ಹೊನ್ನಾವರ : ಶ್ರೀ ಕ್ಷೇತ್ರ ನೀಲಗೋಡ ಯಕ್ಷಿ ಚೌಡೇಶ್ವರಿ ದೇವಿ ದೇವಸ್ಥಾನದಲ್ಲಿ ನೀಲಗೋಡ ಜಾತ್ರೆ ಹಾಗೂ ಪುಷ್ಪ ರಥೋತ್ಸವ ನಡೆಯಿತು.
ಸರ್ಕಾರದ ಆದೇಶದಂತೆ ಕೋವಿಡ್ ಮುಂಜಾಗ್ರತಾ ಕ್ರಮಗಳನ್ನು ಪಾಲಿಸಿ ನಡೆದ ಈ ಕಾರ್ಯಕ್ರಮದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ಶಾಸ್ತ್ರೋಕ್ತವಾಗಿ ನಡೆದವು.

ಶೃಂಗೇರಿ ಜಗದ್ಗುರು ಶ್ರೀ ಶ್ರೀಶ್ರೀ ಭಾರತೀತೀರ್ಥ ಮಹಾಸ್ವಾಮೀಗಳ ಅನುಗ್ರಹಗಳೊಂದಿಗೆ ಅವರ 71ನೇ ವಧರ್ಂತಿ ಉತ್ಸವದ ದಿನದಂದು ನೂತನ ಪುಷ್ಪರಥೋತ್ಸವದ ಕಾರ್ಯಕ್ರಮಗಳು ಆರಂಭಗೊಂಡವು.
ಶುಕ್ರವಾರ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ
ಆರಂಭಗೊಂಡ ಈ ಕಾರ್ಯಕ್ರಮಗಳು ಶ್ರೀ ಸಂಸ್ಥಾನ ದಿವಗಿಯ ಅವದೂತರಾದ ಶ್ರೀ ಶ್ರೀ ರಾಮಾನಂದ ಸ್ವಾಮೀಜಿಯವರ ಹಾಗೂ ಶ್ರೀ ಕ್ಷೇತ್ರ ಬಂಗಾರಮಕ್ಕಿಯ ಧರ್ಮಾಧಿಕಾರಿ ಶ್ರೀ ಮಾರುತಿ ಗೂರೂಜೀಯವರ ದಿವ್ಯ ಉಪಸ್ಥಿತಿಯಲ್ಲಿ ಪುಷ್ಪರಥೋತ್ಸವದ ವಿಧಿವಿಧಾನಗಳು ನಡೆದವು.

ದತ್ತಯಾಗ ಪೂಜಾ ಹವನ,ನವಗ್ರಹ ಹವನ, ರಥ ಸುದ್ದಿ ಹವನ , ಮಹಾಪೂಜೆ, ಸಂಜೆಯ ರಥೋತ್ಸವ, ಅಷ್ಟಾವಧಾನ ,ಕುಂಭಾಭಿಷೇಕ ಹಾಗೂ ಪಲ್ಲಕ್ಕಿ ಉತ್ಸವಗಳು ನಡೆದವು.
ದೇವಸ್ಥಾನದ ಪ್ರಧಾನ ಅರ್ಚಕ ಶ್ರೀ ಮಾದೇವ ಸ್ವಾಮೀಯವರ ಯಜಮಾನತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ದೇವಸ್ಥಾನದ ಸೇವಾ ಸಮಿತಿ ಸದಸ್ಯರು ಹಾಗೂ ಪ್ರಮುಖ ಭಕ್ತರು ಪಾಲ್ಗೊಂಡು ರಥಾರೂಢಳಾದ ಜಗನ್ಮಾತೆ ಶ್ರೀ ಯಕ್ಷಿಚೌಡೇಶ್ವರಿ ಮಾತೆಯನ್ನು ದರ್ಶನ ಪಡೆದರು.
ಬಳ್ಕೂರು ಗ್ರಾಮಪಂಚಾಯತ ಅಧ್ಯಕ್ಷೆ ಶ್ರೀ ಮತಿ ಅನಿತಾ ಕಾಮತ್, ಜಿ.ಪಂ ಸದಸ್ಯೆ ಪುಪ್ಪಾ ನಾಯ್ಕ,ಬಿ.ಟಿ ನಾಯ್ಕ ಬಳ್ಕೂರ್, ಸೂರಜ ನಾಯ್ಕ ಸೋನಿ, ದೀಪಕ ನಾಯ್ಕ ಮಂಕಿ, ಚಂದ್ರಶೇಖರ ಗೌಡ, ಕೊಡ್ಲಮನೆ ವಿಷ್ಣುಮೂರ್ತಿ ದೇವಸ್ಥಾನದ ಅಧ್ಯಕ್ಷ ಪಾಂಡುರಂಗ ಭಂಡಾರಕರ್, ದೇವಸ್ಥಾನದ ಪ್ರಮುಖರಾದ ವಿನಾಯಕ ಕೌರಿ, ನರಸಿಂಹ ನಾಯ್ಕ, ವಿನಾಯಕ ನಾಯಕ್,ಜಗದೀಶ್ ನಾಯ್ಕ ಮುಂತಾದವರು ಉಪಸ್ಥಿತರಿದ್ದರು.
Leave a Comment