ಹೊನ್ನಾವರ: ಕರಾವಳಿಭಾಗದ ಹೆಮ್ಮೆಯಾದ ಯಕ್ಷಗಾನ ಕಲೆ ಹಾಗೂ ಕಲಾವಿದರನ್ನು ಪೋತ್ಸಾಹಿಸುವ ಕಾರ್ಯ ಆಗಬೇಕಿದೆಎಂದು ಜಿಲ್ಲಾ ಪಂಚಾಯತ ಸದಸ್ಯ ಶಿವಾನಂದ ಹೆಗಡೆ ಕಡತೋಕಾ ಅಭಿಪ್ರಾಯಪಟ್ಟರು.
ತಾಲೂಕಿನ ಗೆಳೆಯರ ಬಳಗ ಸಾಲ್ಕೋಡ್ ಇವರು ಕಾಶಿಕೆರೆ ಬೊಂಡಕಾರೇಶ್ವರ ಬಯಲಿನಲ್ಲಿ ಆಯೋಜಿಸಿದ 4ನೇ ವರ್ಷದ ಯಕ್ಷಗಾನ ಬಯಲಾಟ ಕಾರ್ಯಕ್ರಮದ ನಿಮಿತ್ತ ನಡೆದ ಸಭಾ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿ ಯಕ್ಷಗಾನ ನಮ್ಮೂರಿನ ಹೆಮ್ಮೆಯ ಕಲೆಯಾಗಿದೆ. ಆಧುನಿಕ ಭರಾಟೆಯಲ್ಲಿ ತನ್ನದೇ ಆದ ಪ್ರಭಾವವನ್ನು ಹೊಂದಿದ್ದು, ಇಂದಿಗೂ ಜನಸಾಮನ್ಯರನ್ನು ತನ್ನತ್ತ ಆಕರ್ಷಣೆ ಮಾಡಿಕೊಳ್ಳುತ್ತಿರುವುದು ಇದರ ಶಕ್ತಿಯಾಗಿದೆ. ನಮ್ಮ ಪ್ರದೇಶದ ಹಿರಿಮೆಯನ್ನು ಜಗತ್ತಿಗೆ ಪರಿಚಿಯಿಸಿದ ಈ ಕಲೆಯಲ್ಲಿ ಹಲವರು ಸಾಧನೆ ಮಾಡಿದ್ದು, ಇಂದಿಗೂ ಹೊಸ ತಲೆಮಾರಿನ ಅನೇಕ ಕಲಾವಿದರು ಬೆಳಕಿಗೆ ಬರುತ್ತಿರುವುದು ಹೆಮ್ಮೆಯಾಗಿದೆ. ಕಳೆದ 4 ವರ್ಷದಿಂದ ಯಕ್ಷಗಾನದ ಮೂಲಕ ಅನೇಕ ಕಲಾವಿದರನ್ನು ಪೋತ್ಸಾಹಿಸುವ ಕಾರ್ಯ ಈ ಸಂಘಟನೆಯಿಂದ ನಡೆಯುತ್ತಿರುವುದು ಅಭಿನಂದನಾರ್ಹ ಎಂದು ಪ್ರಶಂಸೆ ವ್ಯಕ್ತಪಡಿಸಿದರು.
ವೇದಿಕೆಯಲ್ಲಿ ಯಕ್ಷಗಾನ ಪೋಷಕರುಗಳಾದ ನಿವೃತ್ತ ಶಿಕ್ಷಕ ಕೆ.ಎಸ್.ಹೆಗಡೆ, ಎನ್.ಎಲ್.ಹೆಗಡೆ, ನ್ಯಾಯವಾಧಿಗಳಾದ ಎಂ.ಐ.ಹೆಗಡೆ, ಬೋಂಡಕಾರೇಶ್ವರ ದೇವಾಲಯದ ಅರ್ಚಕರಾದ ಮಂಜುನಾಥ ಭಟ್ ಉಪಸ್ಥಿತರಿದ್ದರು.
ರಾಮಕೃಷ್ಣ ಹೆಗಡೆ ಸ್ವಾಗತಿಸಿ, ರಾಘವ ಹೆಗಡೆ ವಂದಿಸಿದರು. ಉಪನ್ಯಾಸಕರಾದ ಕೆ.ಎಸ್.ಹೆಗಡೆ ನಿರ್ವಹಿಸಿದರು. ಸಬಾ ಕಾರ್ಯಕ್ರಮದ ಬಳಿಕ ಲವಕುಶ ಪೌರಾಣಿಕ ಯಕ್ಷಗಾನ ಪ್ರದರ್ಶನಗೊಂಡಿತು. ರಜತ ಕಿರೀಟ ಧರಿಸಿ ಹಿರಿಯ ಕಲಾವಿದರಾದ ಗಣಪತಿ ಹೆಗಡೆ ತೋಟಿಮನೆ ಇವರು ರಾಮನ ಪಾತ್ರದಲ್ಲಿ ಕಾಣಿಸಿಕೊಂಡಿರುವುದು ಯಕ್ಷಗಾನ ವಿಶೇಷವಾಗಿತ್ತು. ಸಾವಿರಾರು ಸಂಖ್ಯೆಯಲ್ಲಿ ಪೆಕ್ಷಕರ ಮಧ್ಯೆ ಯಕ್ಷಗಾನ ಪ್ರದರ್ಶನಗೊಂಡಿತು.
Leave a Comment