ಹೊನ್ನಾವರ: ಸ್ನೇಹಕುಂಜ ಕಾಸರಕೋಡ ಹಾಗೂ ಫ್ಯಾಮಿಲಿ ಪ್ಲ್ಯಾನಿಂಗ್ ಅಸೋಸಿಯೇಶನ್ ಕುಮಟಾ ಇವರ ಸಂಯುಕ್ತಾಶ್ರಯದಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ತಾಲೂಕಿನ ಹಳದಿಪುರದಲ್ಲಿ ನಡೆಯಿತು.

ಮುಖ್ಯ ಅತಿಥಿಗಳಾದ ಹೊನ್ನಾವರದ ಕೃಷಿ ಅಧಿಕಾರಿ ಲಕ್ಷ್ಮೀ ದಳವಾಯಿ ಮಾತನಾಡಿ ಮಹಿಳೆರು ಅಬಲೆಯರಲ್ಲ ಸಬಲರು, ಮಹಿಳೆಯರು ಸಮಾಜದಲ್ಲಿ ಮುನ್ನೆಲೆಗೆ ಬರುವಂತಾಗೇಕು.ಈ ನಿಟ್ಟಿನಲ್ಲಿ ಅವರು ಕರ್ಯಪ್ರವೃತ್ತರಾಗಬೇಕು.ಜೊತೆಗೆ ಮಹಿಳೆಯರು ಆರೋಗ್ಯ ಕಾಪಾಡಿಕೊಳ್ಳುವಲ್ಲಿ ಹೆಚ್ಚಿನ ಖಾಳಜಿ ವಹಿಸಬೇಕು ಎಂದರು.

ಸ್ನೇಹಕುಂಜದ ಸಮಾಜ ಕರ್ಯರ್ತೆ ಚಂದ್ರಕಲಾ ಗಾವಡಿ,ಎಪ್.ಎಪ್.ಎ ಮ್ಯಾನೇಜರ್ ಅಂತಾನ್ ಲೂಯಿಸ್, ಕರ್ಯಕ್ರಮಾಧಿಕಾರಿ ಕುಮಾರಿ ಮಂಜುಳಾ ಗೌಡ,ರೋಹಿಣಿ ಚಂದ್ರಶೇಖರ್ ಮುಂತಾದವರಿದ್ದರು.
Leave a Comment