ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯು ಕರ್ನಾಟಕ ರಾಜ್ಯ ಪತ್ರದ ಅದಿಸೂಚನೆ ಸಂಖ್ಯೆ 08/ನೇಮಕಾತಿ -2/2021-22, ದಿನಾಂಕ ನ್ನು ಮುಂದುವರೆಸುತ್ತಾ ಪೊಲೀಸ್ ಸಬ್ – ಇನ್ಸಪೆಕ್ಟರ್ (ಸಿವಿಲ್) (ಪುರುಷ, ಮಹಿಳಾ ಮತ್ತು ಸೇವೆಯಲ್ಲಿರುವವರು) ಒಟ್ಟು 402 ಹುದ್ದೆಗಳ ಭರ್ತಿಗೆ ನೇಮಕ ಅಧಿಸೂಚನೆ ಹೊರಡಿಸಿದ್ದು. ಅರ್ಜಿಆಹ್ವಾನ ಮಾಡಲಾಗಿದೆ.
ವಯೋಮಿತಿ ಅರ್ಹತೆಗಳು :
ಅರ್ಜಿ ಸಲ್ಲಿಸುವ ಕನಿಷ್ಠ 21 ವರ್ಷ ಆಗಿರಬೇಕು
ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ಗರಿಷ್ಠ 30 ವರ್ಷ ವಯೋಮಿತಿ ನಿಗದಿ ಪಡಿಸಲಾಗಿದೆ.
ಎಸ್ ಸಿ / ಎಸ್‍ಟಿ / ಒಬಿಸಿ ವರ್ಗದ ಅಭ್ಯರ್ಥಿಗಳಿಗೆ ಗರಿಷ್ಠ 32 ವರ್ಷ ಗರಿಷ್ಠ ವಯೋಮಿತಿ ನಿಗದಿಪಡಿಸಲಾಗಿದೆ.
ಆನ್‍ಲ್ಯ್‍ನ್ ಅರ್ಜಿ ಸಲ್ಲಿಸುವ ಪ್ರಾರಂಭವಾಗುವ ದಿನಾಂಕ 01/04/2021
ಆನ್‍ಲ್ಯ್‍ನ್ ಅರ್ಜಿ ಸೃಜಿಸಲು ಕೊನೆಯ ದಿನಾಂಕ 03/05/2021
ಆನ್‍ಲ್ಯ್‍ನ್ ಅರ್ಜಿ ಶುಲ್ಕವನ್ನು ಪಾವತಿಸಲು ಕೊನೆಯ ದಿನಾಂಕ 05/05/2021
ಅರ್ಜಿ ಸಲ್ಲಿಸಲು ಬೇಕಾಗುವ ದಾಖಲಾತಿಗಳು
1 ಎಸ್.ಎಸ್. ಎಲ್. ಸಿ ಅಂಕಪಟ್ಟಿ
2 ಪದವಿ (ಡಿಗ್ರಿ) ಅಂಕಪಟ್ಟಿ
3 ಕನ್ನಡ ಮಾಧ್ಯಮ ಪ್ರಮಾಣ ಪತ್ರ
4 ಗ್ರಾಮೀಣ ಮಾದ್ಯಮ ಪ್ರಮಾಣ ಪತ್ರ
5 ಜಾತಿ ಪ್ರಮಾಣ ಪತ್ರ
6 ಇತರೆ ಮೀಸಲಾತಿ ಪ್ರಮಾಣ ಪತ್ರ
7 ಅಭ್ಯರ್ಥಿ ಆಧಾರ ಕಾರ್ಡ
8 ಅಭ್ಯರ್ಥಿಯ ಪೋಟೊ ಸಹಿ, ಎಡಗ್ಯೆ ಹೆಬ್ಬೆರಲ್ಲಿನ ಗುರುತು.
ಶುಲ್ಕ : ಸಾಮಾನ್ಯ ವರ್ಗದ ಅಭ್ಯೆರ್ಥಿಹಳಿಗೆ ರೂ.500. ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ ರೂ.500. ಪರಿಶಿಷ್ಟ ಜಾತಿ / ಪರಿಶಿಟ್ಟ ಪಂಗಡ /ಪ್ರವರ್ಗ- 1ಕ್ಕೆ ಸೇರಿದ ಅಬ್ಯರ್ಥಿಗಳಿಗೆ ರೂ.250.ಅರ್ಜಿ ಶುಲ್ಕವನ್ನು ಅಧಿಕೃತ ಬ್ಯಾಂಕ್ ಶಾಖೆಗಳ/ ಅಂಜೆ ಕಛೇರಿಯ ವೇಳೆ ಮಾವತಿಸಬೇಕು.
