ಹೊನ್ನಾವರ :ಪಟ್ಟಣದಲ್ಲಿ ಅನಗತ್ಯವಾಗಿ ತಿರುಗಾಟ ನಡೆಸುವ ವಾಹನಗಳಿಗೆ ಪೋಲಿಸರಿಂದ ಶಾಕ್ ನೂರಕ್ಕೂ ಅಧಿಕ ವಾಹನ ಸವಾರರಿಗೆ ಪೋಲಿಸರು ಎಚ್ಚರಿಕೆ ನೀಡಿ ಕಳುಹಿಸಿದ್ದಾರೆ.
ಪಟ್ಟಣದಲ್ಲಿ ಅಗತ್ಯ ವಸ್ತುಗಳ ಖರೀದಿ ಬೆಳಿಗ್ಗೆ 6 ರಿಂದ 10 ಗಂಟೆಯವರೆಗೆ ಅವಕಾಶ ನಿಡಿದೆ. ಇದರ ಹೊರತಾಗಿ 10 ಗಂಟೆಯ ನಂತರವು ಅನಗತ್ಯವಾಗಿ ತಿರುಗಾಡುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿರುವುದನ್ನು ಗಮನಿಸಿದ ಪೋಲಿಸ್ ಇಲಾಖೆ ಪಟ್ಟಣದಲ್ಲಿ ಅನಗತ್ಯವಾಗಿ ತಿರುಗಾಟ ನಡೆಸುವ ವಾಹನಗಳಿಗೆ ಶಾಕ್ ನೀಡಲು ಮುಂದಾಗಿದ್ದಾರೆ. ಶನಿವಾರ ಸಿ.ಪಿ.ಐ ಶ್ರೀಧರ ಎಸ್ ಆರ್, ಪಿ.ಎಸ್.ಐ ಶಶಿಕುಮಾರ, ಪಿ.ಎಸ್.ಐ ಸವಿತ್ರಿ ನಾಯ್ಕ ಹಾಗೂ ಸಿಬ್ಬಂದಿ ವರ್ಗದವರು ಬೆಳಿಗ್ಗೆ 10 ಗಂಟೆಯ ನಂತರ ಅನಗತ್ಯವಾಗಿ ತಿರುಗಾಡುತ್ತಿದ್ದ ೭೫ಕ್ಕೂ ಅಧಿಕ ದ್ವೀಚಕ್ರ ವಾಹನಗಳನ್ನು ತಡೆದು ನಿಲ್ಲಿಸಿ ಖಡಕ್ ಎಚ್ಚರಿಕೆ ನಿಡಿದ ಬಗ್ಗೆ ವರಧಿಯಾಗಿದೆ.
ವಾಹನ ಸವಾರರಲ್ಲಿ ಈ ಕುರಿತು ಮಾತನಾಡಿದ ಸಿ.ಪಿ.ಐ ಶ್ರೀಧರ ಎಸ್ ಆರ್ ಕೋರೊನಾ ನಿಯಂತ್ರಣಕ್ಕಾಗಿ ಸರಕಾರ ಮೇ 24ರವರೆಗೆ ಲಾಕ್ಡೌನ್ ಮಾಡಲು ಆದೇಶಿಸಿದೆ. ಆದರೆ 10 ಗಂಟೆಯ ನಂತರವು ಸಹ ತುರ್ತು ಸೇವೆ ಹೊರತಾಗಿ ಹೊರ ಬರುವವರ ಸಂಖ್ಯೆ ಹೆಚ್ಚಾಗುತ್ತಿರುವುದು ಇಲಾಖೆಯ ಗಮನಕ್ಕೆ ಬಂದಿದೆ. ನಾಳೆಯಿಂದ ಇದು ಪುನರಾವರ್ತನೆ ಆದಲ್ಲಿ ಅಂತಹ ವಾಹನಗಳನ್ನು ತಡೆದು ಎಫ್.ಐ.ಆರ್ ದಾಖಲಿಸಿ ಸೀಸ್ ಮಾಡಲಾಗುವುದು ಎಂದು ಎಚ್ಚರಿಕೆಯನ್ನು ನೀಡಿದ್ದಾರೆ. ಇದೇ ರೀತಿ ಮಂಕಿ ಠಾಣಾ ವ್ಯಾಪ್ತಿಯಲ್ಲಿ ಪರಮಾನಂದ ಕೊಣ್ಣುರು ನೇತ್ರತ್ವದಲ್ಲಿ ವಾಹನವನ್ನು ತಡೆದು ನಂತರ ವಾಹನಗಳ ದಾಖಲೆಗಳನ್ನು ಪರಿಶಿಲಿಸಿ ಎಚ್ಚರಿಕೆ ನೀಡಿ ಬಿಡುಗಡೆ ಮಾಡಿದ್ದಾರೆ.
Leave a Comment