ಹೊನ್ನಾವರ – ಆಳಸಮುದ್ರ ಮೀನುಗಾರಿಕೆಗೆ ತೆರಳಿದ್ದ ಮತ್ತೊಂದು ಬೋಟ್ ಅಲೆಯ ಹೊಡೆತಕ್ಕೆ ಸಮುದ್ರದಲ್ಲಿ ಮುಳುಗುತ್ತಿರುವಾಗ ರಕ್ಷಣೆಗೆ ದಾವಿಸಿದ ಇತರೇ ಬೋಟ್‌ನವರು ಹಾಗೂ ಕರಾವಳಿ ಕಾವಲು ಪಡೆಯವರು ಬೋಟ್ ಹಾಗೂ ಬೋಟ್‌ನಲ್ಲಿದ್ದ ೬ ಮಂದಿ ಮೀನುಗಾರರನ್ನು ರಕ್ಷಿಸಿ ದಡಕ್ಕೆ ತರುವಲ್ಲಿ ಯಶಸ್ವಿಯಾದ ಘಟನೆ ಮಂಗಳವಾರ ಸಂಜೆ ಅರಬ್ಬೀ ಸಮುದ್ರದಲ್ಲಿ ನಡೆದಿದೆ.

ಇತ್ತೀಚೆಗೆ ಕಾಸರಕೋಡ ಕಡಲ ತೀರದಲ್ಲಿ ಮೀನುಗಾರಿಕೆಗೆ ತೆರಳಿದ ಬೋಟ್‌ಗಳು ದುರಂತಕ್ಕೀಡಾಗುತ್ತಿರುವ ದುರ್ಘಟನೆ ಹೆಚ್ಚುತ್ತಿದೆ. ಖಾಸಗಿ ವಾಣಿಜ್ಯ ಬಂದರು ನಿರ್ಮಾಣ ಕಾಮಗಾರಿಯಿಂದಾಗಿ ಅಳಿವೆಯಲ್ಲಿ ಹೂಳು ತುಂಬಿಕೊ0ಡು ಮೀನುಗಾರಿಕಾ ಬೋಟ್‌ಗಳ ಸಂಚಾರಕ್ಕೆ ಅಡಚಣೆಯುಂಟಾಗುತ್ತಿದೆ. ಮರಳಿನ ದಿಬ್ಬವನ್ನು ಸೀಳಿಕೊಂಡು ಹೋಗುವಾಗ ಬೋಟ್‌ಗಳ ತಳಭಾಗಕ್ಕೆ ಹಾನಿಯಾಗುತ್ತದೆ. ಸಮುದ್ರಕ್ಕಿಳಿದಾಗ ಅಲೆಯ ಹೊಡೆತವನ್ನು ತಾಳಿಕೊಳ್ಳದ ಬೋಟ್‌ಗಳು ಮುಳುಗಿ ಬೋಟ್ ಮಾಲಕರಿಗೆ ಲಕ್ಷಾಂತರ ರುಪಾಯಿ ನಷ್ಟವನ್ನುಂಟುಮಾಡುವ ಜೊತೆಗೆ ಮೀನುಗಾರರ ಜೀವಕ್ಕೂ ಗಂಡಾAತರವನ್ನು ತಂದೊಡ್ಡುತ್ತಿದೆ ಎನ್ನುವ ಆರೋಪ ಮೀನುಗಾರರ ವಲಯದಿಂದ ಕೇಳಿಬರುತ್ತಿದೆ.

ಮಂಗಳವಾರ ಸಂಜೆ ದುರಂತಕ್ಕೀಡಾದ ಪ್ರಕಾಶ ಪಾಸ್ಕಲ್ ಫಿಂಟೋ ಎನ್ನುವವರಿಗೆ ಸೇರಿದ ವಾಟರ್ ಕ್ವೀನ್ ಹೆಸರಿನ ಬೋಟ್‌ನಲ್ಲಿದ್ದ ಬಲೆ ಸೇರಿದಂತೆ ಅನೇಕ ಉಪಕರಣಗಳು ಹಾನಿಗೀಡಾಗಿದ್ದು ಅಂದಾಜು ೯೫ ಲಕ್ಷ ರುಪಾಯಿ ನಷ್ಟವಾಗಿದೆ ಎನ್ನಲಾಗಿದೆ. ಕಳೆದೆರಡು ವರ್ಷದಲ್ಲಿ ೭ ಕ್ಕೂ ಹೆಚ್ಚು ಬೋಟ್‌ಗಳು ಈ ಭಾಗದಲ್ಲಿ ದುರಂತಕ್ಕೀಡಾಗಿ ಹಾನಿಗೊಳಗಾಗಿದ್ದು ಮೊದಲೇ ನಷ್ಟದಲ್ಲಿ ನಡೆಯುತ್ತಿರುವ ಮೀನುಗಾರಿಕೆಯಿಂದ ಕಂಗಾಲಾಗಿರುವ ಬೋಟ್ ಮಾಲಿಕರಿಗೆ ಬೋಟ್ ದುರಂತಗಳು ಗಾಯದಮೇಲೆ ಬರೆ ಎಳೆದ ಅನುಭವ ನೀಡುತ್ತಿದೆ.
Leave a Comment