ಹೊನ್ನಾವರ: ತಾಲೂಕ ಆಸ್ಪತ್ರೆಯಲ್ಲಿ ಜಿಲ್ಲಾ ಪಂಚಾಯತ ಮಾಜಿ ಸದಸ್ಯ ಸುಬ್ರಹ್ಮಣ್ಯ ಶಾಸ್ತ್ರಿ ಸಹಾಯಹಸ್ತದಿಂದ ನಿರ್ಮಾಣವಾದ ಕೋವಿಡ್ ಮಾಹಿತಿ ಕೇಂದ್ರವನ್ನು ಶಾಸಕ ದಿನಕರ ಶೆಟ್ಟಿ ಚಾಲನೆ ನೀಡಿದರು.ನಂತರ ಮಾತನಾಡಿ ಒಂದು ಉತ್ತಮ ಸಮಾಜಮುಖಿ ಕಾರ್ಯವಾಗಿದ್ದು,

ಜಿಲ್ಲೆಯ ಬೇರೆ ಆಸ್ಪತ್ರೆಯಲ್ಲಿಯೂ ಅಲ್ಲಿಯ ಕುಂದುಕೊರತೆ ಆಲಿಸಿ ಸಮಸ್ಯೆ ಬಗೆಹರಿಸಿದರೆ ಸಾರ್ವಜನಿಕರಿಗೆ ಇನ್ನು ಹೆಚ್ಚಿನ ಅನೂಕೂಲವಾಗಲಿದೆ. ತಾಲೂಕ ಆಸ್ಪತ್ರೆಯಲ್ಲಿ ಕೋವಿಡ್ ಚಿಕಿತ್ಸೆ ಉತ್ತಮ ರೀತಿಯಲ್ಲಿ ನೀಡಲಾಗುತ್ತಿದೆ. ವೈದ್ಯರು, ವೈದ್ಯಕೀಯತೆರ ಸಿಬ್ಬಮದಿಗಳು ಉತ್ತಮವಾಗಿ ಸ್ಪಂದಿಸುತ್ತಿದ್ದಾರೆ. ಕ್ಷೇತ್ರದ ಸಾರ್ವಜನಿಕರ ಪರವಾಗಿ ಅಭಿನಂದಿಸಿದರು.ಜಿಲ್ಲಾ ಪಂಚಾಯತ ಸದಸ್ಯೆ ಶ್ರೀಕಲಾ ಶಾಸ್ತಿ ಮಾತನಾಡಿ ಸ್ವತಃ ನಾನು ಹಾಗೂ ನಮ್ಮ ಮನೆಯವರು ಈ ಕಾಯಿಲೆಯಿಂದ ತಾಲೂಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ದೇವೆ. ಸೋಂಕಿನ ಲಕ್ಷಣ ಕಂಡುಬಂದಾಗ ಆಸ್ಪತ್ರೆಗೆ ಆಗಮಿಸಿ ಚಿಕಿತ್ಸೆ ಪಡೆಯಿರಿ.

ನಾಳೆಯಿಂದ ಸರ್ಕಾರ ಕೋವಿಡ್ ವಾಕ್ಸಿನ್ ನೀಡಲಾಗುತ್ತದೆ. ವೈದ್ಯರ ಸಲಹೆ ಪಾಲಿಸಿ. ಅನಗತ್ಯವಾಗಿ ಮನೆಯಿಂದ ಹೊರಬರಬೇಡಿ. ಮನೆಯಲ್ಲಿದ್ದು ನಿಮ್ಮ ಹಾಗೂ ನಿಮ್ಮ ಮನೆಯವರ ಆರೊಗ್ಯ ಕಾಪಾಡಿಕೊಳ್ಳುವಂತೆ ಸಲಹೆ ನೀಡಿದರು.ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ ಮಾಜಿ ಸದಸ್ಯ ಶ್ರೀಕಲಾ ಶಾಸ್ತ್ರಿ, ಬಿಜೆಪಿ ಮಂಡಲಧ್ಯಕ್ಷ ರಾಜೇಶ ಭಂಡಾರಿ, ಆರೊಗ್ಯಧಿಕಾರಿ ಡಾ. ರಾಜೇಶ ಕಿಣಿ ಸೇರಿದಂತೆ ವೈದ್ಯರು ಹಾಗೂ ಸಿಬ್ಬಂದಿವರ್ಗದವರು ಹಾಜರಿದ್ದರು.
Leave a Comment