ಭಟ್ಕಳ:ಕಳೆದ ವರ್ಷ ಅಕ್ಟೋಬರನಲ್ಲಿ ರ ನಡೆದ ತಾಲ್ಲೂಕಿನ ಕಾಯ್ಕಿಣಿ ಗ್ರಾಮ ಪಂಚಾಯತ ಕಚೇರಿ ಹಾಗೂ ಗ್ರಾಮ ಲೆಕ್ಕಾಧಿಕಾರಿ ಕಚೇರಿ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಮುರ್ಡೇಶ್ವರ ಠಾಣೆ ಪೊಲೀಸರು ಇಬ್ಬರನ್ನು ಬಂಧಿಸಲು ಯಶಸ್ವಿಯಾಗಿದ್ದಾರೆ .

ಬಂಧಿತ ಆರೋಪಿಗಳು ಬೆಂಗಳೂರಿನಲ್ಲಿ ಹೊಟ್ಟೆಪಾಡಿಗಾಗಿ ಗಿಣಿ ಶಾಸ್ತ್ರ ಜ್ಯೋತಿಷ್ಯ ಹೇಳಿಕೊಂಡಿದ್ದ ಕಾಳಪ್ಪ (55) ಹಾಗೂ ಕೂಲಿ ಕೆಲಸದಲ್ಲಿ ತೊಡಗಿಕೊಂಡಿದ್ದ ಕಿರಣ 23) ಎಂದು ಗುರುತಿಸಲಾಗಿದೆ .ಇವರಿಬ್ಬರೂ ಪ್ರವಾಸಕ್ಕೆಂದು ಮುರುಡೇಶ್ವರಕ್ಕೆ ಬಂದಿದ್ದ ಹಣ ಸಂಪಾದನೆಗಾಗಿ ಕಳ್ಳತನಕ್ಕೆ ಇಳಿದಿದ್ದು ದೃಢಪಟ್ಟಿದೆ .ಆರೋಪಿಗಳು ಸಾವಿರಕ್ಕೂ ಹೆಚ್ಚು ಹಣ ಮತ್ತು ಕಂಪ್ಯೂಟರ್ ಹಾರ್ಡ್ ಡಿಸ್ಕನ್ನು ಕದ್ದು ಪರಾರಿಯಾಗಿದ್ದರು .

ಈ ಕುರಿತು ಕಾಯ್ಕಿಣಿ ಪಂಚಾಯತ ಅಭಿವೃದ್ಧಿ ಅಧಿಕಾರಿ ಲಂಬೋದರ ಚಂದ್ರಕಾಂತ್ ಗಾಂವ್ಕರ ಮುರುಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು .
ಕಳ್ಳತನ ಪ್ರಕರಣದ ತನಿಖೆ ಕೈಗೊಂಡಿದ್ದ ಮುರುಡೇಶ್ವರ ಪೊಲೀಸರು ಭಟ್ಕಳ ತಾಲ್ಲೂಕಿನ ಕಾಯ್ಕಿಣಿ ಗ್ರಾಮ ಪಂಚಾಯತ್ ಕಚೇರಿಯ ಸಿಸಿಟಿವಿ ದೃಶ್ಯವನ್ನು ವಶಪಡಿಸಿಕೊಂಡಿದ್ದು ಸ್ಮರಿಸಬಹುದಾಗಿದೆ.
Leave a Comment