ಹೊನ್ನಾವರ – ರಾಜ್ಯವ್ಯಾಪಿ ಕೋವಿಡ್ ಅಬ್ಬರಿಸುತ್ತಿರುವ ಹೊತ್ತಲ್ಲಿ ಮಹಾಮಾರಿಯನ್ನು ಸಮರ್ಥವಾಗಿ ಎದುರಿಸುವ ನಿಟ್ಟಿನಲ್ಲಿ ಹಲವರು ನೆರವಿನ ಹಸ್ತ ಚಾಚುತ್ತಿದ್ದಾರೆ. ಈ ನಿಟ್ಟಿನಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯೂ ಮುಂದಾಗಿದ್ದು ಕೋವಿಡ್ ಸೋಂಕಿತರ ಸಂಚಾರಿ ವ್ಯವಸ್ಥೆಯನ್ನು ಬಲಪಡಿಸುವ ಉದ್ದೇಶದಿಂದ ಉಚಿತ ಸಂಚಾರಕ್ಕೆ ಅನುಕೂಲಮಾಡಿಕೊಡುವ ಉಚಿತ ಸಂಚಾರಿ ವಾಹನವನ್ನು ಪ್ರತೀ ತಾಲೂಕಿಗೆ ಪೂರೈಸುತ್ತಿದೆ.

ಹೊನ್ನಾವರ ತಾಲೂಕಿನಲ್ಲಿಯೂ ಗ್ರಾಮಾಭಿವೃದ್ಧಿ ಯೋಜನೆಯ ಮುಖಾಂತರ ಕೋವಿಡ್ ರೋಗಿಗಳಿಗೆ ಉಚಿತ ವಾಹನ ಸೇವೆಯನ್ನು ಕಲ್ಪಿಸಲು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ.ಡಿ.ವಿರೇಂದ್ರ ಹೆಗ್ಗಡೆಯವರು ಸೂಚಿಸಿದಂತೆ ಉಡುಪಿ ಪ್ರಾದೇಶಿಕ ನಿದೇಶಕರಾದ ವಸಂತ ಸಾಲಿಯಾನ ಗೌರವ ಉಪಸ್ಥಿತಿಯಲ್ಲಿ, ಜಿಲ್ಲಾ ನಿರ್ದೇಶಕರಾದ ಶಂಕರ ಶೆಟ್ಟಿ ಹಾಗೂ ತಾಲೂಕಿನ ಯೋಜನಾಧಿಕಾರಿಗಳಾದ ವಾಸಂತಿ ಅಮಿನ್ ಇವರ ಸಮ್ಮುಖದಲ್ಲಿ ವಾಹನ ಚಾಲಕರಿಗೆ ತಾಲೂಕು ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿಗಳಾದ ಡಾ|| ರಾಜೇಶ್ ಕಿಣಿ ರವರು ಪಿ.ಪಿ ಕಿಟ್ ವಿತರಣೆ ಮಾಡಿದರು. ಈ ಸಂದರ್ಭದಲ್ಲಿ ತಾಲೂಕಿನ ಹಿರಿಯ ಪತ್ರಕರ್ತರು, ಜಿ. ಯು. ಭಟ್ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಸೇವೆಯ ಬಗ್ಗೆ ಮೆಚ್ಚಿಗೆ ವ್ಯಕ್ತ ಪಡಿಸಿದರು. ತಾಲೂಕು ಆಸ್ಪತ್ರೆಯ ವೈದ್ಯಾಧಿಕಾರಿಗಳಾದ ಡಾ|| ಪ್ರಕಾಶ ನಾಯ್ಕ, ಡಾ|| ಮಹೇಶ ಬಿ ಶೆಟ್ಟಿ, ಡಾ|| ಕೃಷ್ಣ ಜಿ, ಡಾ|| ಅನುರಾಧಾ ಉಪಸ್ಥಿತರಿದ್ದು ಮೆಚ್ಚುಗೆ ವ್ಯಕ್ತಪಡಿಸಿ ಶುಭ ಕೋರಿದರು. ಹೊನ್ನಾವರವಲಯದ ಮೇಲ್ವಿಚಾರಕರಾದ ನಾಗರಾಜ ಕೆ. ಗೌಡ ರವರು ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.
Leave a Comment