ವಿದ್ಯಾರ್ಹತೆ : ಯು.ಜಿ.ಸಿ ಇಂದ ಮಾನ್ಯತೆ ಪಡೆದಿರುವ ಅಂಗೀಕೃತ ವಿಶ್ವವಿದ್ಯಾಲಯದಲ್ಲಿ ಪದವಿ ಅಥವಾ ತತ್ಸಮಾನ ಪದವಿಯನ್ನು ಅರ್ಜಿ ಸಲ್ಲಿಸಲು ನಿಗದಿಪಡಿಸಿರುವ ಕೊನೆಯ ದಿನಾಂಕ ಅಂದರೆ 03/05/221 ಕ್ಕೆ ಹೊಂದಿರಬೇಕು. (ಮಾಜಿ ಸೈನಿಕ ಅಭ್ಯರ್ಥಿಗಳು ಸೈನ್ಯದಲ್ಲಿ ನೀಡಿದ ಪದವಿ ಪ್ರಮಾಣ ಪತ್ರವನ್ನು ದಿನಾಂಕ : 03/05/2021 ರೊಳಗೆ ಪಡೆದಿದ್ದರೆ. ಅಂತಹ ಅಭ್ಯರ್ಥಿಗಳ ಅಭ್ಯರ್ಥಿತನವನ್ನು ಮಾತ್ರ ಪರಿಗಣಿಸಲಾಗುವುದು.)
ಸೇವಾನಿತರ ಅಭ್ಯರ್ಥಿಗಳಿಗೆ ವಿದ್ಯಾರ್ಹತೆ ಮತ್ತು ಅನುಭವ :
ಅಂಗೀಕೃತ ವಿಶ್ವವಿದ್ಯಾಲಯದಲ್ಲಿ ಪದವಿ ಅಥವಾ ತತ್ಸಮಾನ ಪದವಿ ಜೊತೆಯಲ್ಲಿ ಪೊಲೀಸ್ ಇಲಾಖೆಯ ಯಾವುದೇ ವೃಂದದಲ್ಲಿ 5 ವರ್ಷಗಳ ಕನಿಷ್ಠ ಸೇವೆಯನ್ನು (ಅರ್ಜಿಸಲ್ಲಿಸುವ ಕೊನೆಯ ದಿನಾಂಕ ಅಂದರೆ 03/05/2021 ಕ್ಕೆ ಹೊಂದಿರಬೇಕು) ಸಾಹಾಯಕ ಪೊಲಿಸ್ಸಬ್ ಇನ್ಸ್ಪಕ್ಟರ್ /ಹೆಟ್ ಕಾನ್ಸ್ಟೇಬಲ್ / ಪೊಲೀಸ್ ಕಾನ್ಸ್ಟೇಬಲ್ ಆಗಿ ಪೊರ್ಣಗೊಳಿಸಿರಬೇಕು. ಹಾಗೂ ಹಾಲಿ ಪೊಲೀಸ್ ಇಲಾಖೆಯಲ್ಲಿ ಮೇಲಿನ ಹುದ್ದೆಯಲ್ಲಿ ಸೇವೆ ಸಲ್ಲಿಸುತ್ತಿರಬೇಕು. (ಸೇವಾನಿರತ ಅಭ್ಯರ್ಥಿಗಳು ಅಧಿಸೂಚನೆಯ ಪುಟ್ಟ ಸಂಖ್ಯೆ 24 ಮತ್ತು 25 ರಲ್ಲಿರುವ ಅನುಬಂಧ – ಎ & ಬಿ ಯನ್ನು ಕಡ್ಡಯವಾಗಿ ಅರ್ಜಿ ಸಲ್ಲಿಸುವ ನಿಗದಿಪಡಿಸಿರುವ ಕೊನೆಯ ದಿನಾಂಕ ಅಂದರೆ 03/05/2021ರೊಳಗೆ ಪಡೆದಿಟ್ಟುಕೊಂಡಿರತಕ್ಕದ್ದು.)
ತಿಪ್ಪಣಿ :
(1) ಮೇಲೆ ನಮೋದಿಸಿರುವ ವಿದ್ಯಾರ್ಹತೆ ಹಾಗೂ ಅನುಭವವನ್ನು ಹೊಂದದೇ ಇರುವ ಅಭ್ಯರ್ಥಿಹಳು ನೇಮಕಾತಿ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದು. ನಂತರ ನಿಗದಿಪಡಿಸಲಾದ ವಿದ್ಯಾರ್ಹತೆ ಮತ್ತು ಅನುಭವವನ್ನು ಹಾಗೂ ಅಂಕಪಟ್ಟಿ ಹೊಂದಿರುವುದಿಲ್ಲವೆಂದು ನೇಮಕಾತಿ ಸಮಿತಿಗೆ ಪತ್ತೆಯಾದಲ್ಲಿ ಅಂತಹ ಅಭ್ಯರ್ಥಿಗಳ ಅಭ್ಯರ್ಥಿತನವನ್ನು ಯಾವುದೇ ಹಂತದಲ್ಲಾದರೂ ರದ್ದುಪಡಿಸಲಾಗುವುದು.
