ಹೊನ್ನಾವರ: ತಾಲೂಕಿನ ಕರ್ಕಿಕೋಡಿ ಸಮೀಪ ಇಸ್ಪೀಟ್ ಅಡ್ಡೆಯ ಮೇಲೆ ದಾಳಿ ನಡೆಸಿದ ಪೋಲಿಸರು ೭೦೬೦೦ರೂಪಾಯಿ ನಗದು ಹಾಗೂ ೧೨ ದ್ವಿಚಕ್ರವಾಹನ ವಶಪಡಿಸಿಕೊಂಡು ೧೧ ಜನರ ಮೇಲೆ ಪ್ರಕರಣ ದಾಖಲಾದ ಘಟನೆ ವರದಿಯಾಗಿದೆ.

ಒಂದಡೆ ಕೊರೊನಾ ಸೋಂಕು ಹರಡುತ್ತಿರುವ ಹಿನ್ನಲೆಯಲ್ಲಿ ಸರ್ಕಾರ ಲಾಕ್ ಡೌನ್ ಆದೇಶ ಜಾರಿಯಲ್ಲಿದ್ದರೂ ಯಾವುದೇ ಸುರಕ್ಷತಾ ಕ್ರಮ ಕೈಗೊಳ್ಳದೇ ಮ ಸಾಮಾಜಿಕ ಅಂತರ ಇಲ್ಲದೆ ತಮ್ಮ ಲಾಭಕೋಸ್ಕರ ಇಸ್ಪೀಟ್ ಎಲೆ ಗಳ ಮೇಲೆ ಪಂಥ ಕಟ್ಟಿ ಜೂಜಾಟ ಆಡುತ್ತಿದ್ದ 11 ಜನರು ಹಾಗೂ ಪಂಥ ವಾಗಿ ಕಟ್ಟಿದ್ದ 70600 ರೂಪಾಯಿ ಮತ್ತು 12 ಮೋಟಾರ್ ಸೈಕಲನ್ನು ವಶಕ್ಕೆ ಪಡೆದು ಉದಯ್ ನಾಯ್ಕ, ನಾಗರಾಜ್ ಶೆಟ್ಟಿ, ಪಾಂಡುರಂಗ ಪಟಗಾರ, ನಾಗರಾಜ್ ಮಡಿವಾಳ, ಶೇಖರ್ ನಾಯ್ಕ,ವಿಶ್ವೇಶ್ವರಯ್ಯ ಭಟ್,ಮಂಜುನಾಥ್ ಶೆಟ್ಟಿ, ಸಂತೋಷ್ ಗೌಡ, ಶೇಕುಂಜಿ ಸಾಬ,ಸುಬ್ರಾಯ ಗೌಡ, ಸಂತೋಷ ತಾಂಡೇಲ್ ಇವರನ್ನು ವಶಕ್ಕೆ ಪಡೆದುಕೊಂಡು ಹೊನ್ನಾವರ ಪೋಲಿಸ್ ಠಾಣಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
Leave a Comment