ಭಟ್ಕಳ:ಒಂಟಿ ಮಹಿಳೆ ಇದ್ದ ಮನೆಗೆ ಭಿಕ್ಷೆ ಬೇಡಲು ಬಂದ ಖತರ್ನಾಕ್ ಮಹಿಳೆ ಯೊಬ್ಬಳು ಭಯ ಹುಟ್ಟಿಸಿ ಅವರಿಂದಲೆ ನಗದು ಮತ್ತು ಲಕ್ಷಾಂತರ ರೂ ಮೌಲ್ಯದ ಚಿನ್ನ ಪಡೆದು ಪರಾರಿಯಾದ ಘಟನೆ ತಾಲೂಕಿನ ಸಾರದಹೊಳೆಯ ಹೀರೆಹಿತ್ಲೂ ಬಳಿಯಲ್ಲಿ ತಡವಾಗಿ ಬೆಳಕಿಗೆ ನಡೆದಿದೆ.

ತಾಲ್ಲೂಕಿನ ಶಿರಾಲಿ ಪಂಚಾಯಿತಿ ವ್ಯಾಪ್ತಿಯ ಹೀರೆಹಿತ್ಲೂ ಜಯಲಕ್ಷ್ಮಿ ನಾಯ್ಕ ಹಾಗೂ ಸುಕ್ರಿ ನಾಯ್ಕ ಎಂಬುವರ ಮನೆಯಿಂದ ಲಕ್ಷಾಂತರ ರೂ ಮೌಲ್ಯದ ಚಿನ್ನ ಪಡೆದು ವಂಚಿಸಲಾಗಿದೆ. ಕಳೆದ ಸೋಮವಾರ ಭಿಕ್ಷಾಟನೆಗೆ ಮನೆಗೆ ಬಂದ ಮಹಿಳೆ ಮನೆಯಲ್ಲಿ ಒಬ್ಬಂಟಿ ಮಹಿಳೆ ಇರುವುದನ್ನು ಗಮಣಿಸಿದ್ದಾಳೆ ಆಗ ಅವಕಾಶ ಬಳಸಿಕೊಂಡ ಭಿಕ್ಷುಕಿ ಮನೆಯ ಸದಸ್ಯರಿಗೆ ಗ್ರಹಚಾರವಿದೆ.ಸದ್ಯದಲ್ಲಿಲೇ ನಿಮ್ಮ ಮನೆಯಲ್ಲಿ 2 ಸಾವು ಸಂಭವಿವಿಸಲಿದೆ ಇದನ್ನು ತಡೆಯಬೇಕಾದರೆ ಪೂಜೆಯ ಅಗತ್ಯವಿದೆ ಎಂದಿದ್ದಾಳೆ. ಇದರಿಂದ ಹೆದರಿದ ಮಹಿಳೆ ಸಂಬಂಧಿಕರ ಮನೆಗೆ ಹೋಗಿದ್ದ ತನ್ನ ಅತ್ತೆಯನ್ನು ಕರೆಸಿಕೊಂಡಿದ್ದಾಳೆ. ಮನೆಗೆ ಬಂದ ಆಕೆಗೂ ಇದೆ ವಿಚಾರ ಹೇಳಿ ವಾಮಾಚಾರ ಮಾಡಿದ ಭಿಕ್ಷುಕಿ ಪೂಜೆ ಮಾಡಿಸುವ ನೆಪದಲ್ಲಿ 16 ಸಾವಿರ ನಗದಿಗೆ ಬೇಡಿಕೆ ಇಟ್ಟಿದ್ದಾಳೆ.
ಆಕೆಯ ಮಾತಿಗೆ ಸಮ್ಮತಿಸಿದ ಅತ್ತೆ ಶಿರಾಲಿಯ ಜನತಾ ಬ್ಯಾಂಕಿಗೆ ತೆರಳಿ ಕಿವಿಯ ಒಲೆಯನ್ನು ಅಡವಿಟ್ಟು 10 ಸಾವಿರ ತಂದು ಮನೆಯಲ್ಲಿದ್ದ 6 ಸಾವಿರ ನಗದು ಸೇರಿಸಿ 16 ಸಾವಿರ ಭಿಕ್ಷುಕಿಗೆ ನೀಡಿದ್ದಾರೆ. ಇವರ ದೌರ್ಬಲ್ಯ ಅರಿತ ಖತರ್ನಾಕ್ ಮಹಿಳೆ ಇವರನ್ನು ಮತ್ತಷ್ಟು ಭೀತಗೊಳಿಸಿದ್ದಾರೆ. ಮನೆಯಲ್ಲಿದ್ದ ಅಷ್ಟು ಚಿನ್ನವನ್ನು ನೀಡಿ ಎಂದಿದ್ದಾಳೆ.
ಎಲ್ಲಿ ಮನೆಯಲ್ಲಿ ಸಾವು ಸಂಭವಿಸುತ್ತದೊ ಎಂದು ಭಯದಿಂದ ಮನೆಯಲ್ಲಿದ್ದ ಚಿನ್ನದ ನಕ್ಲೆಸ್ ಸರ, ಹವಳದ ಸರ, ಕಿವಿ ಒಲೆ ಕೂಡ ಆಕೆಗೆ ಅತ್ತೆ ಸೊಸೆ ನೀಡಿದ್ದಾರೆ. ಪೂಜೆ ಮಾಡಿಸುವ ನೆಪದಲ್ಲಿ ಇಬ್ಬರನ್ನು ಸಂಪೂರ್ಣ ವಶೀಕರಣ ಮಾಡಿಕೊಂಡು ಭಿಕ್ಷುಕೆ ಎಲ್ಲವನ್ನು ದೋಚಿಕೊಂಡು ಪರಾರಿಯಾಗಿದ್ದಾಳೆ.ಹೋಗುವಾಗ 5 ದಿನದ ನಂತರ ಪುನಃ ಬರುವುದಾಗಿ ಅಲ್ಲಿ ತನಕ ಯಾರಿಗೂ ವಿಷಯ ತಿಳಿಸಿದರು ಮನೆಯಲ್ಲಿ ಸಾವು ಖಚಿತ ಎಂದು ಬೆದರಿಸಿ ಹೋಗಿದ್ದಾಳೆ. ಐದು ದಿನದ ನಂತರ ಆಕೆ ಬಾರದೆ ಇರುವಾಗ ಮೋಸ ಹೋದ ಬಗ್ಗೆ ತಿಳಿದ ಅತ್ತೆಯಾದ ಸುಕ್ರಿ ನಾಯ್ಕ ಹಾಗೂ ಸೊಸೆಯಾದ ಜಯಲಕ್ಷ್ಮಿ ಮಂಜುನಾಥ ನಾಯ್ಕ ಭಟ್ಕಳ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
Leave a Comment