(2 ) ಡಿಪ್ಪೊಮಾ ಇತ್ಯಾದಿ ವಿದ್ಯಾರ್ಹತೆಗಳು ಪದವಿಗೆ ಸಮಾನವಾಗುದಿಲ್ಲ. ಆದ್ದರಿಂದ ಪೊಲೀದ್ ಸಬ್‍ಇನ್ಸ್ಪಕ್ಟರ್ ಹುದ್ದೆಗೆ ಈ ವಿದ್ಯಾರ್ಹತೆಯ ಅಭ್ಯೆರ್ಥಿಗಳು ಅರ್ಹರಾಗುದಿಲ್ಲ
( 3) ಅರ್ಜಿ ಸಲ್ಲಿಸುವ ನಿಗದಿಪಡಿಸಿದೆ ಕೊನೆಯ ದಿನಾಂಕದಂದು ನಿಗದಿತ ವಿದ್ಯಾರ್ಹತೆಯ ಪದವಿಯನ್ನು ಪಡೆಯಲು ಪರೀಕ್ಷೆ ಬದೆದು ಫಲಿತಾಂಶಕ್ಕಾಗಿ ಕಾಯುತ್ತಿರುವ ಅಭ್ಯರ್ಥಿಗಳು ಹಾಗೂ ಅಂಕಪಟ್ಟಿ ಇಲ್ಲದೆ ಇರುವ ಅಭ್ಯರ್ಥಿಗಳು ಅರ್ಜಿಗಳನ್ನು ಸಲ್ಲಿಸಲು ಅರ್ಹರಾಗಿರುವುದಿಲ್ಲ. ಮೇಲಿನ ವಿದ್ಯಾರ್ಹತೆಯನ್ನು ಹೊರತುಪಡಿಸಿ ಬೇರೆ ಯಾವ ವಿದ್ಯಾರ್ಹತೆಯನ್ನು ಪರಿಗಣಿಸಲಾಗುವುದಿಲ್ಲ.
ಸಾರಿಗೆ ನೌಕರರಿಗೆ ಸಿಹಿ ಸುದ್ದಿ : ಶೇ 8 ರಷ್ಟು ಸಂಬಳ ಹೆಚ್ಚಳಕ್ಕೆ ರಾಜ್ಯ ಸರ್ಕಾರ ಗ್ರೀನ್ ಸಿಗ್ನಲ್
7ನೇ ವೇತನ ಆಯೋಗ : ರಾತ್ರಿ ಪಾಳಿ ನೌಕರರಿಗೆ ಶುಭಸುದ್ದಿ ಭತ್ಯೆ ನಿಯಮಹಳಲ್ಲಿ ದೊಡ್ಡ ಬದಲಾವಣೆ
ಉದೋಗಾಕಾಂಕ್ಷಿಗಳಿಗೆ ಭರ್ಜರಿ ಗುಡ್ ನ್ಯೊಸ್ : ಭಾರತೀಯ ವಾಯುಪಡೆ’ ಯಲ್ಲಿ 1524 ಗ್ರೊಪ್ ಸಿ ಹುದ್ದೆಗಳಿಗೆ ಅರ್ಜಿ ಆಹ್ವಾನ
ವಿ.ಸೊ :
1 ಕಲ್ಯಾಣ ಕರ್ನಾಟಕ ಪ್ರದೇಶದ ಸ್ಥಳೀಯ ವ್ಯಕ್ತಿಗಳು ಸ್ಥಳೀಯ ವೃಂದದ ಹುದ್ದೆ ಹಾಗೂಮಿಕ್ಕುಳಿದ ವೃಂದದ (ಪರಸ್ಥಳೀಯ) ಹುದ್ದೆ ಈ ಎರಡು ವೃಂದದ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅರ್ಹರಿರುತ್ತಾರೆ.
2 ಒಂದು ವೇಳೆ ಕಲ್ಯಾಣ ಕರ್ನಾಟಕ ಪ್ರದೇಶದ ಸ್ಥಳೀಯ ಅಭ್ಯೆರ್ಥಿಯು ಪ್ರಸ್ತುತ ನೇಮಕಾತಿಗೆ ಸಂಬಂದಿಸಿಂತೆ ಮಿಕ್ಕುಳಿದ (ಪರಸ್ಥಳೀಯ) ವೃಂದದ ಹುದ್ದೆಯನ್ನು ಆಯ್ಕೆ ಮಾಡಿಕೊಂಡು ನೇಮಕಾತಿ ಹೊಂದಿದಲ್ಲಿ ಅಂತಹ ಅಭ್ಯರ್ಥಿಯು ಜಾರಿಯಲ್ಲಿರುವ ನಿಯಮಮದಂತೆ ತನ್ನ ಸೇವಾ ಅವಧಿಯಲ್ಲಿ ಅನುಚ್ಛೇಸ 371 ಜೆ ಮೀಸಲಾತೆ ಸೌಲಭ್ಯಗಳನ್ನು ಪಡೆಯಲು ಅವಕಾಶವಿರುವುದಿಲ್ಲ ಎಂಬುದನ್ನು ಸ್ಪಷ್ಠೀಕರಿಸಲಾಗಿದೆ.
