕ್ರತಿಕ ವೇದಿಕೆಯ ೧೮ನೇ ವರ್ಷದ ವಾರ್ಷಿಕ ಸ್ನೇಹ ಸಮ್ಮೆಳನ ಮತ್ತು ಸನ್ಮಾನ ಸಮಾರಂಭದ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು. ನಮ್ಮ ಕಲೆಯ ಮೂಲ ಜನಪದವಾಗಿದೆ. ಎಲ್ಲಾ ಕಲೆಗಳಲ್ಲಿಯು ಜನಪದವಿದೆ. ಇಂತಹ ಜನಪದ ಕಲಾ ಪ್ರಕಾರಗಳಾದ ನಾಟಕ,ಯಕ್ಷಗಾನ ಕಲೆಗಳನ್ನು ಊಳಿಸಿ ಬೆಳೆಸುವ ಜೊತೆ ಮುಂದಿನ ಪೀಳಿಗೆಗೆ ನೀಡಬೇಕಾದ ಕಾರ್ಯ ಸಂಘ,ಸAಸ್ಥೆಗಳಿದ ನಡೆಯಬೇಕಿದೆ. ಇಂತಹ ಕಾರ್ಯದಲ್ಲಿ ಯಶಸ್ವಿನಿ ಸಾಂಸ್ಕೃತಿಕ ವೇದಿಕೆ ಮುಂಚೂಣಿಯಲ್ಲಿರುವುದು ಶ್ಲಾಘನೀಯವಾಗಿದೆ ಎಂದು ಅಭಿನಂದಿಸಿದರು.

ಖರ್ವಾ ಗ್ರಾಮ ಪಂಚಾಯತ್ ಅಧ್ಯಕ್ಷೆ ಭವಾನಿ ಗೌಡ ಕಾರ್ಯಕ್ರಮ ಉದ್ಘಾಟಿಸಿ ಶುಭ ಕೋರಿದರು.
ಊರಿನ ಹಿರಿಯ ನಾಗರಿಕರಾದ ಈರಾ ಸುಬ್ಬಯ್ಯ ಗೌಡ, ಶ್ರೀ ಸಿದ್ಧಿವಿನಾಯಕ ಪ್ರೌಢಶಾಲೆ ಖರ್ವಾ ಕೊಳಗದ್ದೆಯ ನಿವೃತ್ತ ಮುಖ್ಯಾಧ್ಯಾಪಕ ಎಸ್.ಜೆ ಪಿರ್ಜಾದೆ, ಜೇಮ್ಸ್ ಪೆದ್ರು ಲೋಫೀಸ್,ಜಟ್ಟಿ ಸುಕ್ರು ಹಳ್ಳೇರ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಯಶಸ್ವಿನಿ ಸಾಂಸ್ಕ್ರತಿಕ ವೇದಿಕೆಯ ಅಧ್ಯಕ್ಷ ಆರ್.ಟಿ ಹೆಬ್ಬಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ವೇದಿಕೆಯಲ್ಲಿಯಶಸ್ವಿನಿ ಸಾಂಸ್ಕ್ರತಿಕ ವೇದಿಕೆಯ ಗೌರವಾಧ್ಯಕ್ಷ ಟಿ.ಎಚ್ ಗೌಡ, ಶ್ರೀ ಸಿದ್ಧಿವಿನಾಯಕ ಪ್ರೌಢಶಾಲೆ ಖರ್ವಾ ಮುಖ್ಯಾಧ್ಯಾಪಕ ಎಸ್.ಎಲ್ ಹೆಬ್ಬಾರ್ ದೇವಾಲಯದ ಮೋಕ್ತೆಸರರಾದ ಮುಕುಂದ ಶ್ಯಾನಭಾಗ, ಯಶಸ್ವಿನ ಸಾಂಸ್ಕ್ರತಿಕ ವೇದಿಕೆಯ ನಿರ್ದೇಶಕ ಗಜಾನನ ನಾಯ್ಕ ಉಪಸ್ಥಿತರಿದ್ದರು. ದತ್ತಾತ್ರೇಯ ಮೇಸ್ತ ಸ್ವಾಗತಿಸಿದರು.ಶಿಕ್ಷಕರಾದ ಡಿ.ಬಿ ಮುರಾರಿ,ಚೆನ್ನಕೇಶವ ಹೆಗಡೆ ನಿರೂಪಿಸಿದರು. ಅಶೋಕ್ ರಾಥೋಡ್ ವಂದಿಸಿದರು.
ಸಭಾ ಕಾರ್ಯಕ್ರಮದ ನಂತರ ಶಾಲಾ ವಿದ್ಯಾರ್ಥಿಗಳಿಂದ ನೃತ್ಯ ಪ್ರದರ್ಶನ ನಡೆಯಿತು. ಮಾದೇವ ಹಳ್ಳೇರ್ ಅವರು ಖ್ಯಾತ ಯಕ್ಷಕಲಾವಿದರ ಸಂಭಾಷಣೆ ಮಿಮಿಕ್ರಿ ಮೂಲಕ ಪ್ರಸ್ತುತ ಪಡಿಸಿದರು. ಯಶಸ್ವಿನ ಸಾಂಸ್ಕ್ರತಿಕ ವೇದಿಕೆ ಕಲಾವಿದರಿಂದ ಹಾಗೂ ಅತಿಥಿ ಕಲಾವಿದರಿಂದ ಮದುವೆಯಾದರು ಮಡದಿ ನಾನಲ್ಲ’ ಎಂಬ ಸುಂದರ ಸಾಮಾಜಿಕ ನಾಟಕ ಪ್ರದರ್ಶನಗೊಂಡು ಜನಮನಸೂರೆಗೊಂಡಿತು.
Leave a Comment