ಹೊನ್ನಾವರ: ಪಟ್ಟಣದ ರಾಷ್ಟ್ರೀಯ ಹೆದ್ದಾರಿಯ ಶರಾವತಿ ನದಿಗೆ ಎರಡು ಸೇತುವೆ ನಿರ್ಮಾಣವಾಗಿದ್ದು ಹೊಸದಾಗಿ ನಿರ್ಮಾಣವಾದ ಸೇತುವೆ ವಾಹನ ಸಂಚಾರಕ್ಕೆ ಮುಕ್ತವಾದ ನಂತರ ಹಳೆ ಸೇತುವೆ ಮಧ್ಯಪ್ರೀಯರ ಹಾಟ್ಸ್ಪಾರ್ಟ ಆಗಿಮಾರ್ಪಟ್ಟಿದೆ. ರಾತ್ರಿಯಾಗುತ್ತಲ್ಲೇ ದ್ವಿಚಕ್ರವಾಹನದಲ್ಲಿ ಪಾರ್ಸಲ್ ತೆಗೆದುಕೊಂಡು ಬಂದು ಈ ಸೇತುವೆ ಮೇಲೆ ಕುಳಿತು ಮಧ್ಯ ಸೇವಿಸುತ್ತಿರುವುದು ಕೆಲ ತಿಂಗಳನಿಂದ ಮಾಮೂಲಿಯಾಗಿದೆ. ಹಳೆ ಸೇತುವೆ ಮೇಲೆ ಸಾಯಂಕಾಲ 7 ಗಂಟೆಯವರೆಗೆ ವಾಯುವಿಹಾರಕ್ಕೆ ಸಾರ್ವಜನಿಕರು ಇದ್ದರೆ, ಆ ಬಳಿಕ ಮಧ್ಯ ಪ್ರೀಯರ ಫೆವರೇಟ್ ಸ್ಥಳವಾಗಿ ಮಾರ್ಪಟ್ಟಿದೆ. ಇದು ಇಷ್ಟೆ ಆದರೆ ಸಾವಜನಿಕರಾಗಲಿ, ಪೋಲಿಸ್ ಇಲಾಖೆ ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ. ಆದರೆ ಇತ್ತೀಚಿಗೆ ಸ್ವಲ್ಪ ಮುಂದುವರೆದ ಮಧ್ಯಪ್ರೀಯರು, ಮಹಿಳೆಯರು ಪುರುಷರು ಎನ್ನದೇ ಹೀಯಾಳಿಸುವುದು, ಬಾಟಲಿಯನ್ನು ಅಲ್ಲಲ್ಲಿ ಬೀಸಾಡುವುದು ಹಾಗೂ ನದಿಗೆ ಗಾಜಿನ ಬಾಟಲಿ ಎಸೆದು ದಾಂದಲೆ ಮಾಡುವ ಮೂಲಕ ಕಿರಿಕ್ ಮಾಡುತ್ತಿದ್ದರು. ಈ ಬಗ್ಗೆ ಠಾಣಿಯಲ್ಲಿ ಯಾವುದೇ ದೂರು ದಾಖಲಾಗದಿದ್ದರೂ ಸಾರ್ವಜನಿಕರು ಮೌಖಿಕವಾಗಿ ಪೋಲಿಸರ ಬಳಿ ಹೇಳಿಕೊಂಡಿದ್ದರು.

ಕಳೆದ ವಾರ ನಾನು ಹೆಂಡತಿಯೊಂದಿಗೆ ವಾಯುವಿಹಾರಕ್ಕೆ ಹೋದಾಗ ಬರುವಾಗ ಸ್ವಲ್ಪ ಕತ್ತಲಾಗಿತ್ತು. ನಾನು ಮೋಬೈಲನಲ್ಲಿ ಮಾತನಾಡುತ್ತಾ ಬರುವಾಗ ನನ್ನ ಪತ್ನಿಗೆ ನಿಂದಿಸಿದ್ದರು. ಅದನ್ನು ಪ್ರಶ್ನಿಸಿದಾಗ ಅವಾಚ್ಯವಾಗಿ ನಿಂದಿಸುತ್ತಾ ಮಧ್ಯ ಸೇವೆನೆ ಮಾಡುತ್ತಿದ್ದರು. ನನ್ನ ಪತ್ನಿ ನನ್ನನ್ನು ತಡೆದು ಕರೆದುಕೊಂಡು ಬಂದರು. ಇಂತಹ ಕಹಿ ಅನುಭವ ಹಲವರಿಗೆ ಆಗಿರಬಹುದು ಪೋಲಿಸ್ ಇಲಾಖೆ ಈ ಬಗ್ಗೆ ಇನ್ನಷ್ಟು ಜಾಗೃತಿ ವಹಿಸಿ ಇಂತಹ ಹಲವು ಸ್ಥಳಗಳ ಬಗ್ಗೆಸಾಯಂಕಾಲ 7ರಿಂದ 10 ಗಂಟೆಯವರೆಗೆ ನಿಗಾ ವಹಿಸಿದರೂ ನಿಯಂತ್ರಣ ಸಾಧ್ಯ. ಸಂತೋಷ ಪಟ್ಟಣ ನಿವಾಸಿ

ಹೊನ್ನಾವರ ಮಂಕಿ ಠಾಣಾ ವ್ಯಾಪ್ತಿಯಲ್ಲಿ ಕಳೆದ ಒಂದು ತಿಂಗಳ ಅಔದಿಯಲ್ಲಿ ಐದಕ್ಕೂ ಹೆಚ್ಚಿನ ಪ್ರಕರಣ ದಾಖಲಿಸಲಾಗಿದ್ದು, ಹಲವಡೆ ದಾಳಿ ಮಾಡುತ್ತಿದ್ದಂತೆ ಓಡಿ ಹೋಗುತ್ತಿದ್ದಾರೆ. ಸಾರ್ವಜನಿಕ ಸ್ಥಳದಲ್ಲಿ ಮಧ್ಯ ಸೇವನೆ ಅಪರಾಧವಾಗಿದ್ದು, ಮುಂದಿನ ದಿನದಲ್ಲಿ ಇನ್ನಷ್ಟು ಬಿಸಿ ಮುಟ್ಟಿಸಲಾಗುವುದು ಸಾರ್ವಜನಿಕರು ಮಾಹಿತಿ ನೀಡಿದರೆ ಇನ್ನಷ್ಟು ಕ್ರಮ ತೆಗೆದುಕೊಳ್ಳಲು ಸಾಧ್ಯ.
