ಹೊನ್ನಾವರ: ತಾಲೂಕಿನ ಅನಿಲಗೋಡ ಶ್ರೀ ಕುಮಾರರಾಮ ಕ್ರಿಕೇಟರ್ಸ್ ಇವರ ಆಶ್ರಯದಲ್ಲಿ ಓಪನ್ ಸೂಪರ್ ಸಿಕ್ಸ್ ಕ್ರಿಕೇಟ್ ಪಂದ್ಯಾವಳಿಗೆ ಶಾಸಕ ಸುನೀಲ ನಾಯ್ಕ ಚಾಲನೆ ನೀಡಿದರು.

ನಂತರ ಸಭೆಯನ್ನು ಉದ್ದೇಶಿಸಿ ಮಾತನಾಡಿ ಗ್ರಾಮೀಣ ಭಾಗದಲ್ಲಿ ಕ್ರೀಡಾಂಗಣದ ಸಮಸ್ಯೆಯಿಂದ ಅನೇಕ ಗ್ರಾಮೀಣ ಪ್ರತಿಭೆಗಳು ಅನಾವರಣಗೊಳ್ಳಲು ಸಾಧ್ಯವಾಗುತ್ತಿಲ್ಲ. ಈ ಭಾಗದಲ್ಲಿರುವ ಈ ಕ್ರೀಡಾಂಗಣ ಮೆಲ್ದರ್ಜೆಗೆ ಏರಿಸಲು ಚಿಂತನೆ ನಡೆಸುವ ಜೊತೆ ಇದನ್ನು ಗ್ರಾಮದವರಿಗೆ ಅನೂಕೂಲಕ್ಕಾಗಿ ಸಸಿ ಹಾಕದಂತೆ ಅರಣ್ಯ ಇಲಾಖೆಯ ಗಮನಕ್ಕೆ ತರುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಬಳ್ಕೂಎ ವಿ.ಎಸ್.ಎಸ್ ಅಧ್ಯಕ್ಷ ಕೇಶವ ನಾಯ್ಕ, ಮೋಹನ ನಾಯ್ಕ, ಗುತ್ತಿಗೆದಾರ ಚಂದ್ರಕಾಂತ ನಾಯ್ಕ ಅನಿಲಗೋಡ್, ಗಣಪತಿ ನಾಯ್ಕ ಬಿಟಿ, ಕೊಡಾಣಿ ಪಂಚಾಯತ ಉಪಾಧ್ಯಕ್ಷ ಮಣಿಕಂಠ ನಾಯ್ಕ, ಸದಸ್ಯರಾದ ಜಯಂತ ನಾಯ್ಕ, ತಿಮ್ಮಪ್ಪ ನಾಯ್ಕ, ಸೈಮನ್ ರೋಡ್ರಗಿಸ್, ಮಾರುತಿ ನಾಯ್ಕ, ಮುಖಂಡರುಗಳಾದ ವೆಂಕಟೇಶ ನಾಯ್ಕ, ಶ್ರೀನಿವಾಸ ನಾಯ್ಕ, ಶ್ರೀಕಾಂತ ನಾಯ್ಕ, ಮತ್ತಿತರರು ಇದ್ದರು.
Leave a Comment