3 ಅರ್ಜಿ ಸಲ್ಲಿಸಲು ನಿಗದಿಪಡಿಸಿರುವ ಕೊನೆಯ ದಿನಾಂಕವು ಮುಕ್ತಾಯವಾದ ನಂತರ 10 ದಿನಗಳ ಕಾಲಾವಕಾಶ ನೀಡಡಲಾಗುತ್ತಿದ್ದು, ಸದರಿ ದಿನಾಮಕದೊಳಗಾಗಿ ಅಭ್ಯರ್ಥಿಯು ತಾನು ಸಲ್ಲಿಸಿರುವ ಅರ್ಜಿಯಲ್ಲಿ ಹೆಸರು ಜನ್ಮ ದಿನಾಂಕ, ಕೋರಿರುವ ಮೀಸಲಾತಿ ಹಾಗೂ ಇತರೆ ಯಾವುದೇ ಅಂಶಗಳ ಬದಲಾವಣೆ ಮಾಡಬೇಕಾದಲ್ಲಿ ಖುದ್ದಾಗಿ / ಅಂಚೆ ಮೂಲಕ ಸಂಬಂಧಪಟ್ಟ ಧೃಢೀಕೃತ ದಾಖಲೆಗಳೊಂದಿಗೆ ಅಡಿಷನಲ್ ಡ್ಯರೆಕ್ಟರ್ ಜನರಲ್ ಆಫ್ ಪೊಲೀಸ್, ನೇಮಕಾತಿ ಕಾರ್ಲಟನ್ ಭವನ, ಅರಮನೆ ರಸ್ತೆ ಬೆಂಗಳೂರು ರವರ ಕಛೇರಿಗೆ ಸಲ್ಲಿಸತಕ್ಕದ್ದು. ನಿಗದಿಪಡಿಸಿದ ಕೊನೆಯ ದಿನಾಂಕದ ನಂತರ ಸಲ್ಲಿಸುವ ಯಾವುದೇ ಮನವಿಗಳನ್ನು ಪರಿಗಣಿಸಲಾಗುವುದಿಲ್ಲ.
4 ಪ್ರತಿಭಾನ್ವಿತ ಕೀಡಾಪಟುಗಳಿಗೆ ನೇರ ನೇಮಕಾತೆ ಗಳಲ್ಲಿ 2% ರಷ್ಟು ಹುದ್ದೆಗಳನ್ನು ಮೀಸಲಿರಿಸುವಸಂಬಂದ ಕರಡು ವೃಂದ ಮತ್ತು ನೇಮಕಾತಿ ನಿಯಮಗಳನ್ನು ರಚಿಸಲಾಗಿರುತ್ತದೆ. ಆದ್ದರಿಂದ ಮಿಕ್ಕುಳಿದ ವೃಂದದ ಹುದ್ದೆಗಳಲ್ಲಿ 2% ರಂತೆ 08 ಹುದ್ದೆಗಳು ಹಾಗೂ ಕಲ್ಯಾಣ – ಕರ್ನಾಟಕ ಪ್ರದೇಶದ ಸ್ಥಳೀಯ ಹುದ್ದೆಗಳಲ್ಲಿ 01 ಹುದ್ದೆಯನ್ನು ಮೀಸಲಿರಿಸಲಾಗಿದ್ದು (ಅಂತಿಮ ವೃಂದ ಮತ್ತು ನೇಮಕಾತಿ ನಿಯಮಗಳನ್ನು ಹೊರಡಿಸುವ ಷದತ್ತಿಗೊಳಪಟ್ಟು), ಸದರಿ ಹುದ್ದೆಗಳ ನೇಮಕಾತಿ ಸಲುವಾಗಿ ಪ್ರತ್ಯೇಕವಾದ ನೇಮಕಾತಿ ಅಧಿಸೊಚನೆಯನ್ನು ಪ್ರಕಟಿಸಲಾಗುವುದು.
ಇತರೆ ಹೆಚ್ಚಿನ ಮಾಹಿತಿ ಹಾಗೂ ಆನ್ ಲೈನ್ ಅರ್ಜಿ ಸಲ್ಲಿಸುವ ವೆಬ್‍ಸ್ಯೆಟ್ : http://psicivil21.ksp-online.in/
Leave a Comment