ಸಿಪಿಐ ಶ್ರೀಧರ ಎಸ್.ಆರ್.
ಅಲ್ಲದೇ ತಾಲೂಕಿನ ಯುವಬ್ರಿಗೇಡ್ ಹಾಗೂ ಸ್ವಚ್ಚ ಹೊನ್ನಾವರ ಸೇರಿದಂತೆ ಹಲವು ಸಂಘಟನೆಯವರು ಇದೇ ಸೇತುವೆ ಮೇಲೆ ಸ್ವಚ್ಚತಾ ಕಾರ್ಯ ಮಾಡಿ ಆಗಾಗೆ ಮಧ್ಯದ ಬಾಟಲಿಯನ್ನು ಸಂಗ್ರಹಿಸಿ ಜನಸಂಚಾರವಿಲ್ಲದ ಸ್ಥಳಕ್ಕೆ ವಿಲೇವಾರಿ ಮಾಡಿದ್ದರು. ಮೊದಮೊದಲು ಸಾಮಾಜಿಕ ಜಾಲತಾಣ ಹಾಗೂ ಸಂಭದಿಸಿದ ಅಧಿಕಾರಿಗಳ ಗಮನಕ್ಕೆ ತಂದರೂ ಯಾರು ಇದರ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ. ಅವರು ಕೂಡಾ ತಮ್ಮ ಪಾಡಿಗೆ ಸ್ವಚ್ಚತಾ ಕಾರ್ಯ ಮಾಡುತ್ತಾ ಬಂದಿದ್ದರು. ಇದಲ್ಲದೆ ಪಟ್ಟಣದ ಪ್ರಭಾತನಗರ, ಕೆಇಬಿ ಕಪೌಂಡ್ ಸಮೀಪ, ರಾಮತೀರ್ಥ, ಅರಾಸಾಮಿಕೆರೆ, ತಾಲೂಕಿನ ವಿವಿಧ ಬಸ್ ನಿಲ್ದಾಣದ ಬಳಿ ಮಧ್ಯದ ಬಾಟಲಿಗಳು ಹಾಗೂ ಓಡೆದ ಬಾಟಲಿಗಳು ಕಂಡು ಬರುತ್ತಿತ್ತು. ಇದೀಗ ಮಧ್ಯ ಪ್ರೀಯರಿಗೆ ಪೋಲಿಸ್ ಇಲಾಖೆ ಶಾಕ್ ಕೊಡಲು ಮುಂದಾಗಿದ್ದು, ಶರಾವತಿ ಸೇತುವೆ ಮೇಲೆ ಮಧ್ಯ ಸೇವಿಸುತ್ತಿದ್ದ ಐವರ ವಿರುದ್ದಪ್ರಕರಣ ದಾಖಲಿಸಿ ಎಚ್ಚರಿಕೆ ನೀಡಿದ್ದಾರೆ. ಕಳೆದ ವಾರ ರಾಮತೀರ್ಥ ಬಳಿ ಮಧ್ಯ ಸೇವನೆ ಮಾಡುತ್ತಿರುವವರ ಮೇಲೂ ಪ್ರಕರಣ ದಾಖಲಿಸಿಕೊಂಡು ಕಾನುನು ಕ್ರಮ ಜರುಗಿಸಲು ಮುಂದಾಗಿದ್ದಾರೆ. ಈ ಮಾದರಿ ಕಾರ್ಯ ತಾಲೂಕಿನಾದ್ಯಂತ ನಡೆಸಲು ಬೀಟ್ ಪೋಲಿಸರಿಗೆ ಸಿಪಿಐ ಶ್ರೀಧರ ಎಸ್. ಆರ್. ಸೂಚಿಸಿರುದರಿಂದ ಪೋಲಿಸ್ ಇಲಾಖೆ ಹದ್ದಿನ ಕಣ್ಣಿಡಲು ನಿರ್ಧರಿಸಿದ್ದಾರೆ.
ಪೋಲಿಸ್ ಇಲಾಖೆಯ ಈ ಪ್ರಯೋಗದಿಂದ ಸಾರ್ವಜನಿಕ ಸ್ಥಳದಲ್ಲಿ ಮಧ್ಯ ಸೇವನೆ ಎಷ್ಟರ ಮಟ್ಟಿಗೆ ಯಶ್ವಸಿಯಾಗಲಿದೆ ಎಂದು ಮುಂದಿನ ದಿನದಲ್ಲಿ ಕಾದು ನೋಡಬೇಕಿದ್ದು, ಇಂತಹದೇ ಪ್ರಕರಣ ಕೈಗೊಳ್ಳುತ್ತಿದ್ದರೆ, ಹಂತಹಂತವಾಗಿ ನಿಯಂತ್ರಣ ಸಾಧಿಸಬಹುದು ಎಂದು ಸಾರ್ವಜನಿಕರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.
Leave a Comment