ಭಟ್ಕಳ: ತಾಲೂಕಿನ ಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಉತ್ತರ ಕೊಪ್ಪದ ಬಳಿ ಮನೆಯೊಂದರಲ್ಲಿ ನುಗ್ಗಿ ಮನೆಯಲ್ಲಿದ್ದ ಒಂಟಿ ಮಹಿಳೆಯೊರ್ವರನ್ನು ಬರ್ಬರ ಹತ್ಯೆ ಮಾಡಿದ ಪ್ರಕರಣವನ್ನು ಭೇದಿಸಿದ ಭಟ್ಕಳ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿ ನ್ಯಾಯಾಲಯದ ವಶಕ್ಕೆ ಒಪ್ಪಿಸಿದ್ದಾರೆ.
ಉತ್ತರ ಕೊಪ್ಪಾ ನಿವಾಸಿ ಮಾದೇವ ನಾಯ್ಕ ಮತ್ತು ಮಾಸ್ತಮ್ಮ ನಾಯ್ಕ ಬಂಧಿತ ಆರೋಪಿಗಳು. ಇವರು ಲಕ್ಷ್ಮಿ ಕೃಷ್ಣ ನಾಯ್ಕ(೪೫) ಮೃತ ಮಹಿಳೆ. ಮೃತರ ಮನೆಯ ಎದುರು ಇರುವ ದಾರಿ ಪಕ್ಕದಲ್ಲಿ ಬೆಳೆದ ಗೋವೆ ಮರದ ಕೊಂಬೆ ತುಂಡಾಗಿ ಬಿದ್ದ ವಿಚಾರದಲ್ಲಿ ಮೃತರೊಂದಿಗೆ ಮಾಸ್ತಮ್ಮ ನಾಯ್ಕ, ಮಾದೇವ ನಾಯ್ಕ, ಎನ್ನುವವರು ಗಲಾಟೆ ನಡೆಸಿದ್ದರು.
ನಂತರ ಜನವರಿ ೨೩ರ ರಾತ್ರಿ ಮನೆಯೊಳಗೆ ನುಗ್ಗಿ ಬೆಂಕಿ ಹಾಕಿದ್ದು ನಂತರ ಅವರನ್ನು ಬೆಂಕಿಗೆ ದೂಡಲು ಪ್ರಯತ್ನಿಸಿದ್ದಾರೆ. ಅಲ್ಲಿಂದ ತಪ್ಪಿಸಿಕೊಂಡು ಬಂದ ಅವರ ತಲೆಗೆ ಆಯಧದಿಂದ ಬಡಿದು ಹಲ್ಲೆ ನಡೆಸಿದ್ದಾರೆ. ಮೃತರು ಧರಿಸಿದ ಸೀರೆಯನ್ನು ಕೊರಳಿಗೆ ಹಾಕಿ ಕೊಲೆ ಮಾಡಿ ಸಾಕ್ಷö್ಯ ನಾಶ ಪಡಿಸುವ ಪ್ರಯತ್ನ ನಡೆಸಿದ್ದರು. ಆರೋಪಿಗಳು ಪಕ್ಕದ ಮನೆಯವರೆ ಆಗಿದ್ದು ಈ ಹಿನ್ನಲೆಯಲ್ಲಿ ತನಿಖೆ ನಡೆಸಿದ ಪೊಲೀಸರು ಸ್ಥಳದಲ್ಲಿ ಹಸಿರು ಬಳೆಯನ್ನು ಪತ್ತೆ ಹಚ್ಚಿದ್ದರು. ಮೃತ ಮಹಿಳೆ ವಿಧವೆ ಆಗಿದ್ದರಿಂದ ಹಸಿರು ಬಳೆ ತೊಡುವುದಿಲ್ಲ ಎನ್ನುವ ಹಿನ್ನಲೆಯಲ್ಲಿ ತನಿಖೆ ಚುರುಕು ಗೊಳಿಸಿ ಈ ಎರಡು ಆರೋಪಿಗಳನ್ನು ಬಂಧಿಸಿ ನ್ಯಾಯಾಲಯದ ವಶಕ್ಕೆ ನೀಡಿದ್ದಾರೆ.
Leave a Comment