ಬೆಂಗಳೂರು : ಕೊರೋನಾ ಹರಡುವಿಕೆಗೆ ಕಡಿವಾಣ ಹಾಕಲು ಮುಂದಾಗಿರುವ ಬಿಬಿಎಂಪಿ ಅಧಿಕಾರಿಗಳು. ಕೋವಿಡ್ ಸೋಂಕು ಧೃಢಪಟ್ಟಿರುವವರ ಕೈಗಳಿಗೆ ಅಳಿಸಲಾಗದ ಶಾಹಿಯಿಂದ ಕೋವಿಡ್ ದೃಢಪಟ್ಟಿದೆ ಎಂಬ ಮುದ್ರೆ (ಸೀಲ್) ನ್ನು ಹಾಕಲು ನಿರ್ಧರಿಸಿದೆ.
ಪಾಲಿಕೆ ವ್ಯಾಪ್ತಿಯಲ್ಲಿ ಕೋವಿಡ್ ಸೋಂಕು ಉಲ್ಬಣಗೊಳ್ಳುತ್ತಿದೆ. ಆದ್ದರಿಂದ ಕೋವಿಡ್ ಸೋಂಕು ಧೃಢಪಟ್ಟವರಿಗೆ ಶನಿವಾರ ಕೈಗಳಿಗೆ ಸೀಲ್ ಹಾಕಲು ಕಾರ್ಯ ಪ್ರಾಂರಭಿಸಬೇಕು. ಈ ಕುರಿತು ಎಲ್ಲಾ ವಲಯಗಳಲ್ಲಿಯೂ ಕೂಡಲೇ ಕ್ರಮ ಕೈಗೊಳ್ಳಬೇಕು ಅದಕ್ಕೆ ಬೇಕಾದ ಶಾಹಿಯನ್ನು ಎಲ್ಲಾ ವಲಯಗಳಿಗೂ ಕೂಡಲೇ ವ್ಯವಸ್ಥೆ ಮಾಡಬೇಕು ಎಂದು ಮುಖ್ಯ ಆರೋಗ್ಯಾದಿಕಾರಿ ವಿಜೇಂದ್ರಗೆ ಸೂಚನೆ ನೀಡಿದ್ದಾರೆ.
ಶುಕ್ರವಾರ ಪಾಲಿಕೆ ಮುಖ್ಯ ಆಯಕ್ತ ಗೌರವ್ ಗುಪ್ತಾ ಬಿಬಿಎಂಪಿ ಎಂಟು ವಲಯ ಮಟ್ಟದಲ್ಲಿ ಕೋವಿಡ್ ಸೋಂಕು ಧೃಢಪಟ್ಟವರಿಗೆ ಸೀಲ್, ಹಾಸಿಗೆ ವ್ಯವಸ್ಥೆ ಕುರಿತು ವರ್ಚುಯಲ್ ಸಭೆ ನಡೆಸಿ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಪ್ರಮುಖವಾಗಿ ಲಕ್ಷಣ ರಸಿಹ ಸೋಂಕು ಕಂಡು ಬಂದು ಮನೆಯಲೇ ಐಸೋಲೇಟ್ ಆಗಿರುವವರು ಹೊರೆಗೆ ಸಂಚರಿಸದಂತೆ ಮುದ್ರೆ ಹಾಕಬೇಕು. ಒಂದು ವೇಳೆ ಮುದ್ರೆ ಹಾಕಿಸಿಕೊಂಡವರು ತಿರುಗಾಡುವುದನ್ನು ಕಂಡರೆ ಮಾರ್ಷಲ್ಗಳು, ಪೊಲೀಸರು, ಗೃಹ ರಕ್ಷಕರು, ಸಾರ್ವಜನಿಕರು ಪಾಲಿಕೆ ಅಧಿಕಾರಿಗಳಿಗೆ ಮಾಹಿತಿ ನೀಡುವಂತೆ ಜಾಗೃತಿ ಮೂಡಿಸಬೇಂಕೆಂದು ಸೂಚಿಸಿದರು.
Leave a Comment