ಹೊನ್ನಾವರ : ಯೋಗ ಶಿಕ್ಷಕಿ ಶ್ರೀಮತಿ ಛಾಯಾ ನಾಯಕ ಇವರ ನೇತೃತ್ವದಲ್ಲಿ ಪತಂಜಲಿ ಯೋಗ ಸಮಿತಿ ಆಯೋಜಿಸಿದ ಮಹಿಳಾ ದಿನಾಚರಣೆಯನ್ನು ಪ್ರಭಾತನಗರದಲ್ಲಿ ಆಚರಿಸಲಾಯಿತು.
ಉದ್ಯಮಿ ಶ್ರೀಮತಿ ಸುಮಿತ್ರಾ ಕೌಶಿಕ್ ಕಾರ್ಯಕ್ರಮ ಉದ್ಘಾಟಿಸಿದರು. ಎಸ್.ಡಿ.ಎಂ. ಕಾಲೇಜಿನ ಪ್ರಾಂಶುಪಾಲರಾದ ಶ್ರೀಮತಿ ವಿಜಯಲಕ್ಷಿ ನಾಯ್ಕ, ಹಿಂದುಸ್ಥಾನಿ ಗಾಯಕಿ ಶ್ರೀಮತಿ ತಾರಾ ಭಟ್ಟ ಅತಿಥಿಗಳಾಗಿ ಆಗಮಿಸಿದ್ದರು. ಶ್ರೀಮತಿ ದೀಪಾ ಕಾಮತ್ ಯೋಗ ಮಾಡುವುದರಿಂದ ಆಗುವ ಲಾಭಗಳನ್ನು ವಿವರಿಸಿದರು. ಶ್ರೀಮತಿ ತಾರಾ ಭಟ್ಟ ಹಾಡಿದರು. ಶ್ರೀಮತಿ ತ್ರಿವೇಣಿ ಶಾಸ್ತಿ ಪ್ರಾಸ್ತಾವಿಕ ಮಾತನಾಡಿ, ಸ್ವಾಗತಿಸಿದರು. ಶ್ರೀಮತಿ ರೇಷ್ಮಾ ನಾಯ್ಕ ಕಾರ್ಯಕ್ರಮ ನಿರ್ವಹಿಸಿದರು. ಶ್ರೀಮತಿ ಛಾಯಾ ಮತ್ತು ಶಿಬಿರದ ವಿದ್ಯಾರ್ಥಿಗಳು ಯೋಗ ನೃತ್ಯ ಪ್ರಸ್ತುತಪಡಿಸಿದರು. ಮಹಿಳೆಯರಿಂದ ವಿವಿಧ ಆಟಗಳು ನಡೆದವು. ಡಾ. ಮಮತಾ ಶೆಟ್ಟಿ ಮತ್ತು ಊರಿನ ಮಹಿಳೆಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಶ್ರೀಮತಿ ಸುಧಾ ಹೆಗಡೆ ವಂದಿಸಿದರು.
Leave a Comment