ಹೊನ್ನಾವರ: ತಾಲೂಕಿನ ವಲ್ಕಿ ಕೂಡ್ಲ ಹೊಳೆಯಲ್ಲಿ ಸೋಮವಾರ ಬೆಳಗಿನ ಜಾವ ಸ್ನಾನಕ್ಕೆ ತೆರಳಿದ ವ್ಯಕ್ತಿಯೊರ್ವ ನೀರಿನಲ್ಲಿ ಮುಳುಗಿ ನಾಪತ್ತೆಯಾಗಿದ್ದಾನೆ. ನಾಪತ್ತೆಯಾಗಿದ್ದ ವ್ಯಕ್ತಿ ಖರ್ವಾ ಕೂಡ್ಲದ ಸೈಮನ್ ಫ್ರಾನ್ಸಿಸ್ ಡಿಸೋಜಾ (56) ಎಂದು ತಿಳಿದುಬಂದಿದ್ದು, ಈತನ ದಡದಲ್ಲಿ ಬಟ್ಟೆ ಹಾಗೂ ಚಪ್ಪಲಿಯನ್ನು ಇಟ್ಟು ಸ್ನಾನಕ್ಕೆ ಇಳಿದು ಈಜಾಡುತ್ತಿರುವಾಗ ಆಯಾಸಗೊಂಡು ನೀರಿನಲ್ಲಿ ಮುಳುಗಿ ಹೋಗಿದ್ದಾನೆ ಎಂದು ಸಹೋದರ ಅಗ್ನೇಲ್ ಫ್ರಾನ್ಸಿಸ್ ಡಿಸೋಜಾ ಹೊನ್ನಾವರ ಪೋಲಿಸ್ ಠಾಣಿಯಲ್ಲಿ ದೂರು ನೀಡಿದ್ದಾರೆ. ನಾಪತ್ತೆಯಾದ ವ್ಯಕ್ತಿಯ ಪತ್ತೆ ಕಾರ್ಯ ಮುಂದುವರೆದಿದೆ.
Leave a Comment