ಹೊನ್ನಾವರ: ನಗರಬಸ್ತಿಕೇರಿ ಪಂಚಾಯತಿಯ ಹುಳೆಗಾರ ವಾರ್ಡಗೆ ನಡೆದ ಉಪಚುನಾವಣೆಯಲ್ಲಿ ಮಂಜುನಾಥ ಮಾದೇವನಾಯ್ಕ ಆಯ್ಕೆಯಾಗಿದ್ದಾರೆ.

ಡಿಸೆಂಬರ್ನಲ್ಲಿ ನಡೆದ ಚುನಾವಣೆಯಲ್ಲಿ ರಾಘವೇಂದ್ರ ನಾಯ್ಕ ರಾಜಿನಾಮೆಯಿಂದ ತೆರವಾದ ಸ್ಥಾನಕ್ಕೆ ಮಾರ್ಚ 29ರಂದು ಮತದಾನ ನಡೆದಿತ್ತು. ಬುಧವಾರ ತಹಶೀಲ್ದಾರ ಕಛೇರಿಯಲ್ಲಿ ನಡೆದ ಮತ ಎಣಿಕೆಯಲ್ಲಿ ಮಂಜುನಾಥ ನಾಯ್ಕ 315 ಮತಗಳನ್ನು ಪಡೆದು ಆಯ್ಕೆಯಾದರು. ಪ್ರತಿಸ್ಪರ್ಧಿ ರಾಮಚಂದ್ರ ನಾಯ್ಕ 234 ಮತಗಳನ್ನು ಪಡೆದರೆ, 5 ಮತಗಳು ಅಸಿಂಧುವಾಗಿತ್ತು. ತಹಶೀಲ್ದಾರ ವಿವೇಕ ಶೇಣ್ವಿ ಪ್ರಮಾಣ ಪತ್ರ ವಿತರಿಸಿದರು.
Leave a Comment