ಹೊನ್ನಾವರ: ತಾಲೂಕಿನ ಮೂರು ದೇವಸ್ಥಾನಗಳಿಗೆ ರಾಜ್ಯ ಸರ್ಕಾರದ ಆರಾಧನಾ ಯೋಜನೆ ಅಡಿಯಲ್ಲಿ ಹಣ ಬಿಡುಗಡೆಯಾಗಿದ್ದು, ಶಾಸಕ ಸುನೀಲ ನಾಯ್ಕ ಮಂಗಳವಾರ ಚೆಕ್ ಹಸ್ತಾಂತರಿಸಿದರು.

ಅಳ್ಳಂಕಿಯ ಶ್ರೀ ಮಾರಿಗುಡಿ ದೇವಸ್ಥಾನಕ್ಕೆ ನಾಲ್ಕು ಲಕ್ಷ, ಕುದ್ರಗಿ ಜನತಳಕೇರಿಯ ನಾಗಚೌಡೇಶ್ವರಿ ದೇವಸ್ಥಾನಕ್ಕೆ 2 ಲಕ್ಷ 720ರೂ ಹಾಗೂ ಕುದ್ರಗಿಯ ಶ್ರೀ ಪರಿವಾರ ನಾಗಯಕ್ಷೆ ಹಾಗೂ ನಾಗಚೌಡೇಶ್ವರಿ ದೇವಸ್ಥಾನಕ್ಕೆ 2 ಲಕ್ಷ ಹಣ ಮಂಜೂರಾಗಿದ್ದು, ಪಟ್ಟಣದ ಪ್ರವಾಸಿಮಂದಿರದಲ್ಲಿ ಆಡಳಿತ ಮಂಡಳಿಯವರಿಗೆ ಶಾಸಕರು ಚೆಕ್ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ತಹಶೀಲ್ದಾರ ವಿವೇಕ ಶೆಣ್ವಿ, ಗ್ರಾ.ಪಂ. ಅಧ್ಯಕ್ಷರಾದ ಮಂಜುನಾಥ ನಾಯ್ಕ ಗೇರುಸೊಪ್ಪಾ, ಪ್ರದೀಪ ನಾಯ್ಕ ಹೆರೆಂಗಡಿ ಸದಸ್ಯರಾದ ಗಣಪತಿ ನಾಯ್ಕ ಬಿಟಿ, ವಿನಾಯಕ ನಾಯ್ಕ ಮೂಡ್ಕಣಿ, ಗಣೇಶ ಹಳ್ಳೇರ, ಮುಖಂಡರಾದ ಜಯಂತ ನಾಯ್ಕ, ಪ್ರಮೋದ ಜೋಶಿ, ಪ್ರದೀಪ, ತಿಲಕ ನಾಯ್ಕ ಮತ್ತಿತರರು ಹಾಜರಿದ್ದರು.
Leave a Comment