ಹೊನ್ನಾವರ: ತಾಲೂಕಿನ ಡಾ.ಬಿ.ಆರ್ ಅಂಬೇಡ್ಕರ್ ಸಾಂಸ್ಕøತಿಕ ಕ್ರೀಡಾ ಸ0ಘ ಹಾಗೂ ಹಳ್ಳೇರ ಸಮಾಜದ ಸಂಯುಕ್ತ ಆಶ್ರಯದಲ್ಲಿ ನಡೆದ ಅಂಬೇಡ್ಕರ್

ಜಯಂತಿಯನ್ನು ಮಾಜಿ ಶಾಸಕ ಮಂಕಾಳ ವೈದ್ಯ ಉದ್ಘಾಟಿಸಿದರು. ನಂತರ ಮಾತನಾಡಿ ದೇಶಕ್ಕೆ ಬಹುದೊಡ್ಡ ಸಂವಿಧಾನ ಕೊಡುಗೆ ನೀಡುವ ಮೂಲಕ ಸರ್ವರಿಗೂ ಸ್ವಾಭಿಮಾನ, ಸ್ವಾವಲಂಬನೆ ಜೀವನ ನಡೆಸಲು ಪ್ರೇರಕರಾದ ಮಹಾನ್ ಚೇತನರಾಗಿದ್ದಾರೆ. ಅವರ ಚಿಂತನೆಯ ಅರಿವಿನೊಂದಿಗೆ ನಾವೆಲ್ಲರು ಸಾಗಬೇಕಿದೆ ಎಂದರು.
ಸಂಘಟನೆಯ ವತಿಯಿಂದ ಮಾಜಿ ಶಾಸಕರನ್ನು ವೇದಿಕೆಯಲ್ಲಿ ಸನ್ಮಾನಿಸಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ತಾಲೂಕ ಪಂಚಾಯತ ಸದಸ್ಯ ಲೋಕೇಶ ನಾಯ್ಕ, ಮಾಜಿ ಜಿಲ್ಲಾ ಪಂಚಾಯತ ಸದಸ್ಯ ಕೃಷ್ಣ ಗೌಡ ಮಾವಿನಕುರ್ವಾ, ಬ್ಲಾಕ್ ಅಧ್ಯಕ್ಷ ಗೊವಿಂದ ನಾಯ್ಕ, ರಾಜು ನಾಯ್ಕ ಮಂಕಿ ಸೇರಿದಂತೆ ಸಂಘಟಕರು, ಗ್ರಾಮಸ್ಥರು ಉಪಸ್ಥಿತರಿದ್ದರು.