ಹೊನ್ನಾವರ :
ಪಟ್ಟಣ ಪಂಚಾಯತ ವತಿಯಿಂದ ಹೊನ್ನಾವರದ ಮುಖ್ಯ ರಸ್ತೆಗಳಲ್ಲಿ ಕೆಮಿಕಲ್ ಸ್ಪ್ರೇ ಮಾಡುವ ಕಾರ್ಯಕ್ಕೆ ಚಾಲನೆ ದೊರೆತಿದೆ. ಇಂದಿನಿಂದ ಬೆಳಿಗ್ಗೆ 10 ಗಂಟೆಯ ನಂತರ ಅಗ್ನಿಶಾಮಕ ವಾಹನ ಪಟ್ಟಣದ ಮುಖ್ಯ ರಸ್ತೆಗಳಲ್ಲಿ ಕಾರ್ಯ ನಿರ್ವಹಿಸಲಿದೆ. ಉಳಿದಂತೆ ಪಟ್ಟಣದ ಸುತ್ತಮುತ್ತಲು ಪಟ್ಟಣ ಪಂಚಾಯತ ಸಿಬ್ಬಂದಿಗಳು ಸ್ಯಾನಿಟೈಸಿಂಗ ಮಾಡಲಿದ್ದಾರೆ.

ಈ ಬಗ್ಗೆ ಮಾಹಿತಿ ನೀಡಿದ ಪ.ಪಂ ಅಧ್ಯಕ್ಷರಾದ ಶಿವರಾಜ ಮೇಸ್ತರವರು ಹೊನ್ನಾವರದಲ್ಲಿ ಕೋವಿಡ್ನಿಂದ ಹೆಚ್ಚಿನ ಅನಾಹುತ ಸಂಭವಿಸಬಾರದೆಂಬ ದೃಷ್ಟಿಯಿಂದ ಅಗ್ನಿಶಾಮಕ ದಳದ ಸಹಾಯದೊಂದಿಗೆ ಪಟ್ಟಣದ ಮುಖ್ಯ ರಸ್ತೆಗಳಲ್ಲ ಕೆಮಿಕಲ್ ನೀರಿನ ಸಿಂಪಡಣೆಯನ್ನು ಪ್ರಾರಂಭಿಸಿದ್ದೆವೆ. ಕೇವಲ ನಾವು ಮಾತ್ರ ಸ್ಯಾನಿಟೈಸಿಂಗ ಮಾಡಿದರೆ ಪ್ರಯೋಜನವಿಲ್ಲ. ಪ್ರತಿಯೋಬ್ಬ ನಾಗರಿಕರು ಜವಾಬ್ದಾರಿ ವಹಿಸಿ ತಮ್ಮ ಮನೆಯ ಅಂಗಳ ಹಾಗೂ ರಸ್ತೆಗಳಲ್ಲಿ ಫಿನಾಯ್ಲ ನೀರುಗಳನ್ನು ಸಿಂಪಡಿಸಿ ಈ ಮಹಾಮಾರಿಯ ವಿರುದ್ಧ ಹೊರಾಟ ಮಾಡಲು ಸಹಕರಿಸಬೇಕಾಗಿ ವಿನಂತಿಸಿದರು.

Leave a Comment