ಹೊನ್ನಾವರ : ಸಿ.ಎ. ಪರೀಕ್ಷೆಯಲ್ಲಿ ಉತ್ತೀರ್ಣರಾಗುವ ಮೂಲಕ ಸಾಧನೆ ಮಾಡಿದ ತಾಲೂಕಿನ ಮಂಕಿಯ ವಿನುತಾ ಮಹಾಲೆ ಇವರಿಗೆ ಮಾಜಿ ಶಾಸಕ ಮಂಕಾಳ ವೈದ್ಯ ಸನ್ಮಾನಿಸಿ ಗೌರವಿಸಿದರು.
ಮಂಕಿ ಗ್ರಾಮದ ಆಶಾ ಮತ್ತು ವಿನೋದ ಮಹಾಲೆ ದಂಪತಿಯ ಪುತ್ರಿಯಾದ ವಿನುತಾ ಇತ್ತಿಚೀಗೆ ನಡೆದ ಸಿ.ಎ.ಪರಿಕ್ಷೆಯಲ್ಲಿ ತೆರ್ಗಡೆಯಾಗುವ ಮೂಲಕ ಸಾಧನೆ ಮಾಡಿದ್ದರು. ಇವರ ಸಾಧನೆಗೆ ಪೋತ್ಸಾಹಿಸುವ ನಿಟ್ಟಿನಲ್ಲಿ ಮನೆಗೆ ತೆರಳಿ ಸನ್ಮಾನಿಸಿ ಗೌರವಿಸುವ ಜೊತೆ ಇನ್ನಷ್ಟು ಸಾಧನೆ ಮಾಡುವಂತಾಗಲಿ ಎಂದು ಶುಭಹಾರೈಸಿದರು.
ಈ ಸಂದರ್ಭದಲ್ಲಿ ಮಂಕಿ ಬ್ಲಾಕ್ ಅಧ್ಯಕ್ಷೆ ಉಷಾ ನಾಯ್ಕ, ಹಿಂದುಳಿದ ಘಟಕದ ತಾಲೂಕ ಅಧ್ಯಕ್ಷ ರಾಜು ನಾಯ್ಕ ಮಂಕಿ, ಗಜಾನನ ನಾಯ್ಕ, ಸುಬ್ರಹ್ಮಣ್ಯ ಶೇಟ್, ಮಂಜುನಾಥ ನಾಯ್ಕ, ಗಣಪತಿ ನಾಯ್ಕ ಮತ್ತಿತರರು ಉಪಸ್ಥಿತರಿದ್ದರು.
Leave a Comment