ಹೊನ್ನಾವರ: ಜಿಲ್ಲಾ ಮಟ್ಟದ ನಾಮಧಾರಿ ಟ್ರೋಪಿ 2021 ಎನ್.ಪಿ.ಲ್ ತಾಲೂಕಿನ ಮಂಕಿ ದೇವರಗೆದ್ದೆಯ ಕೊಚಾಪು ಮೈದಾನದಲ್ಲಿ ಜರುಗಿತು.
ಜಿಲ್ಲಾ ಮಟ್ಟದ ನಾಮಧಾರಿ ಸಮಾಜದವರಿಗಾಗಿ ದ್ವಿತಿಯ ವರ್ಷದ ಹಾರ್ಡ್ ಬಾಲ್ ಟೇನಿಸ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಜಿಲ್ಲೆಯ 8 ತಂಡಗಳು ಭಾಗವಹಿಸಿದ್ದವು. ಪ್ರಥಮ ಸ್ಥಾನವನ್ನು ಮಂಕಿಯ ಚಿರು ನಾಮಧಾರಿ ಬಾಯ್ಸ್ ಪಡೆದರೆ, ದ್ವಿತಿಯ ಸ್ಥಾನಕ್ಕೆ ಅಂಕೋಲಾ ನಾಮಧಾರಿ ಪಡೆದು ಕೊಂಡಿತು.
ಸಮಾರೋಪ ಸಮಾರಂಭದಲ್ಲಿ ಕಾರ್ಯಕ್ರಮದಲ್ಲಿ ಉದ್ಯಮಿಗಳಾದ ಮಂಕಿಯ ಭಾಸ್ಕರ ನಾಯ್ಕ ಮಾತನಾಡಿ ನಾಮಧಾರಿ ಟ್ರೋಪಿಯನ್ನು ಸಂಘಟನೆ ಮಾಡಿ ಕಾರ್ಯಕ್ರಮ ಯಶ್ವಸಿಯಾಗಿದೆ. ಸಮಾಜದ ಪಂದ್ಯಾವಳಿ ನಡೆಸುವಾಗ ಅಡೆತಡೆಗಳು ಉಂಟಾಗುತ್ತದೆ. ಎಲ್ಲರನ್ನು ಒಗ್ಗೂಡಿಸಿ ಪಂದ್ಯಾವಳಿ ನಡೆಸುವುದು ಸುಲಭದ ಮಾತಲ್ಲಾ. ಅದನ್ನು ಮೀರಿ ಸುಂದರವಾದ ಪಂದ್ಯಾವಳಿ ನಡೆಸುವ ಮೂಲಕ ಇತರೆ ಸಮಾಜಕ್ಕೆ ಮಾದರಿಯಾಗಿದೆ. ಈ ಪಂದ್ಯಾವಳಿಯಲ್ಲಿ ಆಡಿದ ಎಲ್ಲಾ ಆಟಗಾರರು ಕ್ರೀಡಾಸ್ಪೂರ್ತಿಯಿಂದ ಆಡಿರುವುದು ವಿಶೇಷವಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಹೊನ್ನಾವರ ತಾಲೂಕಾ ನಾಮಧಾರಿ ಸಂಘದ ಕಾರ್ಯದರ್ಶಿಗಳು ನಿವೃತ ಸೈನಿಕರಾದ ವಾಮನ ನಾಯ್ಕ ಮಾತನಾಡಿ ಸಂಘಟಕರು ಉತ್ತಮವಾಗಿ ಪಂದ್ಯಾವಳಿಯನ್ನು ನಡೆಸಿದ್ದಾರೆ. ಸಮಾಜದ ಎಲ್ಲಾ ಕಾರ್ಯಕ್ರಮಕ್ಕೂ ಸಹಕಾರ ಅಗತ್ಯವಿದೆ. ಎಲ್ಲಾ ಸಮಾಜದಂತೆ ನಮ್ಮಲ್ಲಿಯು ಅನೇಕ ಪ್ರತಿಭಾವಂತರಿದ್ದಾರೆ. ಅವರಿಗೆ ಅವಕಾಶಕ್ಕೆ ಇಂತಹ ಹಲವು ವೇದಿಕೆಗಳು ಸಹಕಾರಿಯಾಗಲಿದೆ ಎಂದರು.
ಈ ಸಂದರ್ಭದಲ್ಲಿ ಮಂಕಿ ಗ್ರಾಮ ಪಂಚಾಯತ ಮಾಜಿ ಸದಸ್ಯೆ ಪಾರ್ವತಿ ನಾಯ್ಕ, ರಾಜ್ಯ ಮಟ್ಟದ ಆಟಗಾರ ಸಚಿನ್ ನಾಯ್ಕ ಅಂಕೋಲಾ, ಸಮಾಜದ ಮುಖಂಡರಾದ ಗಂಗಾಧರ ನಾಯ್ಕ, ಗೋವಿಂದ ನಾಯ್ಕ, ನಾರಾಯಣ ನಾಯ್ಕ, ರಾಮ ನಾಯ್ಕ, ವೆಂಕಟೇಶ ನಾಯ್ಕ, ಸಂತೋಷ ನಾಯ್ಕ ವಿಠ್ಠಲ ನಾಯ್ಕ, ಸಂಘಟಕರಾದ ಲೋಹಿತ್ ನಾಯ್ಕ, ರಾಘವೇಂದ್ರ ನಾಯ್ಕ ಮುತ್ತಿತರರು ಇದ್ದರು.
Leave a Comment