ಹೊನ್ನಾವರ – ಬೃಹತ್ ಲೋಕ ಅದಾಲತ್ನಲ್ಲಿ ಹೊನ್ನಾವರ ಹಿರಿಯ ಸಿವಿಲ್ ಜಡ್ಜ ನ್ಯಾಯಾಲಯದಲ್ಲಿ 39 ಹಾಗೂ ಪ್ರಿನ್ಸಿಪಲ್ ಸಿವಿಲ್ ಜಡ್ಜ ಮತ್ತು ಜೆ.ಎಮ್.ಎಪ್.ಸಿ ನ್ಯಾಯಾಲಯದಲ್ಲಿ 648 ಪ್ರಕರಣಗಳು ಒಟ್ಟೂ 687 ಪ್ರಕರಣಗಳು ರಾಜಿ ಸಂಧಾನದ ಮೂಲಕ ಇತ್ಯರ್ಥ ಆದವು.

1 ದಾಂಪತ್ಯ ಪ್ರಕರಣ, 23 ಮೋಟಾರು ಅಪಘಾತ ವಿಮಾ ಪರಿಹಾರ ಪ್ರಕರಣ, 5 ಅಮಲುಜಾರಿ ಪ್ರಕರಣ, 2 ಸಿವಿಲ್ ಪ್ರಕರಣ ಇತ್ಯರ್ಥವಾಗಿದ್ದು ಮೋಟಾರು ಅಪಘಾತ ವಿಮಾ ಪರಿಹಾರ ಪ್ರಕರಣದಲ್ಲಿ 93 ಲಕ್ಷದ 50 ಸಾವಿರ ರೂಪಾಯಿ ಪರಿಹಾರ ನೀಡಲು ತಿರ್ಮಾನಿಸಲಾಯಿತು. ನ್ಯಾಯಾಧೀಶ ಎಮ್.ವಿ ಚೆನ್ನಕೇಶವ ರೆಡ್ಡಿ ಹಾಗೂ ರಾಜಿ ಸಂದಾನಕಾರರಾಗಿ ಮನೋಜ ಜಾಲಿ ಸತ್ಗಿ ಉಪಸ್ಥಿತರಿದ್ದರು
ಪ್ರಿನ್ಸಿಪಲ್ ಸಿವಿಲ್ ಜಡ್ಜ ಮತ್ತು ಜೆ.ಎಮ್.ಎಪ್.ಸಿ ನ್ಯಾಯಾಲಯದಲ್ಲಿ ಇತ್ಯರ್ಥಗೊಂಡ 648 ಪ್ರಕರಣಗಳಲ್ಲಿ 69 ಸಿವಿಲ್ ಪ್ರಕರಣ, 579 ಕ್ರಿಮಿನಲ್ ಪ್ರಕರಣ, ಇತ್ಯರ್ಥಗೊಂಡವು ಹಾಗೂ ದಂಡದ ಮೊತ್ತದ ರೂಪಾಯಿ 1,93,900 ಗಳನ್ನು ಸಂಗ್ರಹಿಸಲಾಯಿತು. ನ್ಯಾಯಾಧೀಶೆ ಸನ್ಮತಿ ಎಸ್. ಆರ್. ಹಾಗೂ ಸಂದಾನಕಾರರಾಗಿ ಸುರೇಖಾ ಮಹಾಲೆ ಉಪಸ್ಥಿತರಿದ್ದರು.
Leave